Search
  • Follow NativePlanet
Share
ಮುಖಪುಟ » ಸ್ಥಳಗಳು » ಶಿವಪುರಿ » ಆಕರ್ಷಣೆಗಳು » ಮಹುವಾ ಶಿವಮಂದಿರ

ಮಹುವಾ ಶಿವಮಂದಿರ, ಶಿವಪುರಿ

1

ಇತಿಹಾಸ ಪುಟಗಳಲ್ಲಿ ಇಂದಿಗೂ ಸಹ ಮಹುವಾ ಶಿವಮಂದಿರವು ಅಸಾಧಾರಣ ಸೌಂದರ್ಯ ಹೊಂದಿರುವ ರತ್ನದಂತೆ ಹೊಳೆಯುತ್ತದೆ. ಶಿವಪುರಿಯ ಸಣ್ಣಹಳ್ಳಿಯು 6ನೇ ಮತ್ತು 7ನೇ ಶತಮಾನದ ಅಗಾಧವಾದ ನಿಧಿಸಂಪತ್ತನ್ನು ಹೊಂದಿರುವ ಸ್ಥಳ. ಮಹುವಾ ಕೂಡ ಒಂದು ಪ್ರಾಚೀನವಾದ ಪ್ರದೇಶ. ರಾನೋಡ್ ಶಾಸನದ ಪ್ರಕಾರ, ಮಧುಮತಿಯೆಂಬುದು ಪ್ರಾಚೀನವಾದ ಪ್ರದೇಶ. ಈ ಪ್ರದೇಶದಲ್ಲಿ ಸಣ್ಣಭಾಗವಾಗಿದ್ದುದು ಮಹುವಾ ಹಳ್ಳಿ. ಈ ಶಾಸನವು ಈ ಪ್ರದೇಶದ ಮಹತ್ವ ಮತ್ತು ಶೈವಸೈದ್ಧಾಂತಿಕ ಅನುಯಾಯಿಗಳ ಬಗ್ಗೆ ಹೇಳುತ್ತದೆ.

ಪ್ರಾಚೀನ ಇತಿಹಾಸದಿಂದ ಇಂದಿನವರೆಗೂ ಕೆಲವೇ ಕೆಲವು ಮಂದಿರಗಳು ಮಾತ್ರ ನಮಗೆ ಇತಿಹಾಸದ ಗುರುತಾಗಿ ಅಚ್ಚಳಿಯದೆ ನಿಂತಿದೆ. ಅನೇಕ ಸ್ಮಾರಕಗಳಲ್ಲಿ ಶಿವಮಂಡಪಿಕವೂ ಒಂದು. 7ನೇ ಶತಮಾನದ ಕುರುಹಾಗಿ ನಿಂತಿದೆ. ಈ ಮಂದಿರವನ್ನು ನೋಡಿದರೆ ಒಂದು ಅಪರಿಪೂರ್ಣವಾದ ಮಂದಿರವೆಂದು ಅನಿಸುತ್ತದೆ. 7ನೇ ಶತಮಾನದ ಶಿವಮಂದಿರವು ಶಿವನಿಗೆ ಸಮರ್ಪಣೆಯಾಗಿದೆ. ಇದು ನಾಗರಕಲೆಯ ಶಿಲ್ಪಕಲೆಯನ್ನು ಹೊಂದಿದೆ. ನದಿ ದೇವತೆಗಳಾದ ಗಂಗಾ, ಯಮುನೆಯನ್ನು ಸೂಚಿಸುವ ಕೆತ್ತನೆಕೆಲಸ ಗರ್ಭಗುಡಿಯ ಎರಡೂ ಬದಿಯ ಮುಖ್ಯದ್ವಾರದಲ್ಲಿ ಕಾಣಿಸುತ್ತದೆ.

One Way
Return
From (Departure City)
To (Destination City)
Depart On
25 Apr,Sat
Return On
26 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Sat
Check Out
26 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Sat
Return On
26 Apr,Sun