Search
  • Follow NativePlanet
Share
ಮುಖಪುಟ » ಸ್ಥಳಗಳು » ತಿರುವನಂತಪುರಂ » ಆಕರ್ಷಣೆಗಳು » ಅಕ್ಕುಲಮ್ ಸರೋವರ

ಅಕ್ಕುಲಮ್ ಸರೋವರ, ತಿರುವನಂತಪುರಂ

2

ಅಕ್ಕುಲಮ್ ಸರೋವರ ತಿರುವನಂತಪರಂದಿಂದ 10 ಕಿ. ಮೀ ದೂರದಲ್ಲಿದೆ. ಇಲ್ಲಿ ಪ್ರಕೃತಿ ಸೌಂದರ್ಯ ಮನ ಸೆಳೆಯುವಂತಿದ್ದು ಅತ್ಯಂತ ರಮಣೀಯವಾಗಿದೆ. ಈ ಸ್ಥಳ ಪಿಕ್ ನಿಕ್ ಹೋಗಲು, ಒಬ್ಬರನ್ನೊಬ್ಬರು ಭೇಟಿ ಮಾಡಲು ಸೂಕ್ತ ಸ್ಥಳವಾಗಿದೆ. ಅಷ್ಟೇ ಅಲ್ಲದೆ ಈ ಸ್ಥಳ ಪ್ರವಾಸಿಗರನ್ನೂ ಹೆಚ್ಚಾಗಿ ಆರ್ಕಷಿಸುತ್ತದೆ.  ಅಕ್ಕೂಲಮ್ ಸರೋವರಕ್ಕೆ  ಬಂದರೆ ಬೋಟಿಂಗ್ ಮಾಡಬಹುದು. ಇದರಿಂದ ಸಾಹಸಿಗಳಿಗಂತೂ ಎಲ್ಲಿಲ್ಲದ ಸಂತೋಷ. ಸರೋವರದ ತಡದಲ್ಲಿ  ಬೀಸುವ ತಣ್ಣನೆಯ ಗಾಳಿ ಎಲ್ಲರ ಮನಸ್ಸಿಗೆ ಮುದ ನೀಡುತ್ತದೆ.ಮಕ್ಕಳು ಮರಳಿನಲ್ಲಿ ಗೋಪುರ ಮಾಡಿ ಆಡುವುದಕ್ಕೆಂದೆ ಇಲ್ಲಿ ಬರುತ್ತಾರೆ. ಇಲ್ಲಿ ಸಂಜೆಯ ಸಮಯವನ್ನು ಕಳೆಯುವುದಂತೂ ಇನ್ನೂ ಮನ ಮೋಹಕ.

ಅಕ್ಕುಲಮ್ ಸರೋವರ ವೆಲಿ ಸರೋವರದ  ಒಂದು ಭಾಗವಾಗಿದ್ದು, ಈ ಸರೋವರ ಸಮುದ್ರವನ್ನು ಸೇರುತ್ತದೆ. ಅಕ್ಕುಲಮ್ ಪ್ರವಾಸಿಗರ ಗ್ರಾಮ ಈ ಸರೋವರದ ದಡದಲ್ಲಿದೆ. ಈ ಪ್ರವಾಸಿಗರ ಗ್ರಾಮದಲ್ಲಿ ಸಾಕಷ್ಟು ಮನೋರಂಜನೆಗಳನ್ನು ನೀವು ಪಡೆಯಬಹುದು. ಈ ಸರೋವರದಲ್ಲಿ ಈಜುವುದು, ನೀರಿನಲ್ಲಿ ಆಡುವುದು  ಸ್ವರ್ಧೆ  ಹೀಗೆ ಹತ್ತು ಹಲವು ಮನಸ್ಸಿಗೆ ಖುಷಿಕೊಡುವಂತಹ  ಚಟುವಟಿಕೆಗಳು  ನಡೆಯುತ್ತಿರುತ್ತವೆ. ಇಲ್ಲಿ ಪ್ರವಾಸಿಗರಿಗೆ ಈಜಲು ಮುಕ್ತ ಪ್ರವೇಶ ಕಲ್ಪಿಸಿಕೊಡಲಾಗಿದೆ. ಆದರೆ ಮಕ್ಕಳನ್ನು ನೀರಿನಲ್ಲಿ ಈಜಾಡಲು ಬಿಡುತ್ತಿರಾದರೆ ಜಾಗ್ರತೆ ವಹಿಸುವುದು ಒಳ್ಳೆಯದು.

One Way
Return
From (Departure City)
To (Destination City)
Depart On
24 Jul,Fri
Return On
25 Jul,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Jul,Fri
Check Out
25 Jul,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Jul,Fri
Return On
25 Jul,Sat