ತ್ರಿವೇಣಿ ಸಂಗಮದಲ್ಲಿ ಗಂಗಾ, ಯಮುನಾ ಮತ್ತು ಸರಸ್ವತಿ ಪವಿತ್ರ ನದಿಗಳು ಸಂಗಮಗೊಳ್ಳುತ್ತವೆ. ರಿಷಿಕೇಶದ ದೇವಸ್ಥಾನಗಳಿಗೆ ಭೇಟಿ ನೀಡುವ ಮುನ್ನ ಯಾತ್ರಾರ್ಥಿಗಳು ಈ ಘಾಟಿನಲ್ಲಿ ಮುಳುಗಿ ಸ್ನಾನ ಮಾಡಿ ತೆರಳುತ್ತಾರೆ. ನಂಬಿಕೆಯ ಪ್ರಕಾರ, ಈ ನದಿಯಲ್ಲಿ ಮುಳುಗೆದ್ದರೆ ಮಾನವನ ಪಾಪಗಳೆಲ್ಲವೂ ನಾಶವಾಗುತ್ತವೆ ಎನ್ನಲಾಗುತ್ತದೆ. ಸಂಜೆಯ ಸಮಯದಲ್ಲಿ ಇಲ್ಲಿ ಮಹಾರತಿ ಪೂಜೆಗಾಗಿ ಲಕ್ಷಾಂತರ ಭಕ್ತರು ಒಂದೆಡೆ ಸೇರುತ್ತಾರೆ. ಭಕ್ತಿಯ ಸಂಕೇತವಾಗಿ ಹೂವು ತುಂಬಿದ ಎಣ್ಣೆ ದೀಪಗಳ ದೊನ್ನೆಯನ್ನು ನದಿಯಲ್ಲಿ ತೇಲಿಬಿಡುತ್ತಾರೆ. ಸತ್ತವರ ಆತ್ಮಶಾಂತಿಗಾಗಿ ಪಿಂಡ ಶ್ರಾದ್ದ ಆಚರಣೆಯೂ ಇಲ್ಲಿ ಮಾಡಲಾಗುತ್ತದೆ.


Click it and Unblock the Notifications