ಬಿಳಿ ನೀರಿನ ರಾಫ್ಟಿಂಗ್, ರಿಷಿಕೇಶದ ಒಂದು ಪ್ರಸಿದ್ದ ಸಾಹಸ ಚಟುವಟಿಕೆಯಾಗಿದ್ದು ನಗರಕ್ಕೆ ಭೇಟಿ ನೀಡುವ ಸಾಹಸಪ್ರಿಯ ಪ್ರವಾಸಿಗರೆಲ್ಲರಿಗೂ ಇದು ಇಷ್ಟ. ಇಲ್ಲಿನ ಗಂಗಾನದಿಯು ಮಧ್ಯಮ ಮತ್ತು ಅಬ್ಬರದ ಅಲೆಗಳೆರಡನ್ನೂ ಹೊಂದಿದ್ದು ತರಬೇತಿ ಹೊಂದಿದ ಹಾಗು ತರಬೇತಿ ಇಲ್ಲದ ಎಲ್ಲರಿಗೂ ರಾಫ್ಟಿಂಗ್ ಉತ್ತಮ ಅನುಭವ ನೀಡುತ್ತದೆ. ವೃತ್ತಿನಿರತ ಅನಿಭವೀ ರಾಫ್ಟರ್ ಗಳು ಧೈರ್ಯಕ್ಕೆ ಜೊತೆಗಿದ್ದೇ ಇರುತ್ತಾರೆ. ಥ್ರಿಲ್ ನ ಮಜಾ ಅನುಭವಿಸೋಕೆ ರಾಷ್ಟ್ರೀಯ , ಅಂತಾರಾಷ್ಟ್ರೀಯ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಸೆಪ್ಟೆಂಬರ್ ನಿಂದ ನವೆಂಬರ್ ಹಾಗೂ ನವೆಂಬರ್ ನಿಂದ ಮಾರ್ಚ್ ವರೆಗೆ ಇಲ್ಲಿ ಭೇಟಿ ನೀಡುವುದಕ್ಕೆ ಸೂಕ್ತ.


Click it and Unblock the Notifications