ಶಾಪಿಂಗ್ ಮಾಡುವುದನ್ನೂ ಕೂಡ ರಿಷಿಕೇಶದಲ್ಲಿ ಪ್ರವಾಸಿಗರು ಆಸ್ವಾದಿಸುತ್ತಾರೆ. ಇಲ್ಲಿಗೆ ಬಂದ ಪ್ರವಾಸಿಗರು ರುದ್ರಾಕ್ಷಿ, ಹಿಂದೂ ದೇವತೆಗಳ ಮೂರ್ತಿಗಳು, ನಟರಾಜ ಶಿಲ್ಪ ಮತ್ತು ಧಾರ್ಮಿಕ ಪುಸ್ತಕಗಳನ್ನು ಖರೀದಿಸುತ್ತಾರೆ. ಚಳಿಗಾಲದ ವಸ್ತ್ರಗಳು, ಕುರ್ತಾ, ನಾಜೂಕು ನೇಯ್ಗೆಯ ಸಲ್ವಾರ್ ಕಮೀಜ್ ಗಳನ್ನು ಕೊಂಡುಕೊಳ್ಳುವುದಕ್ಕೆ ಜನ ಮುಗಿಬೀಳುತ್ತಾರೆ. ಹವಳ, ಮುತ್ತು, ಚಿಪ್ಪುಗಳಿಂದ ಮಾಡಿದ ಗುಡಿ ಕೈಗಾರಿಕೆಯ ಉತ್ಪನ್ನಗಳೂ ಇಲ್ಲಿ ಲಭ್ಯ.


Click it and Unblock the Notifications