Search
  • Follow NativePlanet
Share
ಮುಖಪುಟ » ಸ್ಥಳಗಳು » ಶ್ರೀವಿಲ್ಲಿಪುತೂರ್ » ಹವಾಮಾನ

ಶ್ರೀವಿಲ್ಲಿಪುತೂರ್ ಹವಾಮಾನ

ಶ್ರೀ ವಿಲ್ಲಿಪುತೂರ್ ಗೆ ಭೇಟಿ ನೀಡಲು ವಸಂತ ಕಾಲ ಸೂಕ್ತ ಕಾಲ ಏಕೆಂದರೆ ಈ ಸಮಯದಲ್ಲಿ ಇಡೀ ನಗರ ಹೊಸ ರೂಪ ಪಡೆದಿರುತ್ತದೆ. ಬೇಸಿಗೆಗೆ ಮೊದಲು ಮತ್ತು ಚಳಿಗಾಲ ಮುಗಿದ ಮಧ್ಯದ ಕಾಲದಲ್ಲಿ ನಗರವನ್ನು ಆನಂದಿಸಬಹುದು. ಈ ಸಮಯದಲ್ಲಿ ಉಷ್ಣಾಂಶ ಸರಾಸರಿ 25 ರಿಂದ 28 ಡಿಗ್ರಿ ಸೆಲ್ಸಿಯಸ್ ವರೆಗೆ ಇರುತ್ತದೆ.

ಬೇಸಿಗೆಗಾಲ

ರಾಜ್ಯದ ಇತರ ನಗರಗಳಂತೆ ಶ್ರೀವಿಲ್ಲಿಪುತೂರ್ ನಲ್ಲಿ ಬೇಸಿಗೆ ತುಂಬಾ ಬಿಸಿಲಿನಿಂದ ಕೂಡಿರುತ್ತದೆ.ಆದರೆ ಸಂಜೆ ಸಮಯದಲ್ಲಿ ತಂಪಾಗುತ್ತದೆ ಮತ್ತು ನದಿ ಪಕ್ಕದಲ್ಲಿ ಕುಳಿತು ತಂಪು ಗಾಳಿ ತೆಗೆದುಕೊಳ್ಳಲು ಸುಂದರವಾಗಿರುತ್ತದೆ.ಈ ಕಾಲದಲ್ಲಿ ಸರಾಸರಿ ಉಷ್ಣಾಂಶ 35 ರಿಂದ 38 ಡಿಗ್ರಿ ಸೆಲ್ಸಿಯಸ್.

ಮಳೆಗಾಲ

ಮಳೆಗಾಲದಲ್ಲಿ ಭಾರೀ ಮಳೆಯಾಗುವುದರಿಂದ ಈ ಸಮಯದಲ್ಲಿ ನಗರ ತಂಪಾಗಿರುತ್ತದೆ. ಮಳೆಗಾಲದಲ್ಲಿ ಇಲ್ಲಿನ ವಾತಾವರಣ ಸುಂದರವಾಗಿದ್ದು ಹಳೆಯ ನೆನಪುಗಳನ್ನು ಮೂಡಿಸುತ್ತದೆ. ಇಲ್ಲಿ ಒಳಚರಂಡಿ ವ್ಯವಸ್ಥೆಗಳು ಸರಿಯಾಗಿದ್ದು ನಗರದಲ್ಲಿ ನೀರು ಹೊರಬರದಂತೆ ಕಾಪಾಡುತ್ತವೆ.

ಚಳಿಗಾಲ

ಚಳಿಗಾಲದಲ್ಲಿ ಇಲ್ಲಿನ ಸರಾಸರಿ ಉಷ್ಣಾಂಶ 15 ರಿಂದ 18 ಡಿಗ್ರಿ ಸೆಲ್ಸಿಯಸ್ ಮತ್ತು ಅಲ್ಲಿನ ನಾಗೀಕರಿಗೆ ಈ ಕಾಲ ಆನಂದದಾಯಕವಾಗಿರುತ್ತದೆ. ಇದು ಉತ್ತಮ ಕಾಲ ಜೊತೆಗೆ ಮಧ್ಯಾನ್ಹದ ಎಳೆಬಿಸಿಲು ಕೂಡ ಸೊಗಸಾಗಿರುತ್ತದೆ. ದಕ್ಷಿಣ ಭಾಗದಲ್ಲಿ ಇರುವ ಬೇರೆ ಬೇರೆ ತಂಪು ಪ್ರದೇಶಗಳಷ್ಟು ತಂಪು ಇಲ್ಲಿರುವುದಿಲ್ಲ.