ಸ್ಪಿತಿಯ ಅತ್ಯಂತ ಜನಪ್ರಿಯ ಸಾಹಸ ಕಾರ್ಯದಲ್ಲಿ ಟ್ರೆಕ್ಕಿಂಗ್ ಕೂಡ ಒಂದು. ಇಲ್ಲಿಗೆ ಟ್ರೆಕ್ಕಿಂಗ್ ಬರುವ ಪ್ರವಾಸಿಗರು ಪಿನ್ ಪಾರ್ವತಿ ಮಾರ್ಗವಾಗಿ ಆಗಮಿಸುತ್ತಾರೆ. ವಿಶೇಷ ಗಮನಕ್ಕಿರಬೇಕಾದ ಅಂಶವೆಂದರೆ ಇಲ್ಲಿಗೆ ಬರಲು ನುರಿತ ಟ್ರೆಕ್ಕರ್‌ಗಳ ಸಲಹೆ ಸೂಚನೆ ಮೇರೆಗೆ ಮಾತ್ರ ಸಾಧ್ಯ. ಟ್ರೆಕ್ಕಿಂಗ್‌ಗೆ ಗುರುತಾದ ಇತರೆ ಮಾರ್ಗಗಳೆಂದರೆ ಖಾಜಾ-ಟಾಬೋ-ಸುಮೋದೋ-ನಾಕೋ ಮಾರ್ಗ, ಖಾಜಾ-ಲಂಗಜಾ-ಹಿಕಿಮ್-ಕೋಮಿಕ್-ಖಾಜಾ ಮಾರ್ಗ, ಖಾಜಾ-ಲೋಸರ್-ಕುಂಜಂಲಾ ಮಾರ್ಗ ಹಾಗೂ ಖಾಜಾ-ಕಿ-ಕಿಬ್ಬರ್-ಗೀತೆ-ಖಾಜಾ ಮಾರ್ಗ.
ಜುಲೈನಿಂದ ಅಕ್ಟೋಬರ್ ನಡುವಿನ ಅವಧಿ ಸ್ಪಿತಿಯಲ್ಲಿ ಟ್ರೆಕ್ಕಿಂಗ್‌ಗೆ ಉತ್ತಮ ಕಾಲ.


Click it and Unblock the Notifications