Search
  • Follow NativePlanet
Share
ಮುಖಪುಟ » ಸ್ಥಳಗಳು » ಶಿವಪುರಿ » ಆಕರ್ಷಣೆಗಳು » ತಾತ್ಯಾಟೋಪಿ ಸ್ಮಾರಕ

ತಾತ್ಯಾಟೋಪಿ ಸ್ಮಾರಕ, ಶಿವಪುರಿ

1

ಭಾರತದ ಸುದೀರ್ಘ ಸ್ವಾತಂತ್ರ್ಯ ಹೋರಾಟದ ನೆನಪಿಗಾಗಿ ತಾತ್ಯಾಟೋಪಿ ಸ್ಮಾರಕವನ್ನು ಇಲ್ಲಿ ನಿರ್ಮಿಸಲಾಗಿದೆ. ಸ್ವಾತಂತ್ರ್ಯ ಪೂರ್ವದ ಇತಿಹಾಸ ಪುಟಗಳನ್ನು ನೋಡಿದರೆ ಸಾಕಷ್ಟು ಜನರು ನಿಸ್ವಾರ್ಥದಿಂದ ಹೋರಾಡಿ ದೇಶಕ್ಕಾಗಿ ಹುತಾತ್ಮರಾಗಿದ್ದಾರೆ. ಇಂಥವರ ಪಟ್ಟಿ ದೊಡ್ಡದಿದ್ದು, ಅವರಲ್ಲಿ ಕೆಚ್ಚೆದೆಯಿಂದ ಹೋರಾಡಿ ಮಡಿದ ತಾತ್ಯಾಟೋಪಿ ಎಂದೇ ಜನಪ್ರಿಯರಾಗಿದ್ದ ರಾಮಚಂದ್ರ ಪಾಂಡುರಂಗ ಟೋಪಿಯೂ ಒಬ್ಬರು. ಇವರ ಸ್ಮರಣಾರ್ಥವಾಗಿ ನಿರ್ಮಿಸಿರುವ ಸ್ಮಾರಕವೇ ತಾತ್ಯಾಟೋಪಿ ಮೆಮೋರಿಯಲ್.

1857ನೇ ಇಸ್ವಿಯಲ್ಲಿ ನಡೆದ ಮೊದಲ ಸ್ವಾತಂತ್ರ್ಯ ಹೋರಾಟದಲ್ಲಿ ಇವರು ಮರಾಠಾ ಮುಖಂಡರಾಗಿದ್ದರು. ಝಾನ್ಸಿರಾಣಿ ಲಕ್ಷ್ಮಿಬಾಯಿ ಬ್ರಿಟಿಷರ ಮೇಲೆ ದಾಳಿ ಮಾಡಿ ಗ್ವಾಲಿಯರ್ ಪ್ರದೇಶವನ್ನು ವಶಪಡಿಸಿಕೊಳ್ಳಲು ಯತ್ನಿಸಿದಾಗ ತಾತ್ಯಾಟೋಪಿ ಅವರು ಝಾನ್ಸಿರಾಣಿಗೆ ಸಾಥ್ ನೀಡಿದ್ದರು. ಅತ್ಯಂತ ನಂಬಿಗಸ್ತ ಗೆಳೆಯ ಎನಿಸಿಕೊಂಡಿದ್ದ ನಾರವಾರ ಪ್ರದೇಶದ ರಾಜ ಮಾನಸಿಂಗ್ ದ್ರೋಹ ಎಸಗಿದ್ದರಿಂದ ತಾತ್ಯಾಟೋಪಿಯನ್ನು ಸೆರೆಹಿಡಿದು 18ನೇ ಏಪ್ರಿಲ್, 1859ಯಲ್ಲಿ ಗಲ್ಲಿಗೇರಿಸಲಾಯಿತು.

ತಾತ್ಯಾಟೋಪಿಯವರ ತಂದೆಗೆ ನ್ಯಾಯವಾಗಿ ಬರಬೇಕಿದ್ದ ಪೆನ್ಷನ್ ಹಣವನ್ನು ಕೊಡಲು ನಿರಾಕರಿಸಿದ್ದರಿಂದ ತಾತ್ಯಾಟೋಪಿಯವರು ವಸಾಹತುಶಾಹಿಯ ವಿರುದ್ಧ ತಮ್ಮ ಹಕ್ಕನ್ನು ಪಡೆದುಕೊಳ್ಳಲು ಸಿಡಿದೆದ್ದಿದ್ದರು. ಕೇವಲ ಇಷ್ಟು ಮಾತ್ರವಲ್ಲದೆ ಗ್ವಾಲಿಯರನ್ನು ಬ್ರಿಟಿಷರಿಂದ ವಶಪಡಿಸಿಕೊಳ್ಳಲು ಸಹ ಸಾಕಷ್ಟು ಹೋರಾಟ ಮಾಡಿದ್ದರು. ಇಯೋಲ ಮತ್ತು ಶಿವಪುರಿಯಲ್ಲಿ ಈ ಕೆಚ್ಚೆದೆಯ ಹೋರಾಟಗಾರನ ಸ್ಮರಣಾರ್ಥವಾಗಿ ಸ್ಮಾರಕವನ್ನು ನಿರ್ಮಿಸಲಾಗಿದೆ. ಈ ಸ್ಥಳದಲ್ಲಿ ಅವರು ದುರಂತ ಅಂತ್ಯ ಕಂಡರು.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue