Search
  • Follow NativePlanet
Share
ಮುಖಪುಟ » ಸ್ಥಳಗಳು » ತಿರುವೆಂಕಾಡು » ಆಕರ್ಷಣೆಗಳು » ಶ್ವೇತಾರಣ್ಯೇಶ್ವರರ್ ದೇವಸ್ಥಾನ

ಶ್ವೇತಾರಣ್ಯೇಶ್ವರರ್ ದೇವಸ್ಥಾನ, ತಿರುವೆಂಕಾಡು

3

ಶ್ವೇತಾರಣ್ಯೇಶ್ವರರ್ ದೇವಸ್ಥಾನವು ನಾಗಪಟ್ಟಿಣಂ ಜಿಲ್ಲೆಯ ತಿರುವೆಂಕಾಡುವಿನಲ್ಲಿದೆ. ಇದು ತಮಿಳುನಾಡಿನ 4ನೇ ನವಗ್ರಹ ಸ್ಥಳ. ಇಲ್ಲಿ ಬುಧನ ದೇವಸ್ಥಾನವಿದೆ. ಶಿವ ಇಲ್ಲಿ ಶ್ವೇತಾರಣ್ಯೇಶ್ವರರ್ ಎಂದೂ ಪಾರ್ವತಿಯು ಬ್ರಹ್ಮವಿದ್ಯಾನಾಯಕಿ ಎಂದೂ ಪೂಜೆಗೊಳ್ಳುತ್ತಾರೆ. ಇಲ್ಲಿ ಬುಧನ ವಿಗ್ರಹವಿದೆ. ಶ್ವೇತಾರಣ್ಯೇಶ್ವರರ್ ಎನ್ನುವುದು ಶ್ವೇತಾರ್ಣಂ ಮತ್ತು ಈಶ್ವರರ್ ಎಂಬುದರಿಂದ ಆಗಿದೆ. ಶ್ವೇತಾರ್ಣಯಂ ಎಂಬುದನ್ನು ಶ್ವೇತಂ ಮತ್ತು ಆರ್ಣಯಂ ಎಂದು ವಿಭಜಿಸಬಹುದು.

ಸಂಸ್ಕೃತದಲ್ಲಿ ಆರ್ಣಯಂ ಎಂದರೆ ಕಾಡು ಮತ್ತು ಶ್ವೇತ ಎಂದರೆ ಬಿಳಿ, ಶಿವ ಎಂದರೆ ದೇವರು ಎಂದರ್ಥ. ಇಲ್ಲಿನ ಶಿವನ ವಿಗ್ರಹದ ವಿಶೇಷತೆಯೆಂದರೆ ಇದಕ್ಕೆ 5 ಮುಖಗಳಿವೆ - ತತ್ಪುರುಷಂ, ವಾಮದೇವಂ, ಈಶಾನಂ, ಸದ್ಯೋಜಾತಂ ಮತ್ತು ಅಘೋರಂ. ದೇವಾಲಯದ ಪ್ರವೇಶ ದ್ವಾರದಲ್ಲಿ ನಂದಿಯ ವಿಗ್ರಹವಿರುವುದು ಇಲ್ಲಿನ ಮತ್ತೊಂದು ವಿಶೇಷತೆ. ನಂದಿಯ ದೇಹದ ಮೇಲೆ 9 ಗಾಯದ ಗುರುತುಗಳಿವೆ. ಇದನ್ನು ದೇವಿಯ ಮಂದಿರದ ಬಾಗಿಲಲ್ಲಿ ಇಡಲಾಗಿದೆ.

ನಂದಿಯು ಶಿವನೆಡೆಗೆ ಮುಖಮಾಡಿದೆ ಮತ್ತು ಕಿವಿಗಳು ದೇವಿಯ ಕಡೆಗೆ ಬಾಗಿದೆ. ಇದು ನಂದಿ ಶಿವ-ಪಾರ್ವತಿಯರ ಆಜ್ಞಾಧಾರಕ ಸೇವಕ ಎಂದು ಸೂಚಿಸುತ್ತದೆ. ಈ ದೇವಸ್ಥಾನದಲ್ಲಿ 3 ತೀರ್ಥಗಳಿವೆ- ಸೂರ್ಯ ತೀರ್ಥಂ, ಅಗ್ನಿ ತೀರ್ಥಂ ಮತ್ತು ಚಂದ್ರ ತೀರ್ಥಂ. ಈ ತೀರ್ಥಗಳು ಶಿವನು ನರ್ತಿಸುವಾಗ ಕಣ್ಣಿಂದುರಿದ 3 ಹನಿಗಳಿಂದ ಉಂಟಾಯಿತು ಎಂದು ಹೇಳಲಾಗುತ್ತದೆ. ದೇವಾಲಯದ ಭಿತ್ತಿಗಳಲ್ಲಿರುವ ಕೆತ್ತನೆಗಳು ಚೋಳ ವಂಶ ಮತ್ತು ವಿಜಯನಗರದ ರಾಜರ ಬಗೆಗೆ ಐತಿಹಾಸಿಕ ಮಾಹಿತಿಗಳನ್ನು ಒಳಗೊಂಡಿವೆ.

ಇಲ್ಲಿ ಶಿವನೊಂದಿಗೆ ಬುಧ ಕೂಡ ಪೂಜೆಗೊಳ್ಳುತ್ತಾನೆ. ಜನ ಬುಧನಿಂದುಂಟಾದ ತೊಂದರೆಗಳ ಪರಿಹಾರಕ್ಕೆ ಇಲ್ಲಿಗೆ ಬಂದು ಪೂಜೆ ಸಲ್ಲಿಸುತ್ತಾರೆ.

One Way
Return
From (Departure City)
To (Destination City)
Depart On
09 Sep,Wed
Return On
10 Sep,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
09 Sep,Wed
Check Out
10 Sep,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
09 Sep,Wed
Return On
10 Sep,Thu