Search
  • Follow NativePlanet
Share
ಮುಖಪುಟ » ಸ್ಥಳಗಳು » ರುದ್ರಪ್ರಯಾಗ್ » ಆಕರ್ಷಣೆಗಳು » ಚಂದ್ರಶಿಲಾ

ಚಂದ್ರಶಿಲಾ, ರುದ್ರಪ್ರಯಾಗ್

1

ಚಂದ್ರಶಿಲಾ, ಸಮುದ್ರ ಮಟ್ಟದಿಂದ 4000 ಮೀಟರ್ ಎತ್ತರದಲ್ಲಿ ನೆಲೆಗೊಂಡಿರುವ ಒಂದು ಅದ್ಭುತ ಪ್ರವಾಸಿ ತಾಣವಾಗಿದೆ. ಗಡ್ವಾಲ್ ಹಿಮಾಲಯ ಶ್ರೇಣಿಗಳ ಭಾಗದಲ್ಲಿರುವ ಈ ಸ್ಥಳ ಹತ್ತಿರದ ಸರೋವರಗಳು, ಹುಲ್ಲುಗಾವಲುಗಳು, ನಂದಾದೇವಿ, ತ್ರಿಶೂಲ್, ಕೇದಾರ, ಬಂದರ್ ಪುಂಚ್, ಚೌಖಂಬಾ ಶಿಖರಗಳ ಮೋಡಿಮಾಡುವ ವೀಕ್ಷಣೆಗಳನ್ನು ಒದಗಿಸುತ್ತದೆ. ಒಂದು ದಂತಕಥೆಯ ಪ್ರಕಾರ, ಇಲ್ಲಿ ಭಗವಾನ್ ರಾಮನು ರಾಕ್ಷಸ ರಾಜ ರಾವಣನ ಸಂಹಾರಮಾಡಿದ ನಂತರ ಇಲ್ಲಿ ಬಂದು ಧ್ಯಾನಾಸಕ್ತನಾಗಿದ್ದನು ಎಂದು ಹೇಳಲಾಗುತ್ತದೆ. ಅಲ್ಲದೇ ಇದು ಭಗವಾನ್ ಚಂದ್ರನ ತಪಸ್ಸಿನ ಜಾಗ ಎಂದೂ ನಂಬಲಾಗಿದೆ.

ಪ್ರವಾಸಿಗರು ಈ ಪ್ರದೇಶದಲ್ಲಿ ಸ್ಕೀಯಿಂಗ್ ಚಟುವಟಿಕೆಯನ್ನು ಅನುಭವಿಸಬಹುದು ಮತ್ತು ಚಾರಣವನ್ನೂ ಮಾಡಬಹುದು. ಚಂದ್ರಶಿಲಾ ಚಾರಣ ಮಾರ್ಗವು ಇಲ್ಲಿನ ಅತ್ಯಂತ ಜನಪ್ರಿಯ ಚಾರಣ ಮಾರ್ಗಗಳಲ್ಲಿ ಒಂದಾಗಿದೆ. ಈ ಯಾತ್ರೆಯ ಮಾರ್ಗವು ಚೊಪ್ತಾದಿಂದ ಆರಂಭವಾಗಿ ತುಂಗಾನಾಥ ವರೆಗೆ 5 ಕಿ. ಮೀ ದೂರವನ್ನು ಆವರಿಸುವುದು. ನಿರಂತರ ಕಡಿದಾದ ಚಾರಣ ಮಾರ್ಗದದಲ್ಲಿ ನಿರಂತರವಾಗಿ ಹತ್ತುವುದು ಕಠಿಣ ಎನಿಸುತ್ತದೆ. ಆದಾಗ್ಯೂ ಚಳಿಗಾಲದಲ್ಲಿ ಈ ಮಾರ್ಗವು ಮುಚ್ಚಲ್ಪಡುತ್ತದೆ. ಆದರೂ ಈ ಸ್ಥಳವನ್ನು ತಲುಪಲು ಡಿಯೋರಿಯಾ ತಾಲ್- ದುಗ್ಗಲ್ ಬಿಟ್ಟಾ - ತುಂಗಾನಾಥ್ - ಚಂದ್ರಶಿಲಾ ಪರ್ಯಾಯ ಚಾರಣ ಮಾರ್ಗದ ಮೂಲಕವೂ ತಲುಪಬಹುದು.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed