ಶಿಮ್ಲಾದಿಂದ 11 ಕಿ ಮಿ ದೂರದಲ್ಲಿರುವ ತಾರಾ ದೇವಿ ದೇವಸ್ಥಾನವು ಶೋಘಿಯ ಜನಪ್ರಿಯ ಧಾರ್ಮಿಕ ಕೇಂದ್ರಗಳಲ್ಲೊಂದಾಗಿದೆ. ತಾರಾ ಪರ್ವತದ ಮೇಲೆ ನೆಲೆಸಿರುವ ಈ ದೇವಾಲಯದ ಅಧಿ ದೇವತೆಯಾದ ತಾರಾ ದೇವಿಯು ಟಿಬೆಟಿಯನ್ ಬೌದ್ಧರ ಪ್ರಮುಖ ದೇವತೆಯಾಗಿದ್ದು, ಇವಳು ಸ್ತ್ರೀ ಶಕ್ತಿಯ ದ್ಯೋತಕವಾದ, ಹಿಂದೂ ದೇವಿ ದುರ್ಗೆಯ ಒಂಬತ್ತು ಸಹೋದರಿಯರಲ್ಲಿ ಒಬ್ಬಳೆಂದು ಪರಿಗಣಿಸಲಾಗುತ್ತದೆ.
ಸುಮಾರು 250 ವರ್ಷಗಳಷ್ಟು ಪುರಾತನವಾದ ಈ ದೇವಾಲಯದಲ್ಲಿರುವ ದೇವತೆಯ ಪ್ರತಿಮೆಯನ್ನು ಪಶ್ಚಿಮ ಬಂಗಾಳದ ಸೇನ್ ರಾಜವಂಶದ ರಾಜರೊಬ್ಬರು ಇಲ್ಲಿಗೆ ತಂದರೆಂಬ ನಂಬಿಕೆಯಿದೆ. ತಾರಾ ದೇವಿಯ ಮರದ ಪ್ರತಿಮೆಯನ್ನು ವೈಷ್ಣವ ಸಂಪ್ರದಾಯದ ಪ್ರಕಾರ ದೇವಸ್ಥಾನದಲ್ಲಿ ಸ್ಥಾಪಿಸಲಾಗಿದ್ದು ಹಿಂದೂ ಹಬ್ಬವಾದ ಶರದ್ ನವರಾತ್ರಿಯ ಸಮಯದಲ್ಲಿ, ದೇವಸ್ಥಾನದ ಆವರಣದಲ್ಲಿ ವಿಶೇಷ 'ಪೂಜೆ' ಹಾಗೂ ಪ್ರಾರ್ಥನೆಯನ್ನು ಆಯೋಜಿಸಲಾಗುತ್ತದೆ.