ಬನಗಂಗಾ ಎನ್ನುವುದು ಶಿವಪುರಿಯಲ್ಲಿನ ಒಂದು ಪ್ರಾಚೀನವಾದ ಶಿವಮಂದಿರ. ಪ್ರವಾಸಿಗ ಇಲ್ಲಿ ಯಾವುದೇ ತಿರುವನ್ನು ತೆಗೆದುಕೊಂಡರೂ 7ನೇ ಶತಮಾನದ ಮಂದಿರದ ಮುಂದೆ ಬಂದು ನಿಲ್ಲುತ್ತಾನೆ. ಬನಗಂಗಾ ಹಿಂದೂಗಳಿಗೆ ಧಾರ್ಮಿಕ ಮಹತ್ವವುಳ್ಳ ಪವಿತ್ರ ಸ್ಥಳವಾಗಿದೆ. ಇಲ್ಲಿ ಪ್ರಾಚೀನವಾದ ಮಂದಿರವಿದ್ದು, ಸುತ್ತ 52 ಪವಿತ್ರವಾದ ತೀರ್ಥಗಳಿವೆ. ಮಹಾಭಾರತದಲ್ಲಿ ಪಾಂಡವರಲ್ಲಿ ಮೂರನೆಯವನಾದ ಅರ್ಜುನನು ಶರಶಯ್ಯೆಯಲ್ಲಿದ್ದ ಭೀಷ್ಮಾಚಾರ್ಯರ ಬಾಯಾರಿಕೆಯನ್ನು ನೀಗಿಸಲು ಬಾಣ ಬಿಟ್ಟು ಗಂಗೆ ಪುಟಿಯುವಂತೆ ಮಾಡಿದ್ದು ಇದೇ ಸ್ಥಳದಲ್ಲಿ ಎಂಬ ಕಥೆ ಜನಜನಿತವಾಗಿದೆ.


Click it and Unblock the Notifications