ಬಿನ್ಸಾರ್ ಮಹಾದೇವ ದೇವಸ್ಥಾನವು ರಾನಿಖೇತ್ ನಿಂದ15 ಕಿ.ಮೀ ದೂರದಲ್ಲಿರುವ ಪ್ರಸಿದ್ಧ ತಾಣವಾಗಿದೆ. ಸಮುದ್ರ ಮಟ್ಟದಿಂದ ಸುಮಾರು 2480 ಮೀ ಎತ್ತರದಲ್ಲಿದೆ. ಇಲ್ಲಿ ಹಿಂದೂ ದೇವತೆ ಶಿವನನ್ನು ಪೂಜಿಸಲಾಗುತ್ತದೆ. ಇದನ್ನು ಸುಮಾರು ಹತ್ತನೆಯ ಶತಮಾನದಲ್ಲಿ ಕಟ್ಟಲಾಗಿದೆ. ಒಂದು ನಂಬಿಕೆಯ ಪ್ರಕಾರ, ಈ ದೇವಾಲಯವನ್ನು ಕೇವಲ ಒಂದೇ ದಿನದಲ್ಲಿ ಕಟ್ಟಲಾಗಿದೆ. ವೈಕುಂಠ ಚತುರ್ದಶಿ ದಿನದಂದು ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಭೇಟಿ ನೀಡಿ ಕೈಯಲ್ಲಿ ದೀಪ ಹಚ್ಚಿ ಸಂತಾನ ಪ್ರಾಪ್ತಿಗಾಗಿ ಬೇಡಿಕೊಳ್ಳುತ್ತಾರೆ.
ಇಲ್ಲಿ ಮಹಿಷಮರ್ದಿನಿ, ಹರ ಗೌರಿ ಮತ್ತು ಗಣೇಶನ ವಿಗ್ರಹಗಳಿವೆ. ಮಹಿಷಮರ್ದಿನಿ ವಿಗ್ರಹವನ್ನು ನಾಗರಿ ಲಿಪಿಯಲ್ಲಿ ಬರೆಯಲಾಗಿದೆ. ಇದು ಸುಮಾರು 9 ನೇಯ ಶತಮಾನದ್ದು ಎಂದು ಇದರಿಂದಲೇ ತಿಳಿಯುತ್ತದೆ. ಇದನ್ನು ಬಿಂದೇಶ್ವರ ದೇವಾಲಯ ಎಂದೂ ಕರೆಯಲಾಗುತ್ತದೆ. ಪಿತು ಎಂಬ ರಾಜ ತನ್ನ ತಂದೆ ಬಿಂದು ಗಾಗಿ ಈ ದೇವಾಲಯ ಕಟ್ಟಿದ ಕಾರಣ ಹೀಗೆ ಹೆಸರು ಪಡೆದುಕೊಂಡಿದೆ.


Click it and Unblock the Notifications