ಜಖು ಬೆಟ್ಟ, ಶಿಮ್ಲಾ

ಜಖು ಬೆಟ್ಟವು ಸಮುದ್ರ ಮಟ್ಟದಿಂದ ಸುಮಾರು 8000 ಅಡಿ ಎತ್ತರದಲ್ಲಿದೆ. ಅಲ್ಲದೆ ಇದು ರಿಡ್ಜ್ ನಿಂದ 1 ಕಿ.ಮೀ ದೂರದಲ್ಲಿದೆ. ಇದು ಶಿಮ್ಲಾದಲ್ಲಿಯೆ ಅತ್ಯಂತ ಎತ್ತರವಾದ ಬೆಟ್ಟವಾಗಿದೆ. ಹಾಗಾಗಿ ಇದು ಸುತ್ತಲಿನ ಹಿಮಾಲಯ ಪರ್ವತ ಶ್ರೇಣಿಯ ನಯನ ಮನೋಹರ ದೃಶ್ಯಾವಳಿಗಳನ್ನು ನೋಡುವ ಅವಕಾಶ ಕೊಡುತ್ತದೆ. ಪ್ರಸಿದ್ಧವಾದ "ಜಖು" ದೇವಾಲಯವು ಈ ಬೆಟ್ಟದಲ್ಲಿ ನೆಲೆಗೊಂಡಿದೆ. ಹಾಗಾಗಿಯೆ ಇದಕ್ಕೆ ಈ ಹೆಸರು ಬಂದಿದೆ. "ಜಖು" ಎಂಬ ಪದದ ಅರ್ಥ " ಯಕ್ಷ" ಎಂದಾಗುತ್ತದೆ. ಇದರರ್ಥ ಪುರಾಣಗಳ ಪ್ರಕಾರ ದೇವತೆಗಳ ಸಂಪತ್ತನ್ನು ಕಾಯುವ ಜನರು ಎಂದರ್ಥ.  ಜನಪದ ಕತೆಯ ಪ್ರಕಾರ ಈ ದೇವಾಲಯವು ಇಲ್ಲಿ ರಾಮಾಯಣ ಕಾಲದಿಂದಲು ಇದೆಯಂತೆ. ಲಕ್ಷ್ಮಣನು ಮೂರ್ಛೆ ತಪ್ಪಿದಾಗ ಆತನಿಗಾಗಿ ಸಂಜೀವಿನಿ ಮೂಲಿಕೆಯನ್ನು ಹುಡುಕಿ ಹೊರಟ ಆಂಜನೇಯನು ಇಲ್ಲಿ ವಿಶ್ರಾಂತಿ ತೆಗೆದುಕೊಂಡನಂತೆ. ಸಾಹಸ ಪ್ರಿಯರಿಗೆ ಇಲ್ಲಿ ಚಾರಣ ಕೈಗೊಳ್ಳುವ ಅವಕಾಶ ಸಹ ಸಿಗುತ್ತದೆ.

Please Wait while comments are loading...