ಪ್ರವಾಸ ಕೇಂದ್ರ ತಾಣವಗಿರುವ ದಿ ರಾಯಲ್ ಪ್ಯಾಲೆಸ್ ಸಾಂಸ್ಕೃತಿಕ ಸ್ಪರ್ಶವನ್ನು ಹೊಂದಿದ್ದು, ಕಂದು ಬಣ್ಣದ ಇಟ್ಟಿಗೆಗಳಿಂದ ಅದರ ಗೋಡೆಯನ್ನು ನಿರ್ಮಾಣ ಮಾಡಲಾಗಿದೆ. 1755-1803 ರಲ್ಲಿ ಆಳಿದ ರಾಜ ಮೂರನೆ ಕೀಮ್ ಸಾವಂತ ಭೋಸ್ಲೆಯ ಕಾಲದಲ್ಲಿ ಈ ಅರಮನೆಯ ನಿರ್ಮಾಣ ಮಾಡಲಾಗಿದೆ. ಇಲ್ಲಿನ ಗೋಡೆಗಳ ಮೇಲೆ ಹಾಕಿರುವ ಛಾಯಾಚಿತ್ರಗಳು ಗತಕಾಲದ ವೈಭವ ಹಾಗೂ ಸ್ಮಾರಕದ ಇತಿಹಾಸವನ್ನು ತಿಳಿಸುತ್ತದೆ. ಇಲ್ಲಿನ ಕಲಾಕೃತಿಗಳು, ಚಿತ್ರಕಲೆಗಳಿಂದ ಶೃಂಗರಿಸಿದ ಕೋಣೆಗಳು, ಆರ್ಟ್ ಮತ್ತು ಕ್ರಾಫ್ಟ್ ಇವುಗಳನ್ನು ನೋಡುತ್ತಾ ಹೋದರೆ ಮೈಮರೆತು ಗತಕಾದಲ್ಲಿ ಸೇರಿಹೋದರೂ ಆಶ್ಚರ್ಯವಿಲ್ಲ.


Click it and Unblock the Notifications