ನೀಲಕಂಠ ಮಹಾದೇವ ದೇವಸ್ಥಾನ ಪಂಕಜ ಮತ್ತು ಮಧುಮತಿ ನದಿ ದಂಡೆಯ ಮೇಲಿರುವ ಪ್ರಮುಖ ಧಾರ್ಮಿಕ ಕ್ಷೇತ್ರ. ಸಮುದ್ರ ಮಟ್ಟದಿಂದ 1330 ಮೀಟರ್ ಎತ್ತರದಲ್ಲಿರುವ ದೇವಸ್ಥಾನವು ವಿಷ್ಣುಕೂಟ, ಬ್ರಹ್ಮಕೂಟ ಮತ್ತು ಮಣಿಕೂಟ ಬೆಟ್ಟಗಳ ಮನಮೋಹಕ ದೃಶ್ಯವನ್ನು ತೆರೆದಿಡುತ್ತದೆ. ಪರಮಾತ್ಮ ಶಿವ ವಿಷವನ್ನು ಕುಡಿದು ತನ್ನ ಗಂಟಲಿನಲ್ಲಿಯೇ ಹಿಡಿದಿಟ್ಟ ಪುರಾಣದ ಘಟನೆ ಇಲ್ಲಿಯೇ ನಡೆದ ಕಾರಣಕ್ಕೆ ನೀಲಕಂಠ ಮಹಾದೇವ ದೇವಸ್ಥಾನ ಎಂಬ ಹೆಸರು ಬಂದಿದೆ.
ಶ್ರಾವಣ ಮಾಸದಲ್ಲಿ ಲಕ್ಷಾಂತರ ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ. ಈ ಮಾಸ ಶಿವನ ಪೂಜೆಗೆ ಸೂಕ್ತವಾದ ಕಾಲ. ಹಿಂದೂ ಪಂಚಾಂಗದ ಫಾಲ್ಗುಣ ಮಾಸದ ಶಿವರಾತ್ರಿಯಂದೂ ಭಕ್ತರು ಇಲ್ಲಿಗೆ ಭೇಟಿ ನೀಡಿ ಪೂಜೆ ಸಲ್ಲಿಸುತ್ತಾರೆ.


Click it and Unblock the Notifications