ಖಾಸ್ ಪುರ್ ಕಚಾರಿ ರಾಜರ ಮಧ್ಯಕಾಲೀನ ರಾಜಧಾನಿಯಾಗಿತ್ತು. ಇಲ್ಲಿನ ಇಂದು ಪಾಳು ಬಿದ್ದ ಅರಮನೆ ಕಚಾರಿ ರಾಜರ ಆಗಿನ ಕಾಲದ ವೈಭವವನ್ನು ಸಾರುತ್ತದೆ. ಇದು ಹಿಂದಿನ ಕಾಲದಲ್ಲಿ ಇಲ್ಲ್ಲಿ ನಡೆಯುತ್ತಿದ್ದ ಚಟುವಟಿಕೆಗಳ ಸಾಕ್ಷಿ ಇದ್ದಂತಿದೆ.
ಕಚಾರಿ ಕೋಟೆ ಇಲ್ಲಿನ ಪ್ರಮುಖ ಆಕರ್ಷಣೆ. ಕಚಾರಿ ರಾಜವಂಶದ ಪ್ರಮುಖ ಸ್ಥಳವಾಗಿ ಈ ಕೋಟೆ ಕಾರ್ಯ ನಿರ್ವಹಿಸಿತ್ತು. ಸರಳ ಮತ್ತು ಸುಂದರವಾದ ಕೋಟೆಯ ಹೊರತಾಗಿ ಇಲ್ಲಿ ಸೂರ್ಯದ್ವಾರ (ಸೂರ್ಯನ ಬಾಗಿಲು) ಹಾಗೂ ದೇವಾಲಯ (ದೇವರ ಮನೆ) ಇದ್ದು ಬಹಳ ಪ್ರಸಿದ್ಧವಾಗಿದೆ.
18 ನೆಯ ಶತಮಾನದ ಮಧ್ಯಭಾಗದಲ್ಲಿ ಅಲ್ಲಿನ ತನಕ ಆಳ್ವಿಕೆ ನಡೆಸಿದ ಕೊಚ್ ರಾಜ ಮಕ್ಕಳಿಲ್ಲದೆ ಅಸುನೀಗಿದಾಗ ಖಾಸ್ ಪುರ್ ದಿಂಸಾ ಕಚಾರಿ ರಾಜರ ಅಧೀನಕ್ಕೆ ಬಂದಿತು. ಒಮ್ಮೆ ಇದು ದಿಂಸಾ ಕಚಾರಿ ರಾಜರ ಅಧೀನಕ್ಕೆ ಬಂದ ಬಳಿಕ ಖಾಸ್ ಪುರವನ್ನು ತಮ್ಮ ರಾಜಧಾನಿಯನ್ನಾಗಿ ಮಾಡಿದರು ಹಾಗೂ ಕೋಟೆಯನ್ನು ಕಟ್ಟಿಸಿದರು. ನಗರದಿಂದ ಟಾಕ್ಸಿಯ ಮೂಲಕ ಖಾಸ್ ಪುರಕ್ಕೆ ತಲುಪಬಹುದಾಗಿದೆ.


Click it and Unblock the Notifications