ಶಿವಪುರಿಯಲ್ಲಿಯ ಸಿದ್ಧೇಶ್ವರ ಮಂದಿರ ಭಗವಾನ್ ವಿಷ್ಣುವಿಗೆ ಸಮರ್ಪಿಸಿದ ದೇವಸ್ಥಾನ. ಶಿವಪುರಿ ಹೇಗೆ ದಟ್ಟವಾದ ಅರಣ್ಯ ಪ್ರದೇಶಕ್ಕೆ, ವನ್ಯಜೀವಿಗಳಿಗೆ ಹೆಸರುವಾಸಿಯಾಗಿದೆಯೋ ಹಾಗೆಯೆ ಧಾರ್ಮಿಕ ಮತ್ತು ಆಧ್ಯಾತ್ಮಿಕ ಕೇಂದ್ರವೂ ಆಗಿದೆ. ಪ್ರವಾಸಿಗನ ಮೊದಲನೇ ಭೇಟಿಯಲ್ಲಿ ಶಿವಪುರಿಯ ಅಸಂಖ್ಯಾತ ದೇಗುಲಗಳು ಒಂದೇ ರೀತಿಯಲ್ಲಿ ಕಂಡರೂ ಪ್ರತಿಯೊಂದು ಗುಡಿಗಳು ತನ್ನದೇ ಆದ ವೈಶಿಷ್ಟ್ಯವನ್ನು ಪಡೆದಿವೆ. ಎಲ್ಲ ಮಂದಿರಗಳಲ್ಲಿ ಆಧ್ಯಾತ್ಮಿಕತೆ ತುಂಬಿದ್ದು, ಜನರು ಮಂತ್ರ ಪಠಿಸುತ್ತಿದ್ದಂತೆ, ಒಂದು ಬಗೆಯ ಶಕ್ತಿ ಹರಿದಾಡಿದಂತೆ ಭಾಸವಾಗುತ್ತದೆ. ಸಿದ್ಧೇಶ್ವರ ಮಂದಿರದ ಶಿಲ್ಪಕಲೆ ಕೂಡ ಅದ್ಭುತವಾಗಿದೆ. ಹಿಂದೂ ದೇವತೆಗಳಾದ ರಾಮ, ವಿಷ್ಣು, ಶಿವ, ಗಣೇಶ, ಕೃಷ್ಣ, ಪಾರ್ವತಿ, ಲಕ್ಷ್ಮೀ ದೇವಿಯ ವಿಗ್ರಹಗಳು ನಿಜಕ್ಕೂ ಮಾನವ ಮತ್ತು ದೈವದ ಆಧ್ಯಾತ್ಮಿಕ ಸೇತುವೆಯಾಗಿ ಆಯಾ ವ್ಯಕ್ತಿಯ ಅನುಭೂತಿಗೆ ತಕ್ಕಂತೆ ನಿಂತಿವೆ.


Click it and Unblock the Notifications