Search
  • Follow NativePlanet
Share
ಮುಖಪುಟ » ಸ್ಥಳಗಳು » ಸೋನಾಮಾರ್ಗ್ » ಆಕರ್ಷಣೆಗಳು » ವಿಶನಸರ್ ಸರೋವರ

ವಿಶನಸರ್ ಸರೋವರ, ಸೋನಾಮಾರ್ಗ್

1

ಸಮುದ್ರ ಮಟ್ಟದಿಂದ 3710 ಮೀ ಎತ್ತರದಲ್ಲಿರುವ ವಿಶನಸರ್ ಸರೋವರ 1 ಕಿ. ಮೀ ಉದ್ದ ಹಾಗೂ 0.6 ಕಿ.ಮೀ ಅಗಲವಾಗಿದೆ. ಇದು ಸೋನಾಮಾರ್ಗ್ ನಿಂದ ಸುಮಾರು 20 ಕಿ.ಮೀ ದೂರದಲ್ಲಿದೆ. ಈ ಸರೋವರವು ಕಾಶ್ಮೀರ ಕಣಿವೆಯಲ್ಲಿನ ಒಂದು ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ. ಬೇಸಿಗೆ ಕಾಲದಲ್ಲಿ, ಈ ಸರೋವರವು ಸೊಂಪಾದ ಹಸಿರು ಹುಲ್ಲುಗಾವಲುಗಳಿಂದ ಸುತ್ತುವರಿದಿರುತ್ತದೆ. ಆದರೆ ಚಳಿಗಾಲದಲ್ಲಿ ಹೆಪ್ಪುಗಟ್ಟುತ್ತದೆ. ಕೃಷ್ಣಾಸರ ಸರೋವರ ಹಾಗೂ ಹಿಮನದಿಗಳು ವಿಶನಸರ್ ಸರೋವರದ ಪ್ರಮುಖ ಮೂಲಗಳಾಗಿವೆ.

ಈ ಸರೋವರವು ಒಂದು ಸಣ್ಣ ಕಾಲುವೆ ಮೂಲಕ ಹರಿದು ಮುಂದೆ ಎರಡು ಭಾಗಗಳಾಗಿ ವಿಂಗಡಣೆಗೊಳ್ಳುತ್ತದೆ. ಒಂದು ನೀಲಂ ನದಿಯ ಮೂಲವಾಗಿ ಹಾಗೂ ಇನ್ನೊಂದು ಸಿಂಧೂ ನಾಲೆಯ ಉಪನದಿಯಾಗಿ ಮುಂದುವರಿಯುತ್ತದೆ.

ರಸ್ತೆ ಮೂಲಕ ವಿಶನ್ ಸರ್ ಸರೋವರವನ್ನು ತಲುಪಲು, ಪ್ರವಾಸಿಗರು ರಾಷ್ಟ್ರೀಯ ಹೆದ್ದಾರಿ 1ಡಿ. ಯಲ್ಲಿ ಶಿತ್ಕಡಿ ಹಳ್ಳಿಯ ಮೂಲಕ ಸಾಗಿ ನಂತರ ಸುಮಾರು 20 ಕಿ.ಮೀವರೆಗೆ ಕುದುರೆಗಳ ಮೂಲಕ ಸಾಗಬಹುದು. ಈ ಸರೋವರ ಪ್ರದೇಶಕ್ಕೆ, ಸೋನಾಮಾರ್ಗ್ ದ ಇನ್ನೊಂದು ಪ್ರಸಿದ್ಧ ಆಕರ್ಷಣೆಯಾದ, ಸಮುದ್ರ ಮಟ್ಟದಿಂದ 4084 ಮೀ ಎತ್ತರದಲ್ಲಿರುವ ನಿಚಿನೈ ಮಾರ್ಗದ ಮೂಲಕವೂ ಹಾದು ಹೋಗಬಹುದು.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue