ರಾಜಾಜಿ ರಾಷ್ಟ್ರೀಯ ಉದ್ಯಾನವನ ರಿಷಿಕೇಶದಿಂದ 6 ಕಿಲೋ ಮೀಟರ್ ದೂರದಲ್ಲಿದೆ. 820.42 ಸ್ಕೇ.ಕಿ.ಮೀ ವಿಸ್ತಾರದಲ್ಲಿ ಈ ಉದ್ಯಾನ ಹರಡಿದೆ. ಮೋತಿಚೂರ್ ಉದ್ಯಾನ, ಚಿಲ್ಲಾ ಉದ್ಯಾನ ಮತ್ತು ರಾಜಾಜಿ ಉದ್ಯಾನಗಳೆಂಬ ಮೂರು ಉದ್ಯಾನವನಗಳು ಈ ರಾಷ್ಟ್ರೀಯ ಉದ್ಯಾನದಲ್ಲಿದೆ. ಉದ್ಯಾನವನಕ್ಕೆ ಸ್ವಾತಂತ್ರ್ಯ ಹೋರಾಟಗಾರ ಸಿ.ರಾಜಗೋಪಾಲಾಚಾರಿಯವರ ಹೆಸರಡಿಲಾಗಿದೆ. ಇಲ್ಲಿ 315 ತಳಿಯ ಪಕ್ಷಿಗಳು ಮತ್ತು 23 ತಳಿಯ ಸಸ್ತನಿಗಳಿವೆ. ಏಷಿಯನ್ ಆನೆಗಳು, ಹುಲಿಗಳು, ಕರಡಿ, ನಾಗರಹಾವು, ಸಾಂಬಾರ್ ಗಳು ಮತ್ತಿತರ ಪ್ರಾಣಿಗಳನ್ನು ಇಲ್ಲಿ ಕಾಣಬಹದು. ಗಂಗಾನದಿ ಇಲ್ಲಿಂದ 24 ಕಿಲೋ ಮೀಟರ್ ದೂರದಲ್ಲಿ ಹರಿಯುತ್ತದೆ.


Click it and Unblock the Notifications