Search
  • Follow NativePlanet
Share
ಮುಖಪುಟ » ಸ್ಥಳಗಳು » ತಿರುವೆಂಕಾಡು » ಹವಾಮಾನ

ತಿರುವೆಂಕಾಡು ಹವಾಮಾನ

ಯಾತ್ರಾರ್ಥಿಗಳು ತಿರುವೆಂಕಾಡಿಗೆ ಭೇಟಿ ನೀಡಲು ಉತ್ತಮ ಸಮಯವೆಂದರೆ ಅಕ್ಟೋಬರ್ ಮತ್ತು ಮಾರ್ಚ್ ತಿಂಗಳುಗಳು. ಈ ಸಮಯದಲ್ಲಿ ಸಂದರ್ಶಕರು ದೇವಸ್ಥಾನಗಳ ಭೇಟಿಯನ್ನು ಆನಂದಿಸಬಹುದು. ಪ್ರವಾಸಿಗರು ತಿರುವೆಂಕಾಡಿನಲ್ಲಿ ಕೆಲವು ದಿನಗಳವರಗೆ ತಂಗಲು ಇಚ್ಚಿಸಿದಲ್ಲಿ ಜೂನ್-ಸೆಪ್ಟಂಬರ್ ತಿಂಗಳುಗಳ ನಡುವಿನಲ್ಲಿ ಹೋಗುವುದು ಸೂಕ್ತ. ಸಾಮಾನ್ಯವಾಗಿ ಈ ಸಮಯದಲ್ಲಿ ಧಗೆಯಿದ್ದರೂ ಕೂಡ ಸ್ಥಳ ಪರಿವೀಕ್ಷಣೆಗೆ ಇದು ಸೂಕ್ತವಾದ ಸಮಯ.

ಬೇಸಿಗೆಗಾಲ

ಮಾರ್ಚ್-ಮೇ ಬೇಸಿಗೆ ಕಾಲ. ಬೇಸಿಗೆಯಲ್ಲಿ ಇಲ್ಲಿ ಉಷ್ಣತೆಯು ಗರಿಷ್ಠ 44 ಡಿಗ್ರಿ ಸೆಲ್ಶಿಯಸ್ನಿಂದ ಕನಿಷ್ಠ 28 ಡಿಗ್ರಿ ಸೆಲ್ಶಿಯಸ್ವರೆಗಿರುತ್ತದೆ. ಈ ಸಮಯದಲ್ಲಿ ಉಷ್ಣತೆಯು ಹೆಚ್ಚಿರುವುದರಿಂದ ಪ್ರಯಾಣಿಕರು ಇಲ್ಲಿಗೆ ಹೋಗದಿರುವುದು ಉತ್ತಮ.

ಮಳೆಗಾಲ

ಜೂನ್-ಸೆಪ್ಟೆಂಬರ್ ಇಲ್ಲಿ ಮಳೆಗಾಲ. ಇಲ್ಲಿ ಹೆಚ್ಚು ಮಳೆಯಾಗದಿದ್ದರೂ ಸ್ವಲ್ಪ ಮಟ್ಟಿಗೆ ವಾತಾವರಣ ತಂಪಾಗುತ್ತದೆ.

ಚಳಿಗಾಲ

ಡಿಸಂಬರ್-ಫೆಬ್ರವರಿ ಇಲ್ಲಿ ಚಳಿಗಾಲ. ಈ ಸಮಯದಲ್ಲಿ ಉಷ್ಣತೆಯು 20-30 ಡಿಗ್ರಿ ಸೆಲ್ಶಿಯಸ್ ಇರುತ್ತದೆ. ಧಗೆ ಕಡಿಮೆಯಾಗಿದ್ದು ವಾತಾವರಣ ಆಹ್ಲಾದಕಾರಿಯಾಗಿರುತ್ತದೆ.