ನೆಹರು ಉದ್ಯಾನವನವನ್ನು ತೂತುಕುಡಿ ನಗರದ ಉತ್ತರ ಭಾಗದಲ್ಲಿ ಕಾಣಬಹುದು. ಕಡಲತೀರದ ರಸ್ತೆ ಮೇಲಿರುವ ಈ ಉದ್ಯಾನ ಈ ಹಿಂದೆ "ಕೋಟ್ಸ್ ಇಂಡಿಯಾ" ಮೂಲಕ ನಿರ್ವಹಣೆಗೊಳಪಟ್ಟಿತ್ತು. ಈಗ ಈ ಉದ್ಯಾನ ಪುರಸಭೆ ಸ್ವಾಧೀನಕ್ಕೆ ಒಳಪಟ್ಟಿದೆ. ತೂತುಕುಡಿಯ ಈ ನೆಹರು ಉದ್ಯಾನವನ್ನು ರಾಜಾಜಿ ಉದ್ಯಾನ ಎಂದೂ ಕೂಡ ಕರೆಯಲಾಗುತ್ತದೆ. ಈ ಉದ್ಯಾನ ಒಂದು ದೊಡ್ಡ ನೀರು ಸಂಗ್ರಹದ ನೆಲೆಯಾಗಿದ್ದು ಇಲ್ಲಿನ ವಾಟರ್ ಟ್ಯಾಂಕ್ ನಿಂದಾಗಿ ಸ್ಥಳೀಯರ ನಡುವೆ ಪ್ರಸಿದ್ಧವಾಗಿದೆ.


Click it and Unblock the Notifications