ಕ್ರೈಸ್ಟ್ ಚರ್ಚ್, ಶಿಮ್ಲಾ

ಮುಖಪುಟ » ಸ್ಥಳಗಳು » ಶಿಮ್ಲಾ » ಆಕರ್ಷಣೆಗಳು » ಕ್ರೈಸ್ಟ್ ಚರ್ಚ್

ಶಿಮ್ಲಾದ ಕ್ರೈಸ್ಟ್ ಚರ್ಚ್ ಉತ್ತರ ಭಾರತದ ಎರಡನೆಯ ಅತ್ಯಂತ ಹಳೆಯ ಚರ್ಚ್ ಎಂಬ ಖ್ಯಾತಿಯನ್ನು ತನ್ನದಾಗಿಸಿಕೊಂಡಿದೆ. ಇದು 1846-1857ರಲ್ಲಿ ಸ್ಥಾಪನೆಗೊಂಡಿತು. ರಿಡ್ಜ್ ಗೆ ಅಭಿಮುಖವಾಗಿ ನಿಂತಿರುವ ಈ ಚರ್ಚ್ ಗಾಜುಗಳ ತುಣುಕು ಮತ್ತು ಕಂಚಿನ ಪಟ್ಟಿಗಳಿಂದ ಅಲಂಕೃತಗೊಂಡಿದೆ. ಈ ಚರ್ಚನ್ನು ಕಲೋನೆಲ್ ಜೆ. ಟಿ. ಬೊಯಿಲೌ ವಿನ್ಯಾಸಗೊಳಿಸಿದರು. ಒಂದು ಗಡಿಯಾರವನ್ನು ಈ ಚರ್ಚಿನ ಗೋಪುರದಲ್ಲಿ 1860ರಲ್ಲಿ ಪ್ರತಿಷ್ಟಾಪಿಸಿದ್ದಾರೆ.

ಪ್ರಸಿದ್ಧ ಲೇಖಕ ರುಡ್‍ಯಾರ್ಡ್ ಕಿಪ್ಲಿಂಗ್‍ರವರ ತಂದೆಯಾದ ಲಾಕ್‍ವುಡ್ ಕಿಪ್ಲಿಂಗ್‍ರವರು ಈ ಇಗರ್ಜಿಯ ಕಿಟಕಿಯಲ್ಲಿ ವೃತ್ತಾಕಾರದ ಫ್ರೆಸ್ಕೋ ಮಾದರಿಯ ಚಿತ್ರವನ್ನು ಬಿಡಿಸಿದ್ದಾರೆ. ಬ್ರಿಟೀಷರ ಆಡಳಿತಾವಧಿಯಲ್ಲಿ ಬ್ರಿಟೀಷ್ ಅಧಿಕಾರಿಗಳು ಮತ್ತು ಅವರ ಮನೆತನದವರು ಈ ಚರ್ಚಿನಲ್ಲಿ ಪ್ರಾರ್ಥನೆ ಸಲ್ಲಿಸಲು ಬರುತ್ತಿದ್ದರು.ಸೆಂಟ್, ಮೈಕೆಲ್ಸ್ ಕ್ಯಾಥೆಡ್ರಲ್ ಈ ಗಿರಿಧಾಮದ ಮೊಟ್ಟ ಮೊದಲ ರೋಮನ್ ಕ್ಯಾಥೋಲಿಕ್ ಚರ್ಚ್ ಆಗಿದೆ. ಇದನ್ನು ಫ್ರೆಂಚ್- ಗೋಥಿಕ್ ವಾಸ್ತುಶೈಲಿಯಲ್ಲಿ 1886ರಲ್ಲಿ ನಿರ್ಮಿಸಲಾಯಿತು. ಅನುಪಮವಾದ ಕಲ್ಲಿನ ಕುಸುರಿ ಕೆಲಸ ಮತ್ತು ಸುಂದರವಾದ ಗಾಜಿನ ಕಿಟಕಿಗಳು ಈ ಕಟ್ಟಡಕ್ಕೆ ಅತ್ಯಾದ್ಭುತವಾದ ಮಾಂತ್ರಿಕ ಸ್ಪರ್ಷವನ್ನು ಒದಗಿಸಿವೆ.

Please Wait while comments are loading...