Search
  • Follow NativePlanet
Share
ಮುಖಪುಟ » ಸ್ಥಳಗಳು » ಸೋಲನ್ » ಆಕರ್ಷಣೆಗಳು » ಮಜತಲ್ ಪಕ್ಷಿಧಾಮ ಮತ್ತು ಅಭಯಾರಣ್ಯ

ಮಜತಲ್ ಪಕ್ಷಿಧಾಮ ಮತ್ತು ಅಭಯಾರಣ್ಯ, ಸೋಲನ್

1

ಮಜತಲ್ ಪಕ್ಷಿಧಾಮ ಮತ್ತು ಅಭಯಾರಣ್ಯ ಸೋಲನ್ ನ ಪ್ರಸಿದ್ದ ವಿಹಾರ ತಾಣ. 55,670 ಸ್ಕ್ವೇರ್ ಕಿಲೋಮೀಟರ್ ವಿಸ್ತೀರ್ಣದಲ್ಲಿ ಹರಡಿಕೊಂಡಿರುವ ಇದನ್ನು ಮೊಟ್ಟ ಮೊದಲು ಪಕ್ಷಿಧಾಮ ಮತ್ತು ಅಭಯಾರಣ್ಯವೆಂದು ಘೊಷಿಸಿದ್ದು 1962 ರಲ್ಲಿ. ಹಿಮಾಚಲ ಪ್ರದೇಶ ಸರ್ಕಾರದಿಂದ 1974 ರಲ್ಲಿ ಪಕ್ಷಿಧಾಮ ಮತ್ತು ಅಭಯಾರಣ್ಯವೆಂದು ಅಧಿಕೃತವಾಗಿ ನೋಟಿಫೈ ಮಾಡಲಾಯಿತು.

ಅಪರೂಪದ ಇಲ್ಲಿ ಮಾತ್ರ ಕಾಣಸಿಗುವ ಪ್ರಾಣಿ, ಪಕ್ಷಿ, ಸಸ್ಯ ಸಂಕುಲದ ತವರು ಮನೆ ಈ ಅಭಯಾರಣ್ಯ. ಇದು ಹೆಚ್ಚು ಪ್ರಸಿದ್ದವಾಗಿರುವುದು ಗೋರಲ್ಸ್ ಮತ್ತು ಚೀರ್ ಫೀಸಂಟ್ಸ್ ಗಳಿಗೆ. ಗೋರಲ್ ಗಳೆಂದರೆ ಉದ್ದನೆಯ ಸೊಂಡಿಲು ಹೊಂದಿರುವ ಮೇಕೆಯ ಥರದ ಪ್ರಾಣಿಗಳು. ಚೀರ್ ಫೀಸಂಟ್ಸ್ ಗಳೆಂದರೆ ಉದ್ದನೆಯ ಬಾಲವಿರುವ ಪಕ್ಷಿ. ಉಳಿದ ಪ್ರಾಣಿಗಳೆಂದರೆ, ಚಿರತೆ, ಹಿಮಾಲಯದ ಕಪ್ಪು ಕರಡಿ, ಬೊಗಳುವ ಜಿಂಕೆ, ಹಿಮಾಲಯನ್ ಪಾಮ್ ಕಿವೆಟ್, ಕಾಡುಬೆಕ್ಕು, ಹಳದಿ ಗಂಟಲಿನ ಮಾರ್ಟನ್, ಇಂಡಿಯನ್ ವೈಲ್ಡ್ ಕರಡಿ, ಲಂಗೂರ್ ಮಂಗ ಇತ್ಯಾದಿ. ಕಪ್ಪು ಪ್ರಾಂಕೋಲಿನ್ ಮತ್ತು ಓರಿಯಂಟಲ್ ಬಿಳಿ ಬೆನ್ನಿನ ರಣಹದ್ದುಗಳು ಇಲ್ಲಿ ಗುರುತಿಸಬಹುದಾದ ಅಪರೂಪದ ಪಕ್ಷಿಗಳು.

ಶಿಮ್ಲಾ-ಬಿಲಾಸ್ ಪುರ ರಸ್ತೆಯ ಮೂಲಕ ಪ್ರಯಾಣಿಕರು ಈ ಅಭಯಾರಣ್ಯಕ್ಕೆ ತಲುಪಬಹುದು. ಅಭಯಾರಣ್ಯಕ್ಕೆ ನೇರವಾದ ಸಂಚಾರ ಸೌಲಭ್ಯಗಳಿಲ್ಲ. ಶಿಮ್ಲಾ-ಬಿಲಾಸ್ ಪುರ ರಸ್ತೆಯಲ್ಲಿ ಸಿಗುವ ಕಶ್ಲೋಗ್ ಎಂಬಲ್ಲಿ ನಿಂತು ಅಭಯಾರಣ್ಯಕ್ಕೆ ನಡೆದುಕೊಂಡು ಬರಬೇಕು. ಚಳಿಗಾಲದ ಅವಧಿ ಇಲ್ಲಿಗೆ ಭೇಟಿ ನೀಡಲು ಸೂಕ್ತ ಸಮಯ. ಜಂಗಲ್ ಹೌಸ್ ಗಳಲ್ಲಿ ವಸತಿ ಸೌಲಭ್ಯವಿದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed