Search
  • Follow NativePlanet
Share
» »ಮುಂಗಾರು ಮಳೆಗೆ ಮೈದುಂಬಿಕೊಂಡ ʼಹೊಗೇನಕಲ್ ಫಾಲ್ಸ್‌ʼ; ಜಲಪಾತದ ಬಗ್ಗೆ ತಿಳಿದುಕೊಳ್ಳಬೇಕಾದ ಸಂಗತಿಗಳಿವು…

ಮುಂಗಾರು ಮಳೆಗೆ ಮೈದುಂಬಿಕೊಂಡ ʼಹೊಗೇನಕಲ್ ಫಾಲ್ಸ್‌ʼ; ಜಲಪಾತದ ಬಗ್ಗೆ ತಿಳಿದುಕೊಳ್ಳಬೇಕಾದ ಸಂಗತಿಗಳಿವು…

ನೀವು ಪ್ರಕೃತಿ ಪ್ರಿಯರಾಗಿದ್ದರೆ ಮಳೆಗಾಲದಲ್ಲಿ ಹೊಗೇನಕಲ್ ಜಲಪಾತಕ್ಕೆ ತೆರಳಿ. ದಕ್ಷಿಣ ಭಾರತದ ನಯಾಗರಾ ಎಂದೇ ಕರೆಯಲ್ಪಡುವ ಇದು ಕರ್ನಾಟಕದಲ್ಲಿ ಭೇಟಿ ನೀಡಲೇಬೇಕಾದ ಅತ್ಯುತ್ತಮವಾದ ಸ್ಥಳಗಳಲ್ಲಿ ಒಂದಾಗಿದೆ. ಚೆನ್ನಾಗಿ ಮಳೆ ಬಂದಿರುವುದರಿಂದ ಸದ್ಯ ಜಲಪಾತ ಮೈದುಂಬಿಕೊಳ್ಳುತ್ತಿದ್ದು, ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ. ಒಂದು ಬಾರಿ ಈ ಜಲಪಾತದ ಸೌಂದರ್ಯ ನೋಡಿದರೆ ಇಲ್ಲಿಗೆ ನಾವು ಮೊದಲೇ ಏಕೆ ಬಂದಿಲ್ಲ ಎಂದು ಅಂದುಕೊಳ್ಳುತ್ತೀರಿ. ಹಾಗಾದರೆ ಪ್ರಕೃತಿಯ ನಡುವೆ ಇರುವ ಈ ಜಲಪಾತಕ್ಕೆ ಹೇಗೆ ಹೋಗಬಹುದು?, ಇಲ್ಲಿ ಏನೆಲ್ಲಾ ಇದೆ ಎಂಬುದನ್ನು ನಾವು ತಿಳಿಯೋಣ...

ಬೃಹತ್ ಬಂಡೆಗಳ ಮೇಲೆ ಸಮಾನವಾಗಿ ಬೀಳುವ ನೀರು

ತಮಿಳುನಾಡು ಮತ್ತು ಕರ್ನಾಟಕದ ಗಡಿಯಲ್ಲಿರುವ ಹೊಗೇನಕಲ್ ಜಲಪಾತವು ಅತ್ಯಂತ ಸುಂದರವಾದ ಸ್ಥಳಗಳಲ್ಲಿ ಒಂದಾಗಿದೆ. ಹೊಗೇನಕಲ್ ಜಲಪಾತವನ್ನು ನಯಾಗರಾ ಜಲಪಾತಕ್ಕೆ ಹೋಲಿಸಲಾಗುತ್ತದೆ. ಆದರೆ ಇದು ಅದಕ್ಕಿಂತ ಕಡಿಮೆಯಿಲ್ಲ. ಇಲ್ಲಿಯೂ ಬೃಹತ್ ಬಂಡೆಗಳ ಮೇಲೆ ನೀರು ಸಮಾನವಾಗಿ ಬೀಳುತ್ತದೆ. ಹೊಗೇನಕಲ್ ಜಲಪಾತವು ಪ್ರಕೃತಿ ಪ್ರಿಯರಿಗೆ ಹೇಳಿ ಮಾಡಿಸಿದ ತಾಣವಾಗಿದೆ. ಸಾಹಸವನ್ನು ಇಷ್ಟಪಡುವವರಿಗೆ ಇದು ಉತ್ತಮ ಸ್ಥಳವಾಗಿದೆ. ನೀವು ಈ ಜಲಪಾತಕ್ಕೆ ಭೇಟಿ ನೀಡಲು ಯೋಜಿಸುತ್ತಿದ್ದರೆ, ಇಂದು ನಾವು ನಿಮಗೆ ಕೆಲವು ಸಲಹೆಗಳು ಮತ್ತು ಮಾಹಿತಿಯನ್ನು ನೀಡುತ್ತಿದ್ದೇವೆ.

ಯಾವ ಸಮಯ ಉತ್ತಮ?

ಬೆಂಗಳೂರಿನಿಂದ ಕೇವಲ 127 ಕಿ.ಮೀ ದೂರದಲ್ಲಿದೆ ಈ ಜಲಪಾತ. ಸಾಮಾನ್ಯವಾಗಿ ಬೇಸಿಗೆ ಬಂತೆಂದರೆ ನಗರದ ಶಾಖದಿಂದ ಪಾರಾಗಲು ಜನರು ಇಲ್ಲಿಗೆ ಓಡೊಡಿ ಬರುತ್ತಾರೆ. ಆದರೆ ವಿಶೇಷವಾಗಿ ಮಳೆಗಾಲದಲ್ಲಿ ಮೈದುಂಬಿ ಹರಿಯುವುದರಿಂದ ಆ ಸಮಯದಲ್ಲಿ ಜಲಪಾತ ನೋಡುವುದೇ ಸೊಗಸು. ಸ್ಥಳೀಯ ಸಸ್ಯ ಮತ್ತು ಪ್ರಾಣಿಗಳನ್ನು ಅನ್ವೇಷಿಸಲು ಮತ್ತು ವೀಕ್ಷಿಸಲು ಪ್ರಕೃತಿ ಉತ್ಸಾಹಿಗಳಿಗೆ ಇದು ಉತ್ತಮ ಸ್ಥಳವಾಗಿದೆ. ಮಳೆಗಾಲದ ನಂತರ, ಅಕ್ಟೋಬರ್‌ನಿಂದ ಮಾರ್ಚ್‌ವರೆಗೆ, ನೀರಿನ ಹರಿವು ಹೇರಳವಾಗಿರುತ್ತದೆ. ಮಾನ್ಸೂನ್ ಸಮಯದಲ್ಲಿ ಪ್ರವಾಹ ಹೆಚ್ಚಿರುವುದರಿಂದ ಈಜುವುದು ಅಪಾಯಕಾರಿ. ಆದ್ದರಿಂದ ಯಾವಾಗಲೂ ಸ್ಥಳೀಯರ ಎಚ್ಚರಿಕೆಗಳು ಮತ್ತು ಸಲಹೆಗಳನ್ನು ಗಮನಿಸಿ.

ಕೊರಾಕಲ್ ರೈಡ್‌

ನದಿಯ ನೀರು ಶಾಂತವಾಗಿ ಸುರಕ್ಷಿತವಾಗಿದ್ದಾಗ ದೋಣಿಯಲ್ಲಿ ಸವಾರಿ ಮಾಡುವುದು ಅತ್ಯಂತ ಜನಪ್ರಿಯ ಚಟುವಟಿಕೆಗಳಲ್ಲಿ ಒಂದಾಗಿದೆ. ಬಿದಿರಿನಿಂದ ಮಾಡಿದ ಮತ್ತು ಎಮ್ಮೆ ಚರ್ಮ ಅಥವಾ ಪ್ಲಾಸ್ಟಿಕ್‌ನಿಂದ ಲೇಪಿತವಾದ ಸಾಂಪ್ರದಾಯಿಕ ಸುತ್ತಿನ ಬುಟ್ಟಿ ದೋಣಿಗಳಲ್ಲಿ ಸವಾರಿ ಮಾಡುವುದು ಜಲಪಾತವನ್ನು ವೀಕ್ಷಿಸುವುದಕ್ಕೆ ಒಂದೊಳ್ಳೆ ಮಾರ್ಗವಾಗಿದೆ. ಕೊರಾಕಲ್ ರೈಡ್‌ ಜಲಪಾತ ಮತ್ತು ಸುತ್ತಮುತ್ತಲಿನ ಕಮರಿಗಳನ್ನು ಹತ್ತಿರದಿಂದ ನೋಡಲು ಸಹಾಯ ಮಾಡುತ್ತದೆ. ಪ್ರಕೃತಿಯನ್ನು ಇಷ್ಟಪಡುವ ಜನರು ಜಲಪಾತದ ಸುತ್ತಲೂ ಆರಾಮವಾಗಿ ಅಡ್ಡಾಡಬಹುದು.

ಹೊಗೇನಕಲ್ ನೀರಿನ ಮಹತ್ವ

ಜಲಪಾತದ ಸನಿಹದಲ್ಲಿ ಹಲವಾರು ಗಿಡಮೂಲಿಕೆಗಳು ಮತ್ತು ಔಷಧೀಯ ಸಸ್ಯಗಳು ಇರುವುದರಿಂದ ಹೊಗೇನಕಲ್ ಫಾಲ್ಸ್‌ ನೀರು ಔಷಧೀಯ ಗುಣಗಳನ್ನು ಹೊಂದಿದೆ ಎಂದು ಪರಿಗಣಿಸಲಾಗಿದೆ. ಇದು ಕೆಲ ಕಾಯಿಲೆಗಳನ್ನು ನಿವಾರಿಸುತ್ತದೆಯಂತೆ. ಆದ್ದರಿಂದ ಹೊಗೇನಕಲ್ ಜಲಪಾತದ ನೀರಿನಲ್ಲಿ ಸ್ನಾನ ಮಾಡಲು ಮತ್ತು ಅದರ ಆರೋಗ್ಯ ಪ್ರಯೋಜನಗಳನ್ನು ಆನಂದಿಸಲು ಜನರು ದೂರದೂರುಗಳಿಂದ ಪ್ರಯಾಣಿಸುತ್ತಾರೆ.

-

ಮಸಾಜ್‌-ಮೀನು ಬೇಯಿಸುವ ತನಕ

ನೀವಿಲ್ಲಿ ತೈಲ ಮಸಾಜ್‌ ಸಹ ಮಾಡಿಸಿಕೊಳ್ಳಬಹುದು. ಇದು ವಿಶಿಷ್ಟವಾದ ಸ್ಪಾ ತರಹದ ಅನುಭವವನ್ನು ನೀಡುತ್ತದೆ. ಈ ಮೊದಲೇ ಹೇಳಿದ ಹಾಗೆ ಧುಮ್ಮಿಕ್ಕುವ ನೀರಿನ ಹಾದಿಯಲ್ಲಿ ಬೆಳೆದ ಗಿಡಮೂಲಿಕೆಗಳಿಂದಾಗಿ ಫಾಲ್ಸ್‌ ಔಷಧೀಯ ಗುಣಗಳನ್ನು ಹೊಂದಿದೆ ಎಂದು ಹೇಳಲಾಗುವುದರಿಂದ ಇಲ್ಲಿ ನೀವು ಸ್ನಾನ ಮಾಡಲು ನಿರ್ದಿಷ್ಟ ಸ್ಥಳಗಳೂ ಇವೆ. ಜಲಪಾತದ ಸುತ್ತಲಿನ ಪ್ರದೇಶವು ಮೀನುಗಾರಿಕೆಗೆ ಹೆಸರುವಾಸಿಯಾಗಿದೆ. ಇಲ್ಲಿ ಸ್ಥಳೀಯರು ನಿಮಗೆ ದೋಣಿ ಸವಾರಿ ಮಾಡಿಸುವುದು ಮಾತ್ರವಲ್ಲದೆ ತಾಜಾ ಮೀನುಗಳನ್ನು ಹಿಡಿದುಕೊಡುತ್ತಾರೆ.

ನೀವು ಅವರಿಂದ ಮೀನುಗಳನ್ನು ಖರೀದಿಸಿ, ನದಿಯ ಪಕ್ಕದಲ್ಲಿರುವ ಹಲವಾರು ತಾತ್ಕಾಲಿಕ ಸ್ಟಾಲ್‌ಗಳಲ್ಲಿ ಅದನ್ನು ಬೇಯಿಸಬಹುದು. ಹೊಗೇನಕಲ್ ತನ್ನ ತಾಜಾ ಮೀನು ಆಹಾರಕ್ಕೂ ಹೆಸರುವಾಸಿಯಾಗಿದೆ. ಅಷ್ಟೇ ಅಲ್ಲ, ಇಕೋ ಶಾಪ್‌ನಿಂದ ನೀವು ಗಿಡಮೂಲಿಕೆ ಉತ್ಪನ್ನಗಳು, ಸಾರಭೂತ ತೈಲಗಳು, ಕರಕುಶಲ ವಸ್ತುಗಳು ಮತ್ತು ಟಿ-ಶರ್ಟ್‌ಗಳನ್ನು ಸಹ ಖರೀದಿಸಬಹುದು.

ಜಲಪಾತದ ಸುತ್ತಲಿನ ಆಕರ್ಷಣೆಗಳು

ಇಲ್ಲಿ ನೀವು ತೂಗು ಸೇತುವೆ, ಮಕ್ಕಳ ಉದ್ಯಾನವನ, ಮೊಸಳೆ ಪುನರ್ವಸತಿ ಕೇಂದ್ರ, ಪೆನ್ನಾರಂ ಗ್ರಾಮ ಮತ್ತು ಮೆಟ್ಟೂರು ಅಣೆಕಟ್ಟುಗಳಿಗೆ ಭೇಟಿ ನೀಡಬಹುದು. ಈ ಸ್ಥಳದ ಸೌಂದರ್ಯ ನೋಡಲು ಎರಡು ಕಣ್ಣು ಸಾಲದು.

ಇಲ್ಲಿಗೆ ಹೋಗುವುದು ಹೇಗೆ?

ಬೆಂಗಳೂರು ನಗರವು ಹೊಗೇನಕಲ್ ಜಲಪಾತಕ್ಕೆ ಸಮೀಪದಲ್ಲಿದೆ. ಸರ್ಕಾರಿ ಬಸ್ಸುಗಳು ಹೊಗೇನಕಲ್‌ಗೆ ನಿಯಮಿತವಾಗಿ ಓಡಾಡುತ್ತವೆ. ನೀವು ಹೊಗೇನಕಲ್ ತಲುಪಿದ ನಂತರ, ಜಲಪಾತವನ್ನು ಹತ್ತಿರದಿಂದ ವೀಕ್ಷಿಸಲು ನದಿಯನ್ನು ದಾಟಬೇಕಾಗುತ್ತದೆ.

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+