ಕೃಷ್ಣಾಸರ್ ಸರೋವರ ಸೋನಾಮರ್ಗ್ ಗೆ ಅತ್ಯಂತ ಹತ್ತಿರದಲ್ಲಿರುವ ಸುಂದರ ಸರೋವರಗಳಲ್ಲಿ ಒಂದು. ಇದು ಸಮುದ್ರ ಮಟ್ಟದಿಂದ 3801 ಮೀ ಎತ್ತರದಲ್ಲಿದೆ. ಈ ಸರೋವರವು ದಟ್ಟ ಕಾಡುಗಳಿಂದ ಆವೃತವಾಗಿದ್ದು ಪ್ರವಾಸಿಗರು ಸಿಹಿ ನೀರಿನ ಮೀನುಗಾರಿಕೆ ಒಳಗೊಂಡಂತೆ ಜಲಕ್ರೀಡೆಗಳ ಚಟುವಟಿಕೆಗಳನ್ನು ಆನಂದಿಸಬಹುದು. ಈ ಸ್ಥಳದ ಹವಾಮಾನವು ಬೇಸಿಗೆ ಕಾಲದಲ್ಲಿ ತಂಪು ಹಾಗೂ ಆಹ್ಲಾದಕರವಾಗಿರುತ್ತದೆ. ಪ್ರವಾಸಿಗರು ಸಮುದ್ರಮಟ್ಟದಿಂದ 4084 ಮೀ ಎತ್ತರದಲ್ಲಿರುವ ನಿಚಿನೈ ಕಣಿವೆ ಮೂಲಕ ಕೃಷ್ಣಾಸರ್ ಸರೋವರವನ್ನು ತಲುಪಬಹುದು. ಈ ಸರೋವರಕ್ಕೆ ಭೇಟಿ ನೀಡಲು ಬಯಸುವ ಪ್ರವಾಸಿಗರು ಇಲ್ಲಿ ಮತ್ತೊಂದು ಸುಂದರ ಮತ್ತು ಜನಪ್ರಿಯ ಪ್ರವಾಸಿ ತಾಣವಾದ ಬಿಸ್ನಸರ್ ಸರೋವರವನ್ನೂ ನೋಡಬಹುದು.


Click it and Unblock the Notifications