Search
  • Follow NativePlanet
Share
» »ಎಲಿಫೆಂಟಾ ಗುಹೆಗಳ ಬಗ್ಗೆ ಆಸಕ್ತಿಕರವಾದ ವಿಷಯಗಳು

ಎಲಿಫೆಂಟಾ ಗುಹೆಗಳ ಬಗ್ಗೆ ಆಸಕ್ತಿಕರವಾದ ವಿಷಯಗಳು

ಭಾರತ ದೇಶದಲ್ಲಿ ಹಲವಾರು ಗುಹೆಗಳು, ದೇವಾಲಯಗಳು ಇವೆ. ಗುಹೆಗಳು ಎಂದರೆ ಕುತೂಹಲ ಕೆರಳಿಸುವ ಒಂದು ತಾಣ. ಅಲ್ಲಿ ಏನಿದೆ? ಅದರ ಇತಿಹಾಸವೇನು? ಅಲ್ಲಿ ಯಾರು ವಾಸ ಮಾಡುತ್ತಿದ್ದರು ಎಂಬ ಹಲವಾರು ಪ್ರೆಶ್ನೆಗಳು ಮನಸ್ಸಿನಲ್ಲಿ ಮೂಡುತ್ತದೆ. ಗುಹೆಯಲ್ಲಿ ಹಲವಾರು ದೇವಾಲಯಗಳು ಇರುವುದನ್ನು ನಾವು ಕಂಡಿದ್ದೇವೆ. ಕೆಲವು ಗುಹೆಗಳಲ್ಲಿ ನಂಬಲಾಗದಂತಹ ಘಟನೆಗಳನ್ನು ಕೂಡ ಕಾಣಬಹುದು. ಗತಕಾಲದ ವೈಭವವನ್ನು ಗುಹೆಗಳಲ್ಲಿಯೂ ಕೂಡ ಕಾಣಬಹುದು. ಅಲ್ಲಿನ ಹಲವಾರು ಮನೋಹರವಾದ ಶಿಲ್ಪಗಳು ಪ್ರವಾಸಿಗರನ್ನು ಆಕರ್ಷಿಸದೇ ಬಿಡದು.

ವಿಸ್ಮಯ ಹಾಗು ಕುತೂಹಲವನ್ನು ಕೆರಳಿಸುವ ಗುಹಾಲಯವು ಭಾರತದ ಹಲೆವೆಡೆ ಇದೆ. ಅವುಗಳಲ್ಲಿ ಮುಖ್ಯವಾದುದು, ಅಜಂತಾ, ಎಲ್ಲೋರಾ, ಹಳೇಬೀಡು, ಹರಿಶ್ಚಂದ್ರ ಗುಹೆ ಹಾಗು ಪಟ್ಟದ ಕಲ್ಲು ಗುಹಾಲಯಗಳು. ಇವು ಅಪರೂಪದ ಕಲಾಕೃತಿಗಳಿಂದಲೂ ಆಕರ್ಷಿತಗೊಂಡಿದೆ. ಅಂಥಹ ಅದ್ಭುತವಾದ ಗುಹೆಗಳಲ್ಲಿ ಎಲಿಫೆಂಟಾ ಗುಹೆಗಳು ಕೂಡ ಒಂದಾಗಿದೆ. ಬೆಂಗಳೂರಿನಿಂದ ಸುಮಾರು 993 ಕಿ.ಮೀ ದೂರದಲ್ಲಿದೆ.

ಆ ಗುಹೆಗಳ ಇತಿಹಾಸ, ಕಲಾ ವೈಭವ ಮೊದಲಾದ ಮಾಹಿತಿಯನ್ನು ಲೇಖನದ ಮೂಲಕ ಸಂಕ್ಷೀಪ್ತವಾಗಿ ತಿಳಿಯೋಣ.

1. ಎಲಿಫೆಂಟಾ ಗುಹೆ

1. ಎಲಿಫೆಂಟಾ ಗುಹೆ

ಎಲಿಫೆಂಟಾ ಗುಹೆಗಳು ಅತ್ಯಂತ ಸುಂದರವಾದ ಗುಹೆಗಳಲ್ಲಿ ಒಂದಾಗಿದೆ. ಈ ಅದ್ಬುತವಾದ ಗುಹೆಯು ಮುಂಬೈ ನಗರದ ಸಮೀಪದಲ್ಲಿರುವ ಎಲಿಫೆಂಟಾ ಎಂಬ ದ್ವೀಪದಲ್ಲಿದೆ. ಇದನ್ನು ಮೊದಲು "ಘಾರಾಪುರಿ" ಎಂದು ಕರೆಯುತ್ತಿದ್ದರು. ಇದನ್ನು ನಂತರ ಪೋರ್ಚುಗೀಸರು ಎಲಿಫೆಂಟಾ ಎಂದು ಹೆಸರನ್ನು ಬದಲಾಯಿಸಿದರು ಎನ್ನಲಾಗಿದೆ. 1987 ರಲ್ಲಿ ಇದನ್ನು ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿ ಗುರುತಿಸಲಾಯಿತು.

2.ಎಲಿಫೆಂಟಾ ಗುಹೆ

2.ಎಲಿಫೆಂಟಾ ಗುಹೆ

ಈ ಎಲಿಫೆಂಟಾ ಗುಹೆಯು ಅತ್ಯಂತ ಪುರಾತನವಾದುದು ಎಂದು ಹೇಳಲಾಗಿದೆ. ಅಂದರೆ 9 ನೇ ಶತಮಾನದಿಂದ 13 ನೇ ಶತಮಾನದ ಮಧ್ಯೆ ಭಾಗದಲ್ಲಿ ಸಿಲ್ವರ್ ಎಂಬ ರಾಜ ಮನೆತನಕ್ಕೆ ಸಂಬಂಧಿಸಿದ್ದು ಎಂದು ನಂಬಲಾಗಿದೆ. ಆದರೆ ಈ ಗುಹೆಯಲ್ಲಿರುವ ಕೆತ್ತನೆಗಳನ್ನು ಹಾಗು ಮೂರ್ತಿಯನ್ನು ಪರಿಶೀಲಿಸಿದರೆ ಮಾನ್ಯಖೇಟರ ಅಥವಾ ರಾಷ್ಟ್ರಕೂಟರ ಕಾಲದ್ದು ಎಂದು ಗುರುತಿಸಲಾಗುತ್ತಿದೆ.

3.ಎಲಿಫೆಂಟಾ ಗುಹೆ

3.ಎಲಿಫೆಂಟಾ ಗುಹೆ

ಈ ಸುಂದರವಾದ ಗುಹೆಯು 60,000 ಚದರ ಅಡಿಗಳಷ್ಟು ವಿಸ್ತೀರ್ಣವನ್ನು ಹೊಂದಿರುವ ಈ ಗುಹೆ ಅತ್ಯಂತ ಅದ್ಭುತವಾಗಿದೆ. ಈ ಗುಹೆಗೆ 3 ಪ್ರವೇಶ ದ್ವಾರವಿದೆ. ಇಲ್ಲಿ ಮೊಗಸಾಲೆಗಳು, ಹಜಾರಗಳು ಹಾಗು ಆನೇಕ ದೇವಾಲಯಗಳನ್ನು ಕಾಣಬಹುದು. ಇಲ್ಲಿನ ಮತ್ತೊಂದು ವಿಶೇಷವೆನೆಂದರೆ ಬಂಡೇಯಿಂದಲೇ ಈ ಗುಹಾಲಯವನ್ನು ಕೊರೆದಿರುವುದು.

4.ಎಲಿಫೆಂಟಾ ಗುಹೆ

4.ಎಲಿಫೆಂಟಾ ಗುಹೆ

ಈ ಸುಂದರವಾದ ಗುಹಾಲಯವು ದ್ವೀಪದಲ್ಲಿದೆ. ಇದು ದ್ವೀಪದಲ್ಲಿರುವ ಕಾರಣ ಅತ್ಯದ್ಭುತವಾದ ಪರಿಸರವು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಇಲ್ಲಿನ ತಂಪಾದ ಗಾಳಿ ಹಾಗು ಪ್ರಶಾಂತವಾದ ವಾತಾವರಣವು ಮನಸ್ಸಿಗೆ ಹಿತವನ್ನು ನೀಡುವುದರಲ್ಲಿ ಅನುಮಾನವೇ ಇಲ್ಲ.

5.ಎಲಿಫೆಂಟಾ ಗುಹೆ

5.ಎಲಿಫೆಂಟಾ ಗುಹೆ

ಈ ಗುಹೆಯಲ್ಲಿನ ಮೂರ್ತಿಗಳು ಗುಹಾಲಯದ ಪ್ರಮುಖವಾದ ಆಕರ್ಷಣೆಯಾಗಿದೆ. ಹೆಚ್ಚಿನ ಶಿಲಾ ಮೂರ್ತಿಗಳನ್ನು ಪೋರ್ಚುಗೀಸರು ವಿರೂಪಗೊಳಿಸಿದ್ದಾರೆ ಎನ್ನಲಾಗಿದೆ. ಕೆಲವು ಮಾತ್ರ ವಾತಾವರಣದ ವೈಪರಿತ್ಯದಿಂದ ಹಾಳಾಗಿವೆ ಎಂದು ಅನುಮಾನ ಪಡಲಾಗಿದೆ.

6.ಎಲಿಫೆಂಟಾ ಗುಹೆ

6.ಎಲಿಫೆಂಟಾ ಗುಹೆ

ಇಲ್ಲಿ ಮೂಖ್ಯವಾಗಿ ಮೂರು ಮೂಖಗಳನ್ನು ಹೊಂದಿರುವ ಸದಾಶಿವ ವಿಗ್ರಹ, ನಟರಾಜ, ಅರ್ಧನಾರೀಶ್ವರ ಹಾಗು ಪೌರಾಣಿಕಕ್ಕೆ ಸಂಬಂಧಿಸಿದ ಸಾಮಾಜಿಕ ಮತ್ತು ಧಾರ್ಮಿಕ ಕಾರ್ಯಗಳ ಕೆತ್ತನೆಗಳನ್ನು ಇಲ್ಲಿ ಕಂಡು ಆನಂದಿಸಬಹುದು. ವಿಶಾಲ ಆಕೃತಿ ಸ್ತಂಭಗಳು ಹಾಗು ಅವುಗಳ ಕೆತ್ತನೆಗಳು ರಮಣೀಯವಾಗಿವೆ. ಇಲ್ಲಿ ಒಂದು ಶಿವಾಲಯ ಕೂಡ ಇದೆ.

7.ಎಲಿಫೆಂಟಾ ಗುಹೆ

7.ಎಲಿಫೆಂಟಾ ಗುಹೆ

IMAGE: Ricardo Martins

ಈ ಗುಹೆಯಲ್ಲಿ ಇನ್ನು ಆನೇಕ ಸಣ್ಣ ಗುಹೆಗಳು ಇವೆ. ಅವುಗಳು ಯಾವುವು ಎಂದರೆ ಶಿವನ ಗುಹೆ, ಯೋಗೀಶ್ವರ ಗುಹೆ ಮತ್ತು ನಟರಾಜ ಗುಹೆಗಳು, ಈಸ್ಟ್ ವಿಂಗ್ ಮತ್ತು ವೆಸ್ಟ್ ವಿಂಗ್ ಗುಹೆ ಹಾಗು ಮಹೇಶ ಮೂರ್ತಿ ಗುಹೆ ಎನ್ನುವ ಗುಹೆಗಳಿವೆ.

8.ಎಲಿಫೆಂಟಾ ಗುಹೆ

8.ಎಲಿಫೆಂಟಾ ಗುಹೆ

PC: wikipedia.org

ಈ ಗುಹೆಯ ಸಮೀಪದಲ್ಲಿ ಹಲವಾರು ದೇವಾಲಯಗಳು ಇವೆ. ಅವುಗಳಲ್ಲಿ ಸಿದ್ಧಿವಿನಾಯಕ ದೇಗುಲ, ಬಬುಲ್‍ನಾಥ ದೇವಾಲಯ, ಸಂಜಯ್ ಗಾಂಧಿ ರಾಷ್ಟ್ರೀಯ ಉದ್ಯಾನ ಹಾಘು ಗಿರ್ಗಾಂವ್ ಚೌಪಾಟಿ ಸಮುದ್ರ ತೀರ ಇನ್ನು ಹಲವಾರು ತಾಣಗಳಿಗೆ ಭೇಟಿ ನೀಡಬಹುದಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X