ಬಸ್ಪಾ ನದಿ ಇಲ್ಲಿನ ಪ್ರಮುಖವಾದ ನದಿಯಾಗಿದ್ದು, ಸಾಂಗ್ಲಾದ ಬೆಟ್ಟ ಪ್ರದೇಶಗಳ ನಡುವಿನಿಂದ ಹರಿದು ಬರುತ್ತದೆ. ಈ ನದಿಯು ಹರಿಯುವ ಪ್ರದೇಶದಲ್ಲಿ ಹಚ್ಚ ಹಸಿರಾದ ಗಿಡಮರಗಳಿದ್ದು, ನದಿಯಲ್ಲಿ ಬ್ರೌನ್ ಟ್ರೌಟ್ ಹಾಗೂ ರೈನ್ಬೋ ಟ್ರೌಟ್ ಎಂಬ ವಿಶೇಷವಾದ ಮೀನಿನ ಸಂತಾನ ಕಂಡುಬರುತ್ತದೆ. ನದಿ ದಾಟಲು ಬಳಸುವ ಬ್ಯಾಸ್ಕೆಟ್ ರೈಡ್, ಪ್ರವಾಸಿಗರಿಗೆ ಅತ್ಯಂತ ಆಕರ್ಷಣೀಯವಾಗಿದೆ. ಟ್ರೆಕ್ಕಿಂಗ್ ಹಾಗೂ ಫೈರ್ ಕ್ಯಾಂಪ್ ಇಷ್ಟ ಪಡುವ ಪ್ರವಾಸಿಗರಿಗೆ ಇದು ಒಳ್ಳೆಯ ಸ್ಥಳ. ನದಿಪಾತ್ರದ ಉದ್ದಕ್ಕೂ ದಟ್ಟವಾಗಿ ಬೆಳೆದಿರುವ ದೇವದಾರು ಹಾಗೂ ಓಕ್ ಮರಗಳು ಈ ಸ್ಥಳದ ಸೌಂದರ್ಯವನ್ನು ಹೆಚ್ಚಿಸಿದೆ.


Click it and Unblock the Notifications