ಐತಿಹಾಸಿಕ ಶಿವಪುರಿ ಪಟ್ಟಣದಿಂದ ಕೇವಲ 13 ಕಿ.ಮೀ. ದೂರದಲ್ಲಿರುವ ಒಂದು ಪ್ರಾಚೀನ ಸ್ಥಳವೇ ಶ್ರೀ ಶಾಂತಿನಾಥ ದಿಗಂಬರ ಜೈನ ಅತಿಶಯ ಕ್ಷೇತ್ರ. ಇದು ಸುಮಾರ್ 800 ವರ್ಷ ಹಳೆಯ ಮಂದಿರ ಎಂದು ನಂಬಲಾಗಿದೆ. ಸೇಸಾಯಿ ಎಂಬ ಸಣ್ಣ ಪಟ್ಟಣದಲ್ಲಿರುವ ಈ ಸ್ಥಳವನ್ನು ಆಗ್ರಾ-ಮುಂಬೈ ರಾಷ್ಟ್ರೀಯ ಹೆದ್ದಾರಿಯಿಂದ ತಲುಪಬಹುದಾಗಿದೆ. ಹೆಸರೇ ಸೂಚಿಸುವ ಹಾಗೆ ಇದು ಜೈನ ಸಮುದಾಯದವರ ಪವಿತ್ರ ಪೂಜಾ ಸ್ಥಳವಾಗಿದೆ. ಜೈನ ಧರ್ಮ ಮತ್ತು ಅದರ ಇತಿಹಾಸವನ್ನು ಹೆಚ್ಚಿಗೆ ತಿಳಿದುಕೊಳ್ಳಲು ದೇಗಲದ ಆವರಣದಲ್ಲಿ ಒಂದು ಮ್ಯೂಸಿಯಂ ಇದೆ. ಇಲ್ಲಿ ಪ್ರಾಚೀನ ಭಾರತದ ಅನೇಕ ಜೈನ ಪ್ರತಿಮೆಗಳಿವೆ. ಇವು ಪ್ರವಾಸಿಗರಿಗೆ ಜೈನ ಇತಿಹಾಸವನ್ನು ಸಾರುತ್ತವೆ. ಗರ್ಭಗುಡಿಯಲ್ಲಿರುವ ಪ್ರತಿಮೆ ಸುಮಾರು 15 ಅಡಿ ಎತ್ತರವಿದ್ದು, ಕಂದುಬಣ್ಣವನ್ನು ಹೊಂದಿದೆ. ಎಂಟು ಲೋಹಗಳನ್ನು ಕೂಡಿಸಿ ಈ ಪ್ರತಿಮೆಯನ್ನು ಕೆತ್ತಲಾಗಿದೆ ಎಂಬ ನಂಬಿಕೆಯಿದೆ.


Click it and Unblock the Notifications