ಸಿರ್ಸಾ ನಗರ ಮತ್ತು ಸುತ್ತಮುತ್ತಲಿನ ಪ್ರದೇಶವು ಗಗ್ಗರ್ ಕಣಿವೆಯ ಶ್ರೀಮಂತ ಇತಿಹಾಸ ಮತ್ತು ಸಾಂಸ್ಕ್ರುತಿಕತೆಯನ್ನು ಹೊಂದಿದೆ. ಭೂಗರ್ಭ ಇಲಾಖೆಯ ಇದನ್ನು 1967 ಮತ್ತು 1968ರಲ್ಲಿ ನಡೆಸಿದ ಶೋಧನೆಯ ಸಮಯದಲ್ಲಿ ಗಗ್ಗರ್ ಕಣಿವೆಯ 54 ಪ್ರದೇಶ್ವನ್ನು ಅಸ್ತಿತ್ವಕ್ಕೆ ತಂದರು. ಈ ಶೋಧನೆಯ ಸಮಯದಲ್ಲಿ ರಂಗ್ ಮಹಲ್ ಸಂಸ್ಕ್ರುತಿಯ ಪೈಂಟಿಂಗ್, ವರ್ಣರಂಜಿತ ಕೃತಿಗಳು ಲಭ್ಯವಾಯಿತು.
ಭೂಗರ್ಭ ಇಲಾಖೆಯ ಶೋಧನೆಯ ಸಮಯದಲ್ಲಿ ಸಿರ್ಸಾ ಭಾಗದ ಮೂರು ಐತಿಹಾಸಿಕ ಪ್ರದೇಶಗಳು ಅಸ್ತಿತ್ವಕ್ಕೆ ಬಂದವು.
ಅರ್ನಿಯಲ್ ವಾಲಿ: ನಾಲ್ಕು ಎಕರೆ ಮತ್ತು ಹತ್ತು ಅಡಿ ಎತ್ತರದ ದಿಣ್ಣೆ, ಸಿರ್ಸಾ ಭದ್ರಾ ರಸ್ತೆಯಲ್ಲಿದೆ. ಇದು ಸಿರ್ಸಾ ದಕ್ಷಿಣಕ್ಕೆ ಎಂಟು ಕಿಲೋಮೀಟರ್ ದೂರದಲ್ಲಿದೆ.ಇಲ್ಲಿ ಮಧ್ಯಕಾಲೀನ ಯುಗದ ಮುರಿದ ಮಡಿಕೆಗಳ ಚೂರುಗಳು ಕಾಣ ಸಿಗುತ್ತದೆ.
ಸಿಖಂದರ್ ಪುರ್: ಎರಡು ದಿಣ್ಣೆಗಳು ಒಂದು ಮೈಲಿ ಅಂತರದಲ್ಲಿ ಸಿರ್ಸಾದ ಪೂರ್ವಕ್ಕೆ ಹನ್ನೆರಡು ಕಿಲೋಮೀಟರ್ ದೂರದಲ್ಲಿದೆ. ಈ ಶೋಧನೆಯ ಸಮಯದಲ್ಲಿ ಭಾರೀ ಕಲ್ಲಿನ ಬಂಡೆಗಳು, ಇಂದ್ರನ ಶಿಲ್ಪಕೃತಿಗಳು ಮತ್ತು ಶಿವನ ಏಕಮುಖ ಲಿಂಗ, ಮಧ್ಯಕಾಲೀನ ಯುಗದ ದೇವಾಲಯಗಳು, ರಂಗ್ ಮಹಲ್ ಅವಧಿಯ ಮಡಿಕೆಯ ಅವಶೇಷಗಳು ಲಭ್ಯವಾಗಿದೆ.
ಸುಚನ್: ಸಿರ್ಸಾದಿಂದ ಪೂರ್ವಕ್ಕೆ 16 ಕಿಲೋಮೀಟರ್ ದೂರದಲ್ಲಿದೆ, ರಂಗ್ ಮಹಲ್ ಅವಧಿಯ ಮುರಿಯದ ಮಧ್ಯಕಾಲೀನ ಯುಗದ ಅವಧಿಯ ಆರಂಭಿಕ ಸಮಯದ್ದು.


Click it and Unblock the Notifications