Search
  • Follow NativePlanet
Share
ಮುಖಪುಟ » ಸ್ಥಳಗಳು » ಶಿವಪುರಿ » ಆಕರ್ಷಣೆಗಳು » ಶಿವಪುರಿ ಜಿಲ್ಲಾ ವಸ್ತುಸಂಗ್ರಹಾಲಯ

ಶಿವಪುರಿ ಜಿಲ್ಲಾ ವಸ್ತುಸಂಗ್ರಹಾಲಯ, ಶಿವಪುರಿ

1

ಮಾನವ ಬಿಟ್ಟುಹೋದ ವಸ್ತುಗಳನ್ನು ಸಂಗ್ರಹಿಸಿ ಇತಿಹಾಸಕ್ಕೆ ಮತ್ತೆ ಜೀವ ಕೊಡುವಲ್ಲಿ ಶಿವಪುರಿ ಜಿಲ್ಲಾ ವಸ್ತುಸಂಗ್ರಹಾಲಯ ಯಶಸ್ವಿಯಾಗಿದೆ. ಶಿವಪುರಿಯಲ್ಲಿರುವ ಸಾಕಷ್ಟು ಸ್ಮಾರಕಗಳು, ಮಂದಿರಗಳು, ಹಿಂದಿನ ಶತಮಾನದ ಪಾಳುಬಿದ್ದ ಕಟ್ಟಡಗಳು ಐತಿಹಾಸಿಕ ಮಹತ್ವವನ್ನು ಸಾರುತ್ತವೆ. ಇದಕ್ಕೆ ಸಂಬಂಧಪಟ್ಟ ಹಾಗೆ ಅನೇಕ ವಸ್ತುಗಳನ್ನು ಮ್ಯೂಸಿಯಂನಲ್ಲಿ ಪ್ರದರ್ಶನಕ್ಕಾಗಿ ಇಟ್ಟಿರುವುದನ್ನು ಕಾಣಬಹುದು. ಶಿವಪುರಿಯ ಉಲ್ಲೇಖ ಸಾಕಷ್ಟು ಹಿಂದೂ ಧರ್ಮಗ್ರಂಥಗಳಲ್ಲಿ, ಪುರಾಣಗಳಲ್ಲಿರುವುದರಿಂದ ಇದು ಧಾರ್ಮಿಕ ಮಹತ್ವವನ್ನು ಪಡೆದುಕೊಂಡಿದೆ. ತಾತ್ಯಾಟೋಪಿ ಮೆಮೋರಿಯಲ್, 6ನೇ ಮತ್ತು 7ನೇ ಶತಮಾನದ ಪ್ರಾಚೀನ ಮಂದಿರಗಳು ಐತಿಹಾಸಿಕ ಮತ್ತು ಸಾಂಸ್ಕೃತಿಕ ಮಹತ್ವವನ್ನು ಸಾರುತ್ತವೆ.

ಸಾವಿರಾರು ವರ್ಷ ಅಲ್ಲದಿದ್ದರೂ ನೂರಾರು ವರ್ಷಗಳ ವಸ್ತುಗಳಿರುವ ಪುರಾತತ್ವ ಸಂಗ್ರಹಾಲಯ ಇಲ್ಲಿನ ಮತ್ತೊಂದು ಆಕರ್ಷಣೆಗಳಲ್ಲೊಂದು. ಇಲ್ಲಿನ ಗ್ರಂಥಾಲಯ ಹಲವಾರು ಐತಿಹಾಸಿಕ ಪುಸ್ತಗಳನ್ನು ಮತ್ತು ಶೈಕ್ಷಣಿಕ ಹೊತ್ತಗೆಗಳನ್ನು ಹೊಂದಿದೆ. ಮರಾಠ ಮತ್ತು ರಜಪೂತರ ಕಾಲದ ಚಿತ್ರಗಳು, ಶಿಲ್ಪಕಲೆಯುಳ್ಳ ವಿಗ್ರಹಗಳು, ನಾಣ್ಯಗಳನ್ನು ಇಲ್ಲಿ ಸಂಗ್ರಹಿಸಿಡಲಾಗಿದೆ. ಇವೆಲ್ಲವನ್ನು ನೋಡುತ್ತಿದ್ದರೆ ಪ್ರವಾಸಿಗನಿಗೆ ಇತಿಹಾಸದ ಪುಟಗಳನ್ನು ತಿರುವಿಹಾಕಿದ ಅನುಭವವಾಗುತ್ತದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed