ಮೋಹಿನಿ ಪಿಕಪ್ ಅಣೆಕಟ್ಟು ಪ್ರದೇಶದಿಂದ ಶಿವಪುರಿಯ ವಿಹಂಗಮ ನೋಟ ಸಾಧ್ಯ. ಶಿವಪುರಿಯ ಎಲ್ಲ ಪಿಕ್ನಿಕ್ ಸ್ಪಾಟ್ ಗಳಲ್ಲಿ ಮೋಹಿನಿ ಪಿಕಪ್ ಅಣೆಕಟ್ಟು ಹೆಚ್ಚು ಅಭಿವೃದ್ಧಿ ಹೊಂದಿದ್ದು, ಗ್ಲಾಸ್ ಹೌಸನ್ನು ಹೊಂದಿದೆ. ಶಿವಪುರಿಯಿಂದ ನಾರವಾರಕ್ಕೆ ಹೋಗುವ ದಾರಿಯಲ್ಲಿ 50 ಕಿ.ಮೀ. ದೂರದಲ್ಲಿರುವ ಇದು ಆಕರ್ಷಕ ಸ್ಥಳಗಳಲ್ಲಿ ಒಂದು. ಈ ಜಲಾನಯನ ಪ್ರದೇಶ ಶಿವಪುರಿ ಮತ್ತು ಸುತ್ತಲಿನ ಪ್ರದೇಶಗಳಿಗೆ ನೀರು ಸರಬರಾಜು ಮಾಡುತ್ತದೆ. ಹಚ್ಚ ಹಸಿರಿನ ಹುಲ್ಲುಗಾವಲು ಇರುವ ಇದರ ಮೇಲೆ ನಿಂತು ಶಿವಪುರಿಯ ವಿಹಂಗಮ ನೋಟ ನೋಡುವುದೇ ಒಂದು ಮಜವಾದ ಅನುಭವ. ಈ ಜಲಾನಯನ ಪ್ರದೇಶ ಮಳೆಗಾಲದಲ್ಲಿ ತುಂಬುವುದರಿಂದ ಈ ಸ್ಥಳ ನೋಡಲು ಮಳೆಗಾಲವೇ ಸೂಕ್ತವಾದ ಸಮಯ.


Click it and Unblock the Notifications