Search
  • Follow NativePlanet
Share
ಮುಖಪುಟ » ಸ್ಥಳಗಳು » ಶಬರಿಮಲೆ » ಆಕರ್ಷಣೆಗಳು » ಮಲ್ಲಿಕಾಪ್ಪುರಂ ದೇವಿ ದೇವಾಲಯ

ಮಲ್ಲಿಕಾಪ್ಪುರಂ ದೇವಿ ದೇವಾಲಯ, ಶಬರಿಮಲೆ

1

ಮಲಿಕಾಪ್ಪುರಂ ದೇವಿ ಮಂದಿರ ಅಯ್ಯಪ್ಪ ಸ್ವಾಮಿ ದೇವಸ್ಥಾನದಿಂದ ಕೇವಲ ಎರಡು ನಿಮಿಷದ ನಡಿಗೆಯ ದೂರದಲ್ಲಿದ್ದು ಪುಟ್ಟ ಬೆಟ್ಟದ ಮೇಲೆ ನೆಲೆ ನಿಂತಿದೆ. ಅಯ್ಯಪ್ಪ ದೇವಸ್ಥಾನದ ಬಲಬದಿಯಲ್ಲಿರುವ ಮಲಿಕಾಪುರಂ ದೇವಿ ಮಂದಿರಕ್ಕೆ ಬರುವ ಭಕ್ತರು ಇಲ್ಲಿನ ಬೀಸುವ ತಂಗಾಳಿ ಮತ್ತು ಹಿತವಾದ ವಾತಾವರಣದಿಂದ ಭಾವುಕರಾಗುತ್ತಾರೆ. ಅಯ್ಯಪ್ಪ ಸ್ವಾಮಿ ಮತ್ತು ಮಲಿಕಾಪುರಂ ದೇವಿಗೆ ಸಂಬಂಧಪಟ್ಟಂತೆ ಹಲವಾರು ಐತಿಹ್ಯಗಳಿವೆ. ಒಂದು ಐತಿಹ್ಯದ ಪ್ರಕಾರ, ಕ್ರೂರ ಮಹಿಷಿಯನ್ನು ದೇವರು ಸಂಹರಿಸಿದ ನಂತರ ಒಬ್ಬ ಸುಂದರ ಅಪ್ಸರೆ ಮಹಿಷಿಯ ದೇಹದಿಂದ ಹೊರಬಂದು, ತನ್ನನ್ನು ಮದುವೆಯಾಗುವಂತೆ ದೇವರನ್ನು ಕೇಳಿಕೊಳ್ಳುತ್ತಾಳೆ. ಆದರೆ ಬ್ರಹ್ಮಚರ್ಯದ ಪ್ರತಿಜ್ನೆ ಸ್ವೀಕರಿಸಿದ್ದ ದೇವರು ಇದನ್ನು ನಿರಾಕರಿಸುತ್ತಾನೆ. ದೇವತೆ ನಿರಂತರವಾಗಿ ದೇವರ ಬಳಿಯಲ್ಲಿಯೇ ಉಳಿಯಲು ಬಯಸುತ್ತಾಳೆ. ಹೀಗಾಗಿ ಆ ದೇವತೆಯ ಗೌರವಕ್ಕೆ ದೇವಾಲಯವೊಂದು ಕಟ್ಟಲ್ಪಟ್ಟಿದೆ. ಭಗವತಿ ಸೇವೆ ಮಲಿಕಾಪ್ಪುರಂ ದೇವಸ್ಥಾನದ ಪ್ರಮುಖ ಕಾಣಿಕೆ ಪೂಜೆ. ಕನ್ಮಶಿ, ಪಟ್ಟುದಾಯದ(ರೇಷ್ಮೆ ವಸ್ತ್ರ), ಪೊಟ್ಟು(ಬಿಂದಿ), ಮತ್ತು ವಳ(ಬಳೆಗಳು)ಪ್ರಮುಖ ಕಾಣಿಕೆಗಳು. ಸರ್ಪ ದೇವತೆಗಳ ಪುಟ್ಟ ಮಂದಿರಗಳು ಈ ದೇವಾಲಯದ ಆವರಣದಲ್ಲಿವೆ. ಮಲಿಕಾಪ್ಪುರಂ ದೇವಸ್ಥಾನದಲ್ಲಿ ಅಯ್ಯಪ್ಪ ಭಕ್ತರು ವಿಶಿಷ್ಟವಾದ ತೆಂಗಿನ ಕಾಯಿ ಉರುಳಿಸುವ ಸಂಪ್ರದಾಯ ತೆಂಗೈ ಉರುಟ್ಟು ಆಚರಣೆಯನ್ನು ನಡೆಸುತ್ತಾರೆ.

One Way
Return
From (Departure City)
To (Destination City)
Depart On
08 Jun,Mon
Return On
09 Jun,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Jun,Mon
Check Out
09 Jun,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Jun,Mon
Return On
09 Jun,Tue