Search
  • Follow NativePlanet
Share
» »ಪುರುಷರು ಮಹಿಳೆಯರ ವೇಷ ಧರಿಸಿ ಪೂಜೆಗಳನ್ನು ಮಾಡುವ ದೇವಾಲಯವಿದು

ಪುರುಷರು ಮಹಿಳೆಯರ ವೇಷ ಧರಿಸಿ ಪೂಜೆಗಳನ್ನು ಮಾಡುವ ದೇವಾಲಯವಿದು

ಸಾಮಾನ್ಯವಾಗಿ ದೇವಾಲಯಗಳಲ್ಲಿ ಪುರುಷರು ಹಾಗೂ ಮಹಿಳೆಯರು ಎಂಬ ಭೇದ-ಭಾವವಿಲ್ಲದೇ ಭಕ್ತಿಯಿಂದ ದೇವಾಲಯಕ್ಕೆ ಭೇಟಿ ನೀಡುತ್ತೇವೆ. ಕೆಲವು ದೇವಾಲಯಗಳಲ್ಲಿ ಮಹಿಳೆಯರಿಗೇ ಪ್ರತ್ಯೇಕವಾದ ದೇವಾಲಯಗಳಿರುತ್ತವೆ. ಇಲ್ಲೊಂದು ದೇವಾಲಯವಿದೆ ಅಲ್ಲಿ ಪುರುಷರು ಮಹ

ಸಾಮಾನ್ಯವಾಗಿ ದೇವಾಲಯಗಳಲ್ಲಿ ಪುರುಷರು ಹಾಗೂ ಮಹಿಳೆಯರು ಎಂಬ ಭೇದ-ಭಾವವಿಲ್ಲದೇ ಭಕ್ತಿಯಿಂದ ದೇವಾಲಯಕ್ಕೆ ಭೇಟಿ ನೀಡುತ್ತೇವೆ. ಕೆಲವು ದೇವಾಲಯಗಳಲ್ಲಿ ಮಹಿಳೆಯರಿಗೇ ಪ್ರತ್ಯೇಕವಾದ ದೇವಾಲಯಗಳಿರುತ್ತವೆ. ಇಲ್ಲೊಂದು ದೇವಾಲಯವಿದೆ ಅಲ್ಲಿ ಪುರುಷರು ಮಹಿಳೆಯರಂತೆ ಸೀರೆ ಧರಿಸಿ, ಮೈ ತುಂಬ ಆಭರಣಗಳನ್ನು ಧರಿಸಿ ಶೃಂಗಾರಗೊಂಡ ವಧುವಿನಂತೆ ತಯಾರಾಗುತ್ತಾರೆ.

ಈ ದೇವಿಯ ದೇವಾಲಯವಿರುವುದು ಕೇರಳದ ಅರಬ್ಬೀ ಸಮುದ್ರದ ನದಿ ತೀರದ ಹಳೆಯ ಸಮುದ್ರ ಬಂದರು ಪ್ರದೇಶದಲ್ಲಿ. ಕೊಟ್ಟಂಕುಳಂಗರ ದೇವಾಲಯವು ಭಗವತಿ ದೇವತೆಗೆ ಸರ್ಮಪಿತವಾದ ಹಿಂದೂ ದೇವಾಲಯವಾಗಿದೆ. ಹೀಗೆ ಪುರುಷರು ಮಹಿಳೆಯರಂತೆ ಶೃಂಗಾರ ಮಾಡಿಕೊಂಡು ಈ ದೇವಿಗೆ ಪೂಜೆ ಮಾಡುವುದು ಏಕೆ? ಎಂಬ ಪ್ರಶ್ನೆ ಸಾಮಾನ್ಯವಾಗಿ ಎಲ್ಲರಲ್ಲೂ ಕೂಡ ಮೂಡುವಂತಹದೇ.....

ಇದಕ್ಕೆ ಕಾರಣವೇನು? ಈ ದೇವಾಲಯದ ಇತಿಹಾಸವೇನು ಎಂಬುದನ್ನು ಲೇಖನದ ಮೂಲಕ ತಿಳಿಯೋಣ.

ಪುರುಷರು ಮಹಿಳೆಯರ ವೇಷ ಧರಿಸಿ ಪೂಜೆಗಳನ್ನು ಮಾಡುವ ದೇವಾಲಯವಿದು

ಪುರುಷರು ಮಹಿಳೆಯರ ವೇಷ ಧರಿಸಿ ಪೂಜೆಗಳನ್ನು ಮಾಡುವ ದೇವಾಲಯವಿದು

10 ನೇ ಶತಮಾನದ ದ್ರಾವಿಡ ಭಾಷೆ ಮಾತಾನಾಡುವವರು ಈ ಪ್ರದೇಶದಲ್ಲಿದ್ದಾರೆ. ಈ ಆಶ್ಚರ್ಯಕರವಾದ ದೇವಾಲಯವಿರುವುದು ಕೇರಳ ರಾಜ್ಯದ ಕೊಲ್ಲಾಂ ಜಿಲ್ಲೆಯ ಕೊಟ್ಟಂಕುಳಂಗರನಲ್ಲಿ.

pc:youtube

ಪುರುಷರು ಮಹಿಳೆಯರ ವೇಷ ಧರಿಸಿ ಪೂಜೆಗಳನ್ನು ಮಾಡುವ ದೇವಾಲಯವಿದು

ಪುರುಷರು ಮಹಿಳೆಯರ ವೇಷ ಧರಿಸಿ ಪೂಜೆಗಳನ್ನು ಮಾಡುವ ದೇವಾಲಯವಿದು

ಕೊಲ್ಲಾಂ ಜಿಲ್ಲೆಯ ಕೊಟ್ಟಂಕುಳಂಗರನಲ್ಲಿನ ಈ ದೇವಿ ದೇವಾಲಯದಲ್ಲಿ ಪುರುಷರು ಮಹಿಳೆಯರಂತೆ ಸೀರೆ ಹಾಗೂ ಆಭರಣವನ್ನು ಧರಿಸಿಕೊಳ್ಳುವುದು ಅಕ್ಷರಶಃ ನಿಜ.

pc:youtube

ಪುರುಷರು ಮಹಿಳೆಯರ ವೇಷ ಧರಿಸಿ ಪೂಜೆಗಳನ್ನು ಮಾಡುವ ದೇವಾಲಯವಿದು

ಪುರುಷರು ಮಹಿಳೆಯರ ವೇಷ ಧರಿಸಿ ಪೂಜೆಗಳನ್ನು ಮಾಡುವ ದೇವಾಲಯವಿದು

ದೀಪವನ್ನು ಬೆಳಗಿ ದೇವರಿಗೆ ಭಕ್ತಿಯಿಂದ ಆರಾಧನೆಯನ್ನು ಮಾಡುತ್ತಾರೆ. ಅಷ್ಟೇ ಅಲ್ಲದೇ ಪುರುಷರು ಮಹಿಳೆಯರಂತೆ ಅಲಂಕಾರ ಮಾಡಿಕೊಳ್ಳಲು ಪ್ರತ್ಯೇಕವಾದ ಕೊಠಡಿ ಕೂಡ ಇದೆ.

pc:youtube

ಪುರುಷರು ಮಹಿಳೆಯರ ವೇಷ ಧರಿಸಿ ಪೂಜೆಗಳನ್ನು ಮಾಡುವ ದೇವಾಲಯವಿದು

ಪುರುಷರು ಮಹಿಳೆಯರ ವೇಷ ಧರಿಸಿ ಪೂಜೆಗಳನ್ನು ಮಾಡುವ ದೇವಾಲಯವಿದು

ವಿದ್ಯೆ, ಆರೋಗ್ಯ, ಸಂಪತ್ತು, ಉದ್ಯೋಗ, ವಿವಾಹ ಇನ್ನೂ ಹಲವಾರು ಕೋರಿಕೆಗಳ ಬಗ್ಗೆ ದೇವಿಯಲ್ಲಿ ಕೇಳಿಕೊಳ್ಳುತ್ತಾರೆ. ವಿಚಿತ್ರವಾದ ಈ ದೇವಾಲಯದ ಕಥೆಯ ಬಗ್ಗೆ ತಿಳಿಯೋಣ.

pc:youtube

ಪುರುಷರು ಮಹಿಳೆಯರ ವೇಷ ಧರಿಸಿ ಪೂಜೆಗಳನ್ನು ಮಾಡುವ ದೇವಾಲಯವಿದು

ಪುರುಷರು ಮಹಿಳೆಯರ ವೇಷ ಧರಿಸಿ ಪೂಜೆಗಳನ್ನು ಮಾಡುವ ದೇವಾಲಯವಿದು

ಒಮ್ಮೆ ದನವನ್ನು ಕಾಯುವ ಕೆಲವು ಪುರುಷರು ಮಹಿಳೆಯರ ಬಟ್ಟೆಗಳನ್ನು ಧರಿಸಿ ಒಂದು ಕಲ್ಲಿಗೆ ಹೂವಿನಿಂದ ಪೂಜೆಗಳನ್ನು ಮಾಡಿದರಂತೆ.

pc:youtube

ಪುರುಷರು ಮಹಿಳೆಯರ ವೇಷ ಧರಿಸಿ ಪೂಜೆಗಳನ್ನು ಮಾಡುವ ದೇವಾಲಯವಿದು

ಪುರುಷರು ಮಹಿಳೆಯರ ವೇಷ ಧರಿಸಿ ಪೂಜೆಗಳನ್ನು ಮಾಡುವ ದೇವಾಲಯವಿದು

ಆ ಸಮಯದಲ್ಲಿ ಆ ಕಲ್ಲಿನ ಸುತ್ತಲೂ ಒಂದು ಆಗೋಚರವಾದ ಶಕ್ತಿಯು ಸುತ್ತುತ್ತಾ ಇರುವುದು ಅಲ್ಲಿನ ಸ್ಥಳೀಯರು ಕಂಡರಂತೆ. ನಂತರ ಈ ಕಲ್ಲಿನಲ್ಲಿ ಯಾವುದೋ ಒಂದು ಅಪೂರ್ವ ಶಕ್ತಿ ಅಡಗಿದೆ ಎಂದು ಸ್ಥಳೀಯರು ಆ ಕಲ್ಲಿಗೆ ದೇವಾಲಯವನ್ನು ನಿರ್ಮಿಸಿದರಂತೆ.

pc:youtube

ಪುರುಷರು ಮಹಿಳೆಯರ ವೇಷ ಧರಿಸಿ ಪೂಜೆಗಳನ್ನು ಮಾಡುವ ದೇವಾಲಯವಿದು

ಪುರುಷರು ಮಹಿಳೆಯರ ವೇಷ ಧರಿಸಿ ಪೂಜೆಗಳನ್ನು ಮಾಡುವ ದೇವಾಲಯವಿದು

ಅಂದಿನಿಂದ ಪುರುಷರು ಮಹಿಳೆಯರ ವೇಶ ಧರಿಸಿ ಈ ದೇವಾಲಯದ ಶಕ್ತಿಯುತವಾದ ದೇವಿಯನ್ನು ಆರಾಧಿಸುತ್ತಾರೆ.

pc:youtube

ಪುರುಷರು ಮಹಿಳೆಯರ ವೇಷ ಧರಿಸಿ ಪೂಜೆಗಳನ್ನು ಮಾಡುವ ದೇವಾಲಯವಿದು

ಪುರುಷರು ಮಹಿಳೆಯರ ವೇಷ ಧರಿಸಿ ಪೂಜೆಗಳನ್ನು ಮಾಡುವ ದೇವಾಲಯವಿದು

ಈ ದೇವಾಲಯಕ್ಕೆ ಇನ್ನೊಂದು ಕಥೆ ಕೂಡ ಇದೆ ಅದೇನೆಂದರೆ ಒಮ್ಮೆ ಕುಬ್ಬರಿ ಕಾಯಿಯನ್ನು ಒಂದು ಕಲ್ಲಿಗೆ ಒಡೆದರಂತೆ ಆದರೆ ಆ ಕುಬ್ಬರಿ ಕಾಯಿಯಿಂದ ರಕ್ತ ಸುರಿಯುವುದು ಮೊದಲಾಯಿತು.

pc:youtube

ಪುರುಷರು ಮಹಿಳೆಯರ ವೇಷ ಧರಿಸಿ ಪೂಜೆಗಳನ್ನು ಮಾಡುವ ದೇವಾಲಯವಿದು

ಪುರುಷರು ಮಹಿಳೆಯರ ವೇಷ ಧರಿಸಿ ಪೂಜೆಗಳನ್ನು ಮಾಡುವ ದೇವಾಲಯವಿದು

ಹೀಗಾಗಿ ಅಲ್ಲಿನ ಪ್ರಜೆಗಳು ಆ ಕಲ್ಲಿನಲ್ಲಿ ಅತೀತವಾದ ಶಕ್ತಿಗಳಿವೆ ಎಂದು ಭಾವಿಸಿ ಪೂಜೆಗಳನ್ನು ಪ್ರಾರಂಭಿಸಿದರಂತೆ. ವಿಶೇಷವೆನೆಂದರೆ ಆ ಕಲ್ಲು ದಿನೇ ದಿನೇ ದೊಡ್ಡದಾಗುತ್ತಾ ಇದೆ.

pc:youtube

ಪುರುಷರು ಮಹಿಳೆಯರ ವೇಷ ಧರಿಸಿ ಪೂಜೆಗಳನ್ನು ಮಾಡುವ ದೇವಾಲಯವಿದು

ಪುರುಷರು ಮಹಿಳೆಯರ ವೇಷ ಧರಿಸಿ ಪೂಜೆಗಳನ್ನು ಮಾಡುವ ದೇವಾಲಯವಿದು

ಕೊಟ್ಟಂಕುಳಂಗರ ಉತ್ಸವವು ಪ್ರತಿ ವರ್ಷ ಈ ದೇವಾಲಯದಲ್ಲಿ ನಡೆಯುತ್ತದೆ. ಈ ವೈಭವದಿಂದ ಕೂಡಿದ ಉತ್ಸವದಲ್ಲಿ ಮಹಿಳೆಯ ಉಡುಪು ಧರಿಸಿ ಪುರುಷರು ಭಾಗವಹಿಸುತ್ತಾರೆ.

pc:youtube

ಪುರುಷರು ಮಹಿಳೆಯರ ವೇಷ ಧರಿಸಿ ಪೂಜೆಗಳನ್ನು ಮಾಡುವ ದೇವಾಲಯವಿದು

ಪುರುಷರು ಮಹಿಳೆಯರ ವೇಷ ಧರಿಸಿ ಪೂಜೆಗಳನ್ನು ಮಾಡುವ ದೇವಾಲಯವಿದು

ಇದೊಂದು ಸಾಂಪ್ರದಾಯಿಕವಾದ ಉತ್ಸವವಾಗಿದ್ದು, ರಾತ್ರಿಯ ಸಮಯದಲ್ಲಿ ದೀಪಗಳನ್ನು ಹಚ್ಚಿ ಮೆರವಣಿಗೆಗಳು ನಡೆಯುತ್ತವೆ.

pc:youtube

ದೇವಾಲಯದ ಪ್ರವೇಶ ಸಮಯ

ದೇವಾಲಯದ ಪ್ರವೇಶ ಸಮಯ

ಕೊಟ್ಟಂಕುಳಂಗರನ ಈ ಭಗವತಿ ದೇವಾಲಯವು ಭಕ್ತರಿಗೆ ಬೆಳಗ್ಗೆ 5 ಗಂಟೆಯಿಂದ ರಾತ್ರಿ 8:30 ರವರೆಗೆ ದರ್ಶನ ಭಾಗ್ಯವನ್ನು ನೀಡುತ್ತಾರೆ.

pc:youtube

ತಲುಪುವ ಬಗೆ?

ತಲುಪುವ ಬಗೆ?

ವಿಮಾನ ಮಾರ್ಗದ ಮೂಲಕ: ಈ ಆಶ್ಚರ್ಯಕರವಾದ ದೇವಾಲಯಕ್ಕೆ ಭೇಟಿ ನೀಡಲು ಸಮೀಪವಾದ ವಿಮಾನ ನಿಲ್ದಾಣವೆಂದರೆ ತಿರುವನಂತಪುರಂ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ. ಇಲ್ಲಿಂದ ಸುಮಾರು 49 ಕಿ,ಮೀ ಅಂತರದಲ್ಲಿ ಈ ದೇವಾಲಯವಿದೆ.

pc:youtube

ದೇವಾಲಯದ ವಿಳಾಸ

ದೇವಾಲಯದ ವಿಳಾಸ

ಶ್ರೀ ಕೊಟ್ಟಂಕುಳಂಗರ ದೇವಿ ದೇವಾಲಯ, ಕೊಟ್ಟಂಕುಳಂಗರ (ಚವಾರ ) ಕೊಳಂ, ಕೇರಳ-691583

pc:youtube

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+