Search
  • Follow NativePlanet
Share
ಮುಖಪುಟ » ಸ್ಥಳಗಳು » ತಿರುವನಂತಪುರಂ » ಆಕರ್ಷಣೆಗಳು » ಜಿಯೋಜಿಕಲ್ ಪ್ರಾಣಿ ಸಂಗ್ರಹಾಲಯ

ಜಿಯೋಜಿಕಲ್ ಪ್ರಾಣಿ ಸಂಗ್ರಹಾಲಯ, ತಿರುವನಂತಪುರಂ

1

ಭಾರತದಲ್ಲಿರುವ ಅತ್ಯುತ್ತಮವಾದ  ಪ್ರಾಣಿ ಸಂಗ್ರಹಾಲಗಳಲ್ಲಿ ಜಿಯೋಜಿಕಲ್ (ಬೌಗೋಳಿಕ)  ಪ್ರಾಣಿ ಸಂಗ್ರಾಲಯ ಕೂಡ ಒಂದು ಎಂದು ಗುರುತಿಸಲಾಗಿದೆ. ಇದನ್ನು ಮೊದಲು ಕೇರಳ ರಾಜ್ಯದ ತಿರುವಾಂಕೂರಿನ  ರಾಜರಿಂದ  1857ರಲ್ಲಿ ನಿರ್ಮಿಸಲಾಯಿತು. ಈ ಪ್ರಾಣಿ ಸಂಗ್ರಾಲಯದಲ್ಲಿ 75 ಕ್ಕಿಂತಲೂ ಅಧಿಕ ಬಗೆಯ ಪಕ್ಷಿ ಸಂಕುಲಗಳನ್ನು, ಹಾಗೂ  ಭಾರತದ ಹಾಗೂ ವಿವಿಧ ದೇಶಗಳ ಪ್ರಾಣಿ ತಳಿಗಳನ್ನು  ಇಲ್ಲಿ ಕಾಣಬಹುದು. ಇಂತಹ ಪ್ರಾಣಿ ಸಂಗ್ರಹಾಲಯಕ್ಕೆ ಪ್ರವಾಸಿಗರು ಸದಾ ಮುಗಿ ಬೀಳುತ್ತಾರೆ.

ಚಿಕ್ಕ ಮಕ್ಕಳು ಮಾತ್ರವಲ್ಲದೆ ದೊಡ್ಡವರು  ಕೂಡ ಇಲ್ಲಿರುವ ಬಗೆ-ಬಗೆಯ ಪ್ರಾಣಿ ಪಕ್ಷಿ ಸಂಕುಲಗಳನ್ನು  ನೋಡಲು ಇಷ್ಟಪಡುತ್ತಾರೆ.  ಹಾಗೂ ಧಾವಿಸುತ್ತಾರೆ. ಇಲ್ಲಿ ಸ್ಥಳೀಯ ಹಾಗೂ ವಿದೇಶಿಯ ಮುಳ್ಳಂದಿ,  ಮಣಿಪುರಾ ಜಿಂಕೆ, ರೋಯಲ್ ಬೆಂಗಾಲ್ ಟೈಗರ್ (ಬೆಂಗಾಲಿ ಹುಲಿ), ಜೀಬ್ರಾ, ಜಿರಾಫೆ, ಕಾಡೆಮ್ಮೆ, ನೀರಾನೆ ಹೀಗೆ ಇನ್ನೂ ಅನೇಕ ಬಗೆಯ ದೇಶಿಯ ಹಾಗೂ ವಿದೇಶಿ ಪ್ರಾಣಿಗಳು  ಕಾಣ ಸಿಗುತ್ತವೆ.

ಈ ಜಿಯೋಜಿಕಲ್ ಪ್ರಾಣಿ ಸಂಗ್ರಾಲಯ ಹುಲ್ಲಿನ ಮೈದಾನವನ್ನು ಒಳಗೊಂಡು 55 ಏಕರೆಯಷ್ಟು ವಿಸ್ತಾರವಾಗಿದೆ.  ಇಲ್ಲಿ ಅರಣ್ಯ ಮತ್ತು ಕೆರೆಗಳು ಕೂಡ ಇದೆ. ಪ್ರಾಣಿಗಳನ್ನು ನೋಡುವುದು ಮಾತ್ರವಲ್ಲದೆ  ಈ ಸರೋವರದಲ್ಲಿ ನೀವು ಇಷ್ಟಪಟ್ಟರೆ ಬೋಟಿಂಗ್ ಕೂಡಾ ಹೋಗಬಹುದು. ಈ ಸ್ಥಳ ಪಿಕ್ ನಿಕ್ ಗೆ ಮತ್ತು  ಶೈಕ್ಷಣಿಕ ಪ್ರವಾಸಕ್ಕೆ ಅನುಕೂಲವಾಗಿದೆ. ಆದ್ದರಿಂದ ಮಕ್ಕಳಿಗೆ ಬೇರೆಲ್ಲಾ ಪ್ರಾಣಿ ಸಂಗ್ರಹಾಲಗಳಿಗಿಂತ ಹೆಚ್ಚಾಗಿ ಆಕರ್ಷಿಸುವುದು ತಿರುವನಂತಪುರಂ ಜಿಯೋಜಿಕಲ್ ಪ್ರಾಣಿ ಸಂಗ್ರಾಲಯ. ಅಲ್ಲದೇ ಪ್ರವಾಸಿಗರ ಸುರಕ್ಷತೆಯ ದೃಷ್ಟಿಯಿಂದ ಮುನ್ನೆಚ್ಚರಿಕಾ ಕ್ರಮಗಳನ್ನೂ ಕೈಗೊಳ್ಳಲಾಗಿದೆ.  ಇನ್ನು ನಿಮ್ಮ ಮಕ್ಕಳನ್ನೂ ಇಲ್ಲಿಗೆ ಕರೆದುಕೊಂಡು ಬರಲು ಇನ್ನೇಕೆ ತಡ?

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed