1799ರಲ್ಲಿ ಚೋಳ ರಾಜನಾದ ಸೇರ್ಫಾಜಿ ಅವರು ಶ್ವಾರ್ಟ್ಜ್ ಚರ್ಚ್ ಅನ್ನು ಕಟ್ಟಿಸಿದರು. ತಂಜವೂರ್ ಅರಮನೆಯ ಹೋದೊಟದಲ್ಲಿರುವ ಇದನ್ನು, ಡಚ್ ಮಿಷನ್ ನ ಅಧಿಕಾರಿಯಾಗಿದ್ದ ಸರ್ ಫ್ರೆಡ್ರಿಕ್ ಕ್ರಿಶ್ಚಿಯನ್ ಶ್ವಾರ್ಟ್ಜ್ ಅವರ ಮೇಲಿನ ಪ್ರೀತಿ ಹಾಗೂ ಗೌರದ ಪ್ರತೀಕವಾಗಿ ರಾಜರು ನಿರ್ಮಿಸಿದ್ದರು. ಶ್ವಾರ್ಟ್ಜ್ ಚರ್ಚ್ ಇಂದಿಗೂ ಚೋಳ ದೊರೆಗಳ ವಿಶಾಲ ಹೃದಯ ಹಾಗೂ ಇತರ ಧರ್ಮಗಳ ಬಗ್ಗೆ ಇದ್ದ ಸಹಿಷ್ಣುತೆಯನ್ನು ಪ್ರತಿಬಿಂಬಿಸುತ್ತದೆ.
ಚರ್ಚ್ ನಲ್ಲಿ ಜಾನ್ ಫ್ಲಾಕ್ಸ್ಮನ್ ಅವರು ರಚಿಸಿದಂತಹ ಒಂದು ಸ್ಮಾರಕವಿದೆ. ಅದರಲ್ಲಿ ತಂಜಾವೂರಿನ ರಾಜ ಒಬ್ಬ ಹಿರಿಯ ಪಾದ್ರಿಯ ಅನುಗ್ರಹ ಪಡೆಯುವ ಕೆತ್ತನೆಯಿದೆ. ಇದು ಬಿಳಿ ಕಲ್ಲಿನ ಮೇಲೆ ಕೆತ್ತಲಾಗಿದ್ದು ಯಾತ್ರಿಕರ ಮುಖ್ಯ ಆಕರ್ಷಣೆಯಾಗಿದೆ.
ಶ್ವಾರ್ಟ್ಜ್ ಚರ್ಚ್ ನ್ನು ಸಮುದ್ರದಾಚೆಗೂ ಒಂದು ಮುಖ್ಯ ತೀರ್ಥಕ್ಷೆತ್ರವಾಗಿ ಪರಿಗಣಿಸಿರುವುದು ತಂಜಾವೂರಿನ ಸಂಸ್ಕೃತಿಯ ಬಲದಿಂದಲಾಗಿದೆ.


Click it and Unblock the Notifications