• Follow NativePlanet
Share
Menu
» »ಚಿನ್ನದ ಮಂದಿರ... ಇವು ನೋಡಲು ಸುಂದರ...

ಚಿನ್ನದ ಮಂದಿರ... ಇವು ನೋಡಲು ಸುಂದರ...

Posted By: Divya

ಪ್ರಪಂಚದಲ್ಲಿಯೇ ಅತಿ ಹೆಚ್ಚು ಅನುಯಾಯಿಗಳನ್ನು ಹೊಂದಿರುವ 5ನೇ ಧರ್ಮ ಬೌದ್ಧ ಧರ್ಮ. ಕ್ರಿ.ಪೂ. 5-6 ನೇ ಶತಮಾನದಲ್ಲಿ ಬೆಳಕಿಗೆ ಬಂದ ಈ ಧರ್ಮ ಸರಳ ಹಾಗೂ ಸಮಾನತೆಯನ್ನು ಸಾರುತ್ತದೆ. ಉತ್ತರ ಭಾರತದಲ್ಲಿ ನೆಲೆಸಿದ್ದ ಗೌತಮನ ಬೋಧನೆಯ ಆಧಾರದಲ್ಲಿಯೇ ಬೆಳೆದು ಬಂದ ಧರ್ಮ ಇಂದು ಜಗತ್ತಿನಾದ್ಯಂತ ಹರಡಿಕೊಂಡಿದೆ.

ರಾಜಕುಮಾರ ಸಿದ್ಧಾರ್ಥನು ತಪಸ್ಸಿನ ಮೂಲಕ ಜ್ಞಾನವನ್ನು ಪಡೆದನು. 9 ವರ್ಷಗಳ ಕಾಲ ಧರ್ಮೋಪದೇಶಮಾಡುತ್ತಾ ನಿರ್ವಾಣ ಹೊಂದಿದನು. ನಂತರದ ದಿನಗಳಲ್ಲಿ ಗೌತಮ ಬುದ್ಧ ಎನ್ನುವ ನಾಮದಿಂದಲೇ ಅನುಯಾಯಿಗಳು ಧರ್ಮ ಪ್ರಚಾರ ಮಾಡುತ್ತಾಬಂದರು. ಈ ಹಿನ್ನೆಲೆಯಲ್ಲೇ ಭಾರತದ ಹಲವೆಡೆ ಅನೇಕ ಬೌದ್ಧ ಮಠಗಳು ನೆಲೆನಿಂತಿವೆ. ಈ ಭವ್ಯ ಮಠಗಳ ಸೊಬಗನ್ನು ಫೋಟೋ ಪ್ರವಾಸದ ಮೂಲಕ ತಿಳಿಯೋಣ...

ನಮ್ಗಾಯಲ್ ಮಠ

ನಮ್ಗಾಯಲ್ ಮಠ

ಹಿಮಾಚಲ ಪ್ರದೇಶದ ಧರ್ಮಶಾಲಾ ಆವೃತ್ತಿಯಲ್ಲಿರುವ ಈ ಬೌದ್ಧ ಮಠ ಸುಂದರ ವಿನ್ಯಾಸದಲ್ಲಿ ರಚನೆಗೊಂಡಿದೆ. ಇದರ ಸುತ್ತಲು ಸುಂದರವಾದ ಕಣಿವೆಗಳು ಹಾಗೂ ಸರೋವರ ಇರುವುದರಿಂದ ಪ್ರವಾಸಿಗರಿಗೆ ಆಕರ್ಷಣಾ ತಾಣವಾಗಿದೆ. ಈ ಮಠವು ಸುಗ್ಲಾಕಾಂಗ್ ಸಂಕೀರ್ಣದ ಒಂದು ಭಾಗವಾಗಿದ್ದುದರಿಂದ ಸಾವಿರಾರು ಬೌದ್ಧ ಯಾತ್ರಿಗಳು ಇಲ್ಲಿಗೆ ಬರುತ್ತಾರೆ.

PC: en.wikipedia.org

ಥಿಕ್ಸೆ ಮಠ

ಥಿಕ್ಸೆ ಮಠ

ಲೇಹ್ ಪಟ್ಟಣದಿಂದ 19 ಕಿ.ಮೀ. ದೂರದಲ್ಲಿರುವ ಈ ಮಠ ಮಧ್ಯ ಯುಗದ ಆಕರ್ಷಕ ವಾಸ್ತು ಶಿಲ್ಪದಿಂದ ಕೂಡಿದೆ. ಭಾರತದ ಅತಿ ದೊಡ್ಡ ಮಠ ಎನ್ನುವ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ. 12 ಅಂತಸ್ತಿನ ಮಠವಾದ ಇದು ಆಕರ್ಷಕ ಸ್ತೂಪಗಳು, ಮೂರ್ತಿಗಳು ಹಾಗೂ ವರ್ಣಚಿತ್ರಗಳಿಂದ ಕೂಡಿದೆ.

PC: flickr.com

ಹೆಮಿಸ್ ಮಠ

ಹೆಮಿಸ್ ಮಠ

ಬುದ್ಧನ ತಾಮ್ರದ ಮೂರ್ತಿಯೇ ಇಲ್ಲಿಯ ಪ್ರಮುಖ ಆಕರ್ಷಣೆ. 1630ರಲ್ಲಿ ನಿರ್ಮಾಣಗೊಂಡ ಈ ಆಶ್ರಮ ಲೇಹ್‍ದಿಂದ 40 ಕಿ.ಮೀ. ದೂರದಲ್ಲಿದೆ. ಇಲ್ಲಿ ದುಃಖಂಗ್ ಮತ್ತು ಶೊಂಗ್ ಖಂಗ್ ಎಂಬ ಎರಡು ವಿಭಾಗಗಳಿರುವುದನ್ನು ಗಮನಿಸಬಹುದು. ಜೂನ್ ಮತ್ತು ಜುಲೈ ತಿಂಗಳಲ್ಲಿ ನಡೆಯುವ ಹೆಮಿಸ್‍ನ ವಾರ್ಷಿಕ ಉತ್ಸವ ಬಹಳ ವಿಜ್ರಂಭಣೆಯಿಂದ ಜರುಗುತ್ತದೆ.

PC: flickr.com

ಶಸುರ್ ಮಠ

ಶಸುರ್ ಮಠ

ಹಿಮಾಚಲ ಪ್ರದೇಶದ ಕೀಲಾಂಗ್‍ನಿಂದ 3 ಕಿ.ಮೀ. ದೂರದಲ್ಲಿರುವ ಈ ಮಠ ಪ್ರವಾಸಿಗರ ಆಕರ್ಷಕ ತಾಣ. ಶಸುರ್ ಎಂದರೆ ಸ್ಥಳೀಯ ಭಾಷೆಯಲ್ಲಿ ನೀಲಿ ಪೈನ್ ಎಂದರ್ಥವಾಗುತ್ತದೆ. ನೀಲಿ ಪೈನ್‍ಗಳ ಸುಂದರ ಕಾಡುಗಳು ಮಠದ ಸುತ್ತಲೂ ಆವರಿಸಿರುವುದರಿಂದ ಮಠದ ಸೌಂದರ್ಯ ಇಮ್ಮಡಿಯಾಗಿದೆ. 17ನೇ ಶತಮಾನದಲ್ಲಿ ನಿರ್ಮಾಣಗೊಂಡ ಈ ಮಠದಲ್ಲಿ ಬೌದ್ಧ ವರ್ಣಚಿತ್ರಗಳ ಸುಂದರ ಸಂಗ್ರಹಗಳನ್ನು ನೋಡಬಹುದು.

PC: flickr.com

ಮೈಂಡ್ರೋಲಿಂಗ್ ಮಠ

ಮೈಂಡ್ರೋಲಿಂಗ್ ಮಠ

ಭಾರತದಲ್ಲಿರುವ ಪ್ರಮುಖ ಬೌದ್ಧ ಮಠಗಳಲ್ಲಿ ಒಂದಾದ ಮೈಂಡ್ರೋಲಿಂಗ್ ದೆಹ್ರಾದೂನ್‍ಅಲ್ಲಿದೆ. ಅಪರೂಪದ ವಿನ್ಯಾಸದಲ್ಲಿ ತಲೆ ಎತ್ತಿರುವ ಈ ಮಠ ಪ್ರವಾಸಿಗರಿಗೊಂದು ಆಕರ್ಷಕ ತಾಣ. ಸುತ್ತಲು ಹಸಿರು ಸಿರಿಯಿಂದ ಕೂಡಿದೆ. ಇಲ್ಲಿ 107 ಅಡಿ ಎತ್ತರದ ಬುದ್ಧನ ವಿಗ್ರಹ ಇರುವುದನ್ನು ನೋಡಬಹುದು. ಭಾರತದಲ್ಲಿಯೇ ಅತಿ ಎತ್ತರವಾದ ಪ್ರತಿಮೆ ಎನ್ನುವ ಖ್ಯಾತಿ ಪಡೆದುಕೊಂಡಿದೆ.

PC: flickr.com

ಘೂಮ್ ಮಠ

ಘೂಮ್ ಮಠ

ಡಾರ್ಜಿಲಿಂಗ್‍ನ ಪೂರ್ವ ಹಿಮಾಲಯ ಶ್ರೇಣಿಯಲ್ಲಿರುವ ಈ ಮಠ ಪುರಾತನ ಮಠಗಳಲ್ಲಿ ಒಂದು. ಗಿರಿಧಾಮಗಳ ಮಡಿಲಲ್ಲಿರುವ ಈ ಮಠ ಪ್ರವಾಸಕ್ಕೊಂದು ಸೂಕ್ತ ತಾಣ. ಇಲ್ಲಿ 15 ಅಡಿ ಎತ್ತರದ ಬುದ್ಧನ ಮೂರ್ತಿ ಇರುವುದನ್ನು ಕಾಣಬಹುದು. ಇಲ್ಲಿ ಟಿಬೆಟಿಯನ್‍ರ ಸಾಂಪ್ರದಾಯಿಕ ಬಾವುಟಗಳಿಂದ ಸಿಂಗರಿಸಲಾಗಿದೆ.

PC: en.wikipedia.org

ರುಮ್ಟೆಕ್ ಮಠ

ರುಮ್ಟೆಕ್ ಮಠ

ಗ್ಯಾಂಗ್ವಾಕ್ ಬಳಿ ಇರುವ ರುಮ್ಟೆಕ್ನಲ್ಲಿ ಮಠವಿದೆ. ಧರ್ಮ ಚಕ್ರ ಕೇಂದ್ರ ಎಂದು ಹೆಸರಾದ ಈ ಮಠ ಸಮುದ್ರ ಮಟ್ಟದಿಂದ 5800 ಅಡಿ ಎತ್ತರದಲ್ಲಿದೆ. ನಾಲ್ಕು ಅಂತಸ್ತಿನ ಈ ಮಠದ ವಾಸ್ತು ಶಿಲ್ಪದ ರಚನೆ ಅಮೋಘವಾಗಿದೆ.ಇಲ್ಲಿ ಪ್ರತಿ ವರ್ಷದ ಹತ್ತನೇ ತಿಂಗಳಲ್ಲಿ ನೃತ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಸಿಕ್ಕಿಂನ ಅತ್ಯಂತ ಆಕರ್ಷಕ ತಾಣ ಎನ್ನುವ ಹೆಸರಿಗೆ ಪಾತ್ರವಾಗಿದೆ.

PC: flickr.com

ತವಾಂಗ್ ಮಠ

ತವಾಂಗ್ ಮಠ

ಅರುಣಾಚಲ ಪ್ರದೇಶದ ಪಶ್ಚಿಮ ಭಾಗದಲ್ಲಿರುವ ಈ ತಾಣಕ್ಕೆ ಭೇಟಿ ನೀಡುವುದು ಅದ್ಭುತ ಅನುಭವವನ್ನು ನೀಡುತ್ತದೆ. ಸಮುದ್ರ ಮಟ್ಟಕ್ಕಿಂತ 3,048 ಅಡಿ ಎತ್ತರದಲ್ಲಿದೆ. ಭಾರತದಲ್ಲಿರುವ ಅತ್ಯಂತ ದೊಡ್ಡ ಮಠಗಳಲ್ಲಿ ತವಾಂಗ್ ಬೌದ್ಧ ಮಠವೂ ಒಂದು ಎನ್ನುವ ಹಿರಿಮೆಗೆ ಪಾತ್ರವಾಗಿದೆ.

PC: en.wikipedia.org

ನ್ಯಾಮ್ಡ್ರೋಲಿಂಗ್ ಮಠ

ನ್ಯಾಮ್ಡ್ರೋಲಿಂಗ್ ಮಠ

ಕುಶಾಲನಗರದಿಂದ 3 ಕಿ.ಮೀ. ದೂರದಲ್ಲಿರುವ ಈ ಮಠದಲ್ಲಿ ವಿಶೇಷ ಬಗೆಯ ಕೆತ್ತನೆ ಹಾಗೂ ವರ್ಣಚಿತ್ರಗಳನ್ನು ಕಾಣಬಹುದು. ಚಿನ್ನದ ತಗಡುಗಳಿಂದ ಅಲಂಕರಿಸಲ್ಪಟ್ಟ ಬುದ್ಧನ ವಿಗ್ರಹಗಳು ಇಲ್ಲಿಯ ಪ್ರಮುಖ ಆಕರ್ಷಣೆ. ಸುತ್ತಲು ಇರುವ ಶಾಂತ ವಾತಾವರಣ ಪ್ರವಾಸಿಗರ ಮನ ತಣಿಸುತ್ತದೆ.

PC: flickr.com

Read more about: karnataka

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ