ಶ್ರೀ ವಿಲ್ಲಿಪುತೂರ್ - ತಮಿಳು ನಾಡಿನ ದೇವಸ್ಥಾನಗಳ ನಗರ

ತಮಿಳುನಾಡಿನ ವಿರುಧಿನಗರ ಜಿಲ್ಲೆಯಲ್ಲಿರುವ ಶ್ರೀವಿಲ್ಲಿಪುತೂರ್ ರಾಜ್ಯದ ಅತ್ಯಂತ ಮಂಗಳಕರವಾದ ದೇವಾಲಯಗಳ ನಗರ ಎಂದೇ ಹೆಸರುವಾಸಿಯಾಗಿದೆ. ಹಲವಾರು ಕಾರಣಗಳಿಂದ ಈ ನಗರ ಜನಪ್ರಿಯಗೊಂಡಿದೆ. ತನ್ನದೇ ಸ್ವತ್ತನ್ನು ಹೊಂದಿರುವ ಪುರಾತನ ಇತಿಹಾಸವನ್ನು ಈ ಸ್ಥಳ ಹೊಂದಿದೆ. ಇಲ್ಲಿನ ದೇವಸ್ಥಾನಗಳು ದೇಶದಾದ್ಯಂತ ಹೆಸರುವಾಸಿಯಾಗಿದೆ ಮತ್ತು ಇದು ತುಂಬಾ ಶ್ರೇಯಸ್ಕರ ದೇವಸ್ಥಾನ ಎಂದು ರಾಜ್ಯದ ಜನರಿಂದ ಪೂಜಿಸಲ್ಪಟ್ಟಿದೆ.

ಈ ಸ್ಥಳದ ಜನಸಂಖ್ಯೆ ಎಪ್ಪತ್ತಮೂರು ಸಾವಿರದ ನೂರ ಎಂಬತ್ತಮೂರು. ಅದರಲ್ಲಿ ಪುರುಷರ ಸಂಖ್ಯೆ ಮೂವತ್ತಾರು ಸಾವಿರದ ನಾಲ್ಕು ನೂರ ಹನ್ನೊಂದಾಗಿದ್ದರೆ ಮಹಿಳೆಯರ ಸಂಖ್ಯೆ ಮೂವತ್ತಾರು ಸಾವಿರದ ಏಳುನೂರ ಎಪ್ಪತ್ತೆರಡು. ನಗರದಲ್ಲಿ ಹದಿನೆಂಟು ಸಾವಿರದ ಒಂಬೈ ನೂರು ಹನ್ನೊಂದು ಮನೆಗಳಿವೆ.

ಹಾಲುಕೋವ ಎಂಬ ಸಿಹಿ ತಿನಿಸನ್ನು ಇಲ್ಲಿ ತಯಾರಿಸಲಾಗುತ್ತದೆ ಮತ್ತು ಇದು ಇಡೀ ತಮಿಳುನಾಡಿನಲ್ಲೇ ಹೆಸರುವಾಸಿ ಆಗಿದೆ. ಇದನ್ನು ಹಾಲು ಮತ್ತು ಸಕ್ಕರೆಯಿಂದ ತಯಾರಿಸಲಾಗುವ ಇದು ತಿನ್ನಲು ಬಹಳ ರುಚಿಕರವಾಗಿರುತ್ತದೆ. ಹನ್ನೊಂದು ಗೋಪುರವಿರುವ ಶ್ರೀ ವಿಲ್ಲಿಪುತೂರ್ ದೇವರಿರುವ ಗೋಪುರ ನಗರದ ಹೆಗ್ಗುರುತಾಗಿದೆ.ಇದನ್ನು ವತಪತ್ರಸಾಯಿ ದೇವರೆಂದೂ ಕರೆಯಲಾಗಿದೆ ಇದು ತುಂಬಾ ಶಕ್ತಿಯುತವಾದ ದೇವರೆನ್ನಲಾಗಿದೆ.ಪ್ರತಿವರ್ಷ ಇಲ್ಲಾಗುವ ಕೆಲವು ಮಹಾ ಹಬ್ಬಗಳು ಜನಪ್ರಿಯತೆ ಪಡೆದಿವೆ.

ಶ್ರೀ ವಿಲ್ಲಿಪುತೂರ್ ಮತ್ತು ಹತ್ತಿರದ ಪ್ರವಾಸಿ ಸ್ಥಳಗಳು:

ಸಾಕಷ್ಟು ಕುತೂಹಲಕಾರಿ ಸ್ಥಳಗಳು ಈ ಪ್ರದೇಶದಲ್ಲಿದೆ.ಮುಖ್ಯವಾದುದು ಶ್ರೀ ಅಂದಲ್ ದೇವಸ್ಥಾನ.ಇದು ನೂರ ಎಂಟು ದಿವ್ಯ ದಶ ವನ್ನು ಹೊಂದಿರುವುದರಿಂದ ಶ್ರೇಯಸ್ಕರ ಎಂದು ಪರಿಗಣಿಸಲಾಗಿದೆ.ಇಲ್ಲಿರುವ ದೇವರು ವಿಷ್ಣು.

ಪರಿಜ್ವರ್ ಮತ್ತು ಅಂದಾಲ್ ಎಂಬ 2 ತಮಿಳು ಇತಿಹಾಸ ಈ ಪ್ರದೇಶದಲ್ಲಿ ಹುಟ್ಟಿದೆ.ಜೊತೆಗೆ ವತಪತ್ರ ಸಾಯಿ ಎಂಬ ದೇವಸ್ಥಾನ ಕೂಡ ಇಲ್ಲಿದೆ ಮತ್ತು ಈ ದೇವರನ್ನು ರಂಗಮನ್ನರ್ ಎನ್ನಲಾಗಿದೆ.ಧಾರೆ ಸಮಯದಲ್ಲಿ ಆಲದ ಮರದ ಎಲೆಯ ಮೇಲೆ ಮಗುವಿನ ರೂಪದಲ್ಲಿ ಈ ದೇವ ವಿಶ್ರಮಿಸುತ್ತಾನೆ ಆದ್ದರಿಂದ ಈ ಎಲೆಯನ್ನು ವಾತಪತ್ರ ಎನ್ನಲಾಗಿದೆ .

ಇಲ್ಲಿಗೆ ಹತ್ತಿರದಲ್ಲಿ ಸತುರಗಿರಿ ಬೆಟ್ಟವಿದೆ.ಇಲ್ಲಿ ಸಿದ್ಧ ದೇವರ ನಿವಾಸಸ್ಥಾನ ಕಾಣಬಹುದು.ಮಾಧವ ವಿಲಗಂ ವಿಧ್ಯಾನಾಥ ದೇವಸ್ಥಾನದಲ್ಲಿ ಆರು ಅಡಿ ಎತ್ತರದ ನಾಗರಾಜ ಚಿತ್ರಣವಿದೆ.ಈ ದೇವಸ್ಥಾನವು ಇದರದೇ ಆದ ಇತಿಹಾಸವನ್ನು ಹೊಂದಿದೆ.ಶ್ರೀವಿಲ್ಲಿಪುತೂರ್ ನಿಂದ 9 ಕಿ ಮೀ ಅಂತರದಲ್ಲಿ ಕೊತ್ತಳಗರ್ ಇರುವ ಕೊತ್ತಳಗರ್ ದೇವ ದೇವಾಲಯವಿದೆ.ಈ ದೇವಸ್ಥಾನ ಮಂತುಗ ಬೆಟ್ಟದಲ್ಲಿದೆ.ಈ ಸ್ಥಳದಲ್ಲಿ ವರ್ಷಪೂರ್ತಿ ತೀರ್ಥ ನೀರು ಹರಿಯುತ್ತಿರುತ್ತದೆ.

ತಿರುವಿಗ ತೀರು ಹಬ್ಬ ಎಂದು ಕರೆಯಲಾಗುವ ಜಾತ್ರೆಗೆ ಸಾಕಷ್ಟು ಜನರು ಈ ನಗರಕ್ಕೆ ಬರುತ್ತಾರೆ.ಈ ಹಬ್ಬ ತುಂಬಾ ಜನಪ್ರಿಯವಾಗಿದೆ.ತಮಿಳು ಇತಿಹಾಸ ಮತ್ತು ಸಂಸ್ಕೃತಿಯನ್ನು ವೀಕ್ಷಿಸಲು ಸಹಸ್ರಾರು ಪ್ರವಾಸಿಗರು ಈ ಕ್ಷೇತ್ರಗಳಿಗೆ ಆಗಮಿಸುತ್ತಾರೆ.

ಸ್ಥಳದ ಇತಿಹಾಸ :

ಹಲವಾರು ವರ್ಷಗಳ ಹಿಂದೆ ದೇವಸ್ಥಾನಗಳ ನಗರವಾದ ಶ್ರೀವಿಲ್ಲಿಪುತೂರ್ ಅನ್ನು ರಾಣಿ ಮಲ್ಲಿ ಆಳ್ವಿಕೆ ನಡೆಸುತ್ತಿದ್ದಳು ಎನ್ನಲಾಗಿದೆ.ವಿಲ್ಲಿ ಮತ್ತು ಕಂದನ್ ಎಂಬುವವರು ರಾಣಿಯ ಇಬ್ಬರು ಪುತ್ರರು. ಈ ಇಬ್ಬರು ಮಕ್ಕಳು ಕಾಡಿನಲ್ಲಿ ಬೇಟೆಯಾಡುತ್ತಿದ್ದಾಗ ಕಂದನ್ ಅನ್ನು ಹುಲಿ ಸಾಯಿಸಿತು.ವಿಲ್ಲಿಗೆ ತಾನು ಮಲಗಿದ್ದಾಗ ಸಹೋದರ  ಕಂದನ್ ನನ್ನು ಹುಲಿ ಸಾಯಿಸಿದ್ದರ ಬಗ್ಗೆ ದೇವರಿಂದ ಮಾಹಿತಿ ಸಿಕ್ಕಿತು.ಈ ದೈವಿಕ ಆಜ್ಞೆಯ ಮೂಲಕ ವಿಲ್ಲಿಯು ಕಾಡಿನ ಮಧ್ಯದಲ್ಲಿ ಒಂದು ನಗರವನ್ನು ಸ್ಥಾಪಿಸಿದನು ಮತ್ತು ಈ ನಗರ ಅತ್ಯಂತ ಸುಂದರವಾಗಿದೆ.

ಈ ನಗರದ ಮೊದಲ ಹೆಸರು ವಿಲ್ಲಿಪುತ್ತರ್ ಎಂದಾಗಿತ್ತು ಆ ನಂತರ ಇಲ್ಲಿ ಶ್ರೀ ಅಂಡಾಳ ದೇವರ ಉಗಮವಾದುದರಿಂದ ಶ್ರೀವಿಲ್ಲಿಪುತ್ತರ್ ಎಂದು ಚಿರಪರಿಚಿತವಾಯಿತು.ತಮಿಳರಲ್ಲಿ ಇದನ್ನು ತಿರುವಿಲ್ಲಿಪುತ್ತುರ್ ಎಂದು ಕರೆಯುತ್ತಾರೆ.ಈ ನಗರವನ್ನು ತಮಿಳಿನ ಪಟ್ಯಪುಸ್ತಕಗಳಲ್ಲಿ ಕಾಣಬಹುದು ಮತ್ತು ಹಲವಾರು ಸಂತರು ತಮ್ಮ ಸಾಹಿತ್ಯದಲ್ಲಿ ಈ ನಗರವನ್ನು ಉಲ್ಲೇಖಿಸಿದ್ದಾರೆ.

ಶ್ರೀವಿಲ್ಲಿಪುತ್ತೂರ್ ಅನ್ನು ವೀಕ್ಷಿಸಲು ಉತ್ತಮ ಕಾಲ :

ವಸಂತ ಕಾಲವು ಈ ನಗರವನ್ನು ನೋಡಲು ಉತ್ತಮ ಕಾಲವಾಗಿದೆ.

ಶ್ರೀವಿಲ್ಲಿಪುತ್ತೂರು ತಲುಪುವುದು ಹೇಗೆ ?

ಇತರ ಮುಖ್ಯ ನಗರಗಳಿಂದ ರೈಲು ಮತ್ತು ರಸ್ತೆ ಮಾರ್ಗವಾಗಿ ತಲುಪಬಹುದು.ಮಧುರೈ ಹತ್ತಿರದ ವಿಮಾನ ನಿಲ್ದಾಣವಾಗಿದೆ.

Please Wait while comments are loading...