Search
  • Follow NativePlanet
Share
» »ಜೀವಾವಧಿ ಶಿಕ್ಷೆ ಅನುಭವಿಸುವ ಕೈದಿಗಳೂ ರೆಸ್ಟೋರೆಂಟ್ ನಡೆಸ್ತಾರೆ ಇಲ್ಲಿ

ಜೀವಾವಧಿ ಶಿಕ್ಷೆ ಅನುಭವಿಸುವ ಕೈದಿಗಳೂ ರೆಸ್ಟೋರೆಂಟ್ ನಡೆಸ್ತಾರೆ ಇಲ್ಲಿ

ಶಿಮ್ಲಾದಲ್ಲಿ ದೊಡ್ಡ ದೊಡ್ಡ ರೆಸ್ಟೋರೆಂಟ್‌ಗಳು, ಹೊಟೇಲ್‌ಗಳು ಇವೆ. ಇಲ್ಲಿ ನಿಮಗೆ ಪಂಚತಾರ ಹೋಟೇಲ್‌ಗಳಿಂದ ಹಿಡಿದು ರಸ್ತೆ ಬದಿಯ ಡಾಬಾ ಕೂಡಾ ಕಾಣ ಸಿಗುತ್ತದೆ. ಹೀಗಿರುವಾಗ ಈ ಮಧ್ಯೆ ಒಂದು ರೆಸ್ಟೋರೆಂಟ್ ಇದೆ ಅದರ ಬಗ್ಗೆ ಕೇಳಿ ನಿಮಗೆ ಆಶ್ಚರ್ಯವಾಗುವುದಂತೂ ಖಂಡಿತ.

ಶಿಮ್ಲಾದಲ್ಲಿದೆ ವಿಶೇಷ ರೆಸ್ಟೋರೆಂಟ್

ಶಿಮ್ಲಾದಲ್ಲಿದೆ ವಿಶೇಷ ರೆಸ್ಟೋರೆಂಟ್

ಈ ರೆಸ್ಟೋರೆಂಟ್‌ನ್ನು ನಾಲ್ಕು ಅಪರಾಧಿಗಳು ಸೇರಿ ನಡೆಸುತ್ತಿದ್ದಾರೆ. ಇವರು ಅಡುಗೆ ಮಾಡುವುದರಲ್ಲಿ ಯಾವುದೇ ಫೈವ್ ಸ್ಟಾರ್ ಹೋಟೇಲ್‌ನ ಕುಕ್‌ಗಿಂತಲೂ ಕಡಿಮೆ ಇಲ್ಲ. ಹಾಗಾದ್ರೆ ಅದು ಯಾವ ರೆಸ್ಟೋರೆಂಟ್ ಎನ್ನುವುದನ್ನು ತಿಳಿಯೋಣ ಬನ್ನಿ...

ನಾಲ್ಕು ಅಪರಾಧಿಗಳ ರೆಸ್ಟೋರೆಂಟ್

ನಾಲ್ಕು ಅಪರಾಧಿಗಳ ರೆಸ್ಟೋರೆಂಟ್

ಶಿಮ್ಲಾದಲ್ಲಿರುವ ಈ ರೆಸ್ಟೋರೆಂಟ್‌ನ ಹೆಸರು ಬುಕ್ ಕೆಫೆ. ಇದನ್ನು ನಾಲ್ವರು ಅಪರಾಧಿಗಳು ಸೇರಿ ನಡೆಸುತ್ತಿದ್ದಾರೆ. ಈ ಅಪರಾಧಿಗಳು ನಗರದ ಕೈಟು ಜೈಲ್‌ನಲ್ಲಿ ಜೀವಾವಧಿ ಶಿಕ್ಷೆಯನ್ನು ಅನುಭವಿಸುತ್ತಿದ್ದಾರೆ. ಇವರು ಅಪರಾಧಿಗಳು ಆದರೆ ಇವರಿಗೆ ಪ್ರೊಫೆಶನಲ್ ಅಡುಗೆ ಮಾಡುವ ವಿಶೇಷ ತರಬೇತಿ ನೀಡಲಾಗಿದೆ. ಈ ಬುಕ್ ಕೆಫೆ ಇವರಿಂದಾಗಿಯೇ ವಿಶೇಷವಾಗಿ ಗುರುತಿಸಲ್ಪಡುತ್ತದೆ. ಇಲ್ಲಿಗೆ ಸಾಕಷ್ಟು ಜನರು ಇವರ ಕೈ ರುಚಿಯನ್ನು ಸವಿಯಲು ಬರುತ್ತಾರೆ.

ಕೆಫೆಯ ವಿಶೇಷತೆ

ಕೆಫೆಯ ವಿಶೇಷತೆ

ಬುಕ್ಕೆಫೆಯಲ್ಲಿ ನಿಮಗೆ ಚಹಾ, ತಿಂಡಿಯಿಂದ ಹಿಡಿದು ಸ್ವಾದಿಷ್ಟ ಮಧ್ಯಾಹ್ನದ ಊಟ, ರಾತ್ರಿಯ ಊಟ ಕೂಡಾ ದೊರೆಯುತ್ತದೆ. ಅಲ್ಲದೆ ಈ ಕೆಫೆಯಲ್ಲಿ ಬರುವ ಗ್ರಾಹಕರಿಗೆ ಬೆಟ್ಟ ಗುಡ್ಡಗಳ ತೋರಿಸಲು ಗೈಡ್‌ನ ವ್ಯವಸ್ಥೆ ಕೂಡಾ ಇದೆ. ಇಲ್ಲಿಗೆ ಬರುವ ಗ್ರಾಹಕರಿಗೆ ಇಲ್ಲಿಇನ ಸೇವೆ ಬಹಳ ಇಷ್ಟವಾಗುತ್ತದೆ. ಅದಕ್ಕಾಗಿ ಅವರು ಇಲ್ಲಿಗೆ ಪದೇ ಪದೇ ಬರಲು ಇಚ್ಛಿಸುತ್ತಾರೆ.

ಹೊಸ ಜೀವನ

ಹೊಸ ಜೀವನ

ಬುಕ್ ಕೆಫೆಗೆ ಬರುವ ಗ್ರಾಹಕರ ಜೊತೆಗೆ ಇಲ್ಲಿ ಕೆಲಸ ಮಾಡುವ ಅಪರಾಧಿಗಳೂ ಕೂಡಾ ಖುಷಿಯಾಗಿದ್ದಾರೆ. ಬುಕ್ ಕೆಫೆ ಅವರಿಗೆ ಒಂದು ಹೊಸ ಜೀವನವನ್ನು ನೀಡಿದೆ. ಅವರು ಈ ಹೋಟೇಲ್‌ನ್ನು ನಡೆಸುತ್ತಾರೆ ಎನ್ನುವ ವಿಷಯ ತಿಳಿದಾಗ ಬಹಳ ಸಂತೋಷವಾಯಿತು. ಎನ್ನುತ್ತಾರೆ ಈ ಅಪರಾಧಿಗಳು. ಅವರಿಗೆ ಇಷ್ಟೊಂದು ದೊಡ್ಡ ಗಿಫ್ಟ್ ನೀಡಲಾಗುತ್ತದೆ ಎಂದು ಯಾವತ್ತೂ ಊಹಿಸಿರಲಿಲ್ಲ ಎನ್ನುವ ಅವರು, ಈ ಕೆಫೆಯಿಂದಾಗಿ ಕ್ರಮೇಣ ಜನರ ದೃಷ್ಠಿಕೋನವೂ ಬದಲಾಗುತ್ತಿದೆ ಇದರಿಂದ ನಾವು ಬಹಳ ಖುಷಿಯಾಗಿದ್ದೇವೆ ಎನ್ನುವುದು ಅವರ ಮನದಾಳದ ಮಾತು.

ಪ್ರವಾಸೋಧ್ಯಮ ಇಲಾಖೆಯ ಕೆಫೆ

ಪ್ರವಾಸೋಧ್ಯಮ ಇಲಾಖೆಯ ಕೆಫೆ

ಈ ಬುಕ್ ಕೆಫೆಯನ್ನು ರಾಜ್ಯ ಪ್ರವಾಸೋಧ್ಯಮ ಇಲಾಖೆವತಿಯಿಂದ ನಡೆಸಲಾಗುತ್ತಿದೆ. ಇದರ ಹಿಂದೆ ಒಂದು ದೊಡ್ಡ ಸಕಾರಾತ್ಮಕ ಯೋಚನೆ ಹುದುಗಿದೆ. ಕೈದಿಗಳನ್ನು ಸಮಾಜದಲ್ಲಿ ಜೋಡಿಸಲು ಇಂತಹದ್ದೊಂದು ಮಹತ್ತರ ನಿರ್ಧಾರವನ್ನು ಕೈಗೊಳ್ಳಲಾಗಿದೆ.

20ಲಕ್ಷ ರೂ.ವೆಚ್ಚದಲ್ಲಿ ನಿರ್ಮಾಣ

20ಲಕ್ಷ ರೂ.ವೆಚ್ಚದಲ್ಲಿ ನಿರ್ಮಾಣ

PC: Aawaravineet

20ಲಕ್ಷ ರೂ. ಖರ್ಚು ಮಾಡಿ ಈ ಕೆಫೆಯನ್ನು ನಿರ್ಮಿಸಲಾಗಿದೆ. ಇಲ್ಲಿ ಸಮಾರು 40 ಜನರಿಗೆ ಕುಳಿತುಕೊಳ್ಳುವಷ್ಟು ಸ್ಥಳಾವಕಾಶವಿದೆ. ಇಲ್ಲಿನ ಕೈದಿಗಳು ತಿಂಡಿ, ಊಟ ಮಾತ್ರವಲ್ಲದೆ ಸ್ಪೆಶಲ್ ಬಿಸ್ಕೆಟ್ ಹಾಗೂ ಪಿಜ್ಜಾ ಕೂಡಾ ತಯಾರಿಸುತ್ತಾರೆ.

ಎಲ್ಲಿಯ ವರೆಗೆ ಕೆಲಸ ಮಾಡುತ್ತಾರೆ ಇವರು?

ಎಲ್ಲಿಯ ವರೆಗೆ ಕೆಲಸ ಮಾಡುತ್ತಾರೆ ಇವರು?

ಈ ಕೆಫೆ ಬೆಳಗ್ಗೆ 10 ಗಂಟೆಯಿಂದ ರಾತ್ರಿ 7.30ರವರೆಗೆ ತೆರೆದಿರುತ್ತದೆ. ರಾತ್ರಿ 7.30ರ ಬಳಿಕ ಈ ಕೈದಿಗಳಿಗೆ ಮತ್ತೆ ಜೈಲಿಗೆ ಹೋಗಬೇಕಾಗುತ್ತದೆ. ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಈ ಕೈದಿಗಳು ತಮಗೆ ಸಿಕ್ಕಿರುವ ಈ ಸ್ವಾತಂತ್ರ್ಯದಿಂದ ಬಹಳ ಸಂತೋಷದಲ್ಲಿದ್ದಾರೆ.

ಪ್ರಯಾಣಿಸುವುದು ಹೇಗೆ?

ಪ್ರಯಾಣಿಸುವುದು ಹೇಗೆ?

ಕೈದಿಗಳ ಈ ರೆಸ್ಟೋರೆಂಟ್ ಶಿಮ್ಲಾದ ಬೆಟ್ಟದ ಬಳಿಯ ತಾಕ ಬೆಂಚ್ ಎನ್ನುವ ಪ್ರದೇಶದಲ್ಲಿದೆ . ಶಿಮ್ಲಾ ರೈಲ್ವೆ ಸ್ಟೇಶನ್‌ನಿಂದ ಸುಮಾರು 7.4ಕಿ.ಮೀ ದೂರದಲ್ಲಿದೆ. ರೈಲ್ವೆ ಸ್ಟೇಶನ್‌ನಿಂದ ಟ್ಯಾಕ್ಸಿ ಮೂಲಕ ಇಲ್ಲಿಗೆ ಬರಬಹುದು.

More News

Read more about: shimla ಶಿಮ್ಲಾ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+