ಸಾತ್ತಲ್ ಮೀಷನ್ ಎಸ್ಟೇಟ್ ಮತ್ತು ಮೆಥೋಡಿಸ್ಟ್ ಆಶ್ರಮವು ಒಬ್ಬ ಕ್ರಿಶ್ಚಿಯನ್ ಮಿಷನರಿಯಾಗಿದ್ದ ಇ.ಸ್ಟಾನ್ಲೆ ಎಂಬುವವರಿಂದ 1930 ರಲ್ಲಿ ಸ್ಥಾಪಿಸಲ್ಪಟ್ಟಿದೆ.ಇವರು ಮಹಾತ್ಮಾ ಗಾಂಧಿ ಹಾಗು ಮಾರ್ಟಿನ್ ಲೂಥರ್ ಕಿಂಗ್ ಅವರ ಸ್ನೇಹಿತರಾಗಿದ್ದರು. ಆಶ್ರಮವನ್ನು ಕಟ್ಟಲಾದ ಪ್ರದೇಶವು ಮೊದಲು ಚಹಾ ತೋಟವಾಗಿತ್ತು.
1947 ರಲ್ಲಿ ತೆಂಜಿಂಗ್ ನಾರ್ಗೆ ಜೊತೆ ಮೌಂಟ್ ಎವರೆಸ್ಟ್ ಹತ್ತಲು ಪ್ರಯತ್ನಿಸಿದ್ದ ಅರ್ಲ್ ಡೆನ್ಮನ್ ಅವರು ಈ ಆಶ್ರಮದಲ್ಲಿ ಹಲವು ವರ್ಷಗಳ ಕಾಲ ತಂಗಿದ್ದರು. ಆಶ್ರಮದ ಸಂಕೀರ್ಣದಲ್ಲಿ ಸೇಂಟ್ ಜಾನ್ಸ್ ಚರ್ಚ್ ಒಂದಿದ್ದು, ವಸಾಹತು ಕಾಲದ ವಾಸ್ತುಶೈಲಿಯನ್ನು ಪ್ರತಿಬಿಂಬಿಸುತ್ತದೆ. 'ವಾನಪ್ರಸ್ಥ ಆಶ್ರಮ' ಎಂಬ ಹೆಸರಿನಿಂದ ಹೆಸರುವಾಸಿಯಾಗಿ ಕುಮಾವೂನ್ ಪ್ರದೇಶದಲ್ಲಿ ಕ್ರೈಸ್ತ ಧರ್ಮವನ್ನು ಪ್ರಚಾರಿಸಿದೆ.


Click it and Unblock the Notifications