Search
  • Follow NativePlanet
Share
ಮುಖಪುಟ » ಸ್ಥಳಗಳು » ಶ್ರೀನಗರ » ಆಕರ್ಷಣೆಗಳು » ಬುರ್ಝಾಹೋಮ್

ಬುರ್ಝಾಹೋಮ್, ಶ್ರೀನಗರ

1

ಬುರ್ಝಾಹೋಮ್ ಐತಿಹಾಸಿಕ ಮಹತ್ವ ಪಡೆದ ಶ್ರೀನಗರದ ಸುಂದರವಾದ ನಗರ. ಇದು ವಾಸ್ತುಶಿಲ್ಪದ ಕಾರಣದಿಂದಲೂ ಪ್ರಾಮುಖ್ಯತೆಯನ್ನು ಪಡೆದಿದೆ. ಇದು ಶಾಲಿಮಾರ್ ಉದ್ಯಾನದ ವಾಯುವ್ಯ ಭಾಗದಲ್ಲಿದೆ. ಇಲ್ಲಿ ಕ್ರಿ.ಪೂ 3000 ರಿಂದ 1500 ರ ವರೆಗೆ ನವಶಿಲಾಯುಗದ ವಸಾಹತುಗಳು ಇದ್ದವು ಎಂದು ಹೇಳಲಾಗಿದೆ. ಇಲ್ಲಿ ಕಂಡುಬಂದ ಹಳೆಯ ಮನೆಗಳು ನೆಲದಡಿಯ ಕುಳಿಯಲ್ಲಿರುವ ಮನೆಗಳಾಗಿವೆ. ಕ್ರಿ.ಪೂ 2000 ರ ನಂತರ ಮನೆಗಳನ್ನು ಮಣ್ಣಿನಿಂದ ನೆಲದ ಮೇಲೆ ಕಟ್ಟಲಾಗುತ್ತಿತ್ತು.

ಬುರ್ಝಾಹೋಮ್ ಎಂದರೆ ಸ್ಥಳೀಯ ಭಾಷೆಯಲ್ಲಿ 'ಬರ್ಚ್ ಮರಗಳ ಸ್ಥಳ' ಎಂಬುದಾಗಿದೆ. ಇಲ್ಲಿ ಉತ್ಖನನ ಮಾಡುವ ವೇಳೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಸುಟ್ಟ ಬರ್ಚ್ ಮರಗಳು ದೊರೆತದ್ದು ಇದಕ್ಕೆ ಕಾರಣವಾಗಿದೆ. ಇದರ ಅರ್ಥ ನವಶಿಲಾಯುಗದ ಸಂದರ್ಭದಲ್ಲಿ ಬರ್ಚ್ ಮರಗಳು ಇಲ್ಲಿ ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಿದ್ದವು ಎಂಬುದಾಗಿದೆ.

ಇಲ್ಲಿ ಸುಮಾರು ಆರು ವರ್ಷಗಳ ಕಾಲ ಉತ್ಖನನ ಕೆಲಸ ನಡೆಯಿತು. ಇದು 1961 ರಿಂದ 1968 ರ ನಡುವೆ ನಡೆಯಿತು. ಈ ಉತ್ಖನನದ ಸಮಯದಲ್ಲಿ ಮಾನವನ ಅಸ್ಥಿಪಂಜರಗಳೂ ದೊರೆತಿವೆ. ವೈಜ್ಞಾನಿಕ ಸಂಶೋಧನೆಗಳು ಈ ಅಸ್ಥಿಪಂಜರಗಳು ನಶಿಲಾಯುಗ-ಬೃಹತ್ ಶಿಲಾಯುಗ ಹಾಗೂ ಇತಿಹಾಸದ ಇತರ ಕಾಲದವು ಎಂದು ಸಾಬೀತಾಗಿದೆ. ಇಲ್ಲಿ ಸಂಗ್ರಹಿಸಲಾದ ಮಾನವ ನಿರ್ಮಿತ ವಸ್ತುಗಳೆಂದರೆ ಮಡಕೆಗಳು, ಬಾಣದ ತುದಿಗಳು, ಪ್ರಾಣಿಗಳ ಅಸ್ಥಿಪಂಜರಗಳು ಮತ್ತು ಇತರೆ ಸಲಕರಣೆಗಳು.

One Way
Return
From (Departure City)
To (Destination City)
Depart On
23 Jul,Thu
Return On
24 Jul,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
23 Jul,Thu
Check Out
24 Jul,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
23 Jul,Thu
Return On
24 Jul,Fri