ಕೋಟೇಶ್ವರ ದೇವಾಲಯ, ರುದ್ರಪ್ರಯಾಗ ಪಟ್ಟಣದಿಂದ 3 ಕಿ. ಮೀ ದೂರದಲ್ಲಿರುವ ಒಂದು ಪ್ರಖ್ಯಾತ ಹಿಂದೂ ದೇವಾಲಯ. ಇದು ಅಲಕನಂದಾ ನದಿಯ ತೀರದಲ್ಲಿರುವ ಒಂದು ಗುಹಾ ದೇವಾಲಯ. ಒಂದು ನಂಬಿಕೆಯ ಪ್ರಕಾರ, ಹಿಂದೂ ದೇವರು, ಶಿವನು ತಾನು ಕೇದಾರ್ನಾಥ್ ಗೆ ಹೋಗುವ ದಾರಿಯಲ್ಲಿ ಈ ಗುಹೆಯಲ್ಲಿ ಧ್ಯಾನ ಮಾಡಿದ್ದನು. ನಂತರ ಸ್ವಾಭಾವಿಕವಾಗಿ ಇಲ್ಲಿ ಶಿವನ ವಿಗ್ರಹವು ನಿರ್ಮಾಣವಾಯಿತು ಎಂದು ಹೇಳಲಾಗುತ್ತದೆ. ಮಹಾಶಿವರಾತ್ರಿಯ ಮಂಗಳಕರ ಸಮಯದಲ್ಲಿ ಇಲ್ಲಿ ಜಾತ್ರೆಯನ್ನು ಆಯೋಜಿಸಲಾಗುತ್ತದೆ. ಅನೇಕ ಭಕ್ತರು ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳುಗಳಲ್ಲಿ ಪ್ರಾರ್ಥನೆಗಳನ್ನು ಸಲ್ಲಿಸಲು ಇಲ್ಲಿಗೆ ಬರುತ್ತಾರೆ.


Click it and Unblock the Notifications