ಮೋರಿಂಡಾ ಅಥವಾ ಬಾಗನ್ ವಾಲಾ ಆರ್ಕಿಡ್ ನಗರವೆಂದೇ ಕರೆಯಲ್ಪಡುತ್ತದೆ. ಏಕೆಂದರೆ, ಒಂದು ಕಾಲದಲ್ಲಿ ಈ ಸ್ಥಳವು ಆರ್ಕಿಡ್ ನಿಂದ ತುಂಬಿತ್ತು. ಆದರೆ, ವಸತಿ ಸೌಕರ್ಯ ಕಲ್ಪಿಸಲು ಆ ಸ್ಥಳದಲ್ಲಿ ಕಟ್ಟಡಗಳನ್ನು ನಿರ್ಮಾಣ ಮಾಡಲಾಯಿತು. ಇದು ರಾಷ್ಟ್ರೀಯ ಹೆದ್ದಾರಿ 95 ರಲ್ಲಿ ಉಪಸ್ಥಿತವಿದೆ. ಮೊರಿಂಡಾದ ಮೂಲ ಆಕರ್ಷಣೆ ಎಂದರೆ, ಗುರುದ್ವಾರ ಶ್ರೀ ಕೊತ್ವಾಲಿ ಸಾಹಿಬ್. ಇದೇ ಸ್ಥಳದಲ್ಲಿ ಗುರು ಗೊಬಿಂದಜಿಯವರ ತಾಯಿ ಮತ್ತು ಆಕೆಯ ಇಬ್ಬರು ಮಕ್ಕಳನ್ನು ಫತೇಘರ್ ಗೆ ತೆಗೆದುಕೊಂಡು ಹೋಗುವ ಮೊದಲು, ಸರೆಹಿಡಿಯಲಾಗಿತ್ತು. ಈ ನಗರ ಎರಡು ಮುಖ್ಯ ಹೆದ್ದಾರಿ ಸೇರುವ ಸ್ಥಳದಲ್ಲಿ ಉಪಸ್ಥಿತವಿದೆ. ಪ್ರವಾಸಿಗರು, ರೂಪನಗರದಿಂದ 24 ಕಿ.ಮಿ ದೂರದಲ್ಲಿರುವ ಪ್ರಶಾಂತವಾದ ವಾತಾವರಣವನ್ನು ಹೊಂದಿರುವ ಗುರುದ್ವಾರವನ್ನು ಇಷ್ಟ ಪಡುತ್ತಾರೆ.


Click it and Unblock the Notifications