ಶ್ರೀ ಪಚ್ರಾಯಿ ತೀರ್ಥ ಜೈನರ ಪವಿತ್ರ ಮಂದಿರವಾಗಿದೆ. ಅಸಂಖ್ಯಾತ ಪೂಜಾಸ್ಥಳಗಳನ್ನು ಹೊಂದಿರುವ ಒಂದು ಸಣ್ಣಹಳ್ಳಿ ಪಚ್ರಾಯಿ ತೀರ್ಥ. ಶಿವಪುರಿಯಲ್ಲಿರುವ ಹಲವಾರು ಮಂದಿರಗಳಲ್ಲಿ ಶ್ರೀ ಪಚ್ರಾಯಿ ತೀರ್ಥ ಮತ್ತು ಪಾಣಿಹಾರ ಬರಾಯಿ ಖಾನಿಯಾಗನ್ ತೀರ್ಥ ಉಲ್ಲೇಖಾರ್ಹ. ಪವಿತ್ರ ಪಾಣಿಹಾರ ಸ್ನಾನದ ಘಟ್ಟದಲ್ಲಿ ಸಾಕಷ್ಟು ಭಕ್ತಾದಿಗಳು ಮಿಂದು ತಮ್ಮ ಪಾಪಗಳನ್ನು ತೊಳೆದುಕೊಂಡು ಪುನೀತರಾಗುತ್ತಾರೆ. ಶ್ರೀ ಪಚ್ರಾಯಿ ತೀರ್ಥ ಭಗವಾನ್ ಶೀತಲ್ ನಾಥರಿಗೆ ಸಮರ್ಪಿಸಲಾಗಿದೆ. ಗರ್ಭಗುಡಿಯಲ್ಲಿ ಬೃಹತ್ತಾದ ಪ್ರತಿಮೆಯ ಎತ್ತರವೇ ಆಕರ್ಷಣೀಯವಾಗಿದೆ. ಈ ಪ್ರತಿಮೆ ಅಗಾಧವಾದ ಅತೀಂದ್ರೀಯ ಶಕ್ತಿ ಹೊಂದಿದೆ ಎಂದು ಜನ ನಂಬುತ್ತಾರೆ.


Click it and Unblock the Notifications