ಭಾಲು ಜಲಾಶಯ ಒಂದು ಸಣ್ಣ ಸರೋವರವಾಗಿದ್ದು ಚೌಬಟಿಯಾದ ಉದ್ಯಾನದಿಂದ ಸುಮಾರು 3 ಕಿ.ಮೀ ದೂರದಲ್ಲಿದೆ. ಇದು ಹಿಮಾವೃತ ಹಿಮಾಲಯದ ಅತ್ಯಂತ ಸುಂದರವಾದ ದೃಶ್ಯಗಳನ್ನು ಸವಿಯುವ ಅವಕಾಶ ಒದಗಿಸುತ್ತದೆ. ಇಲ್ಲೇ ಇರುವ ಉದ್ಯಾನವದಲ್ಲಿ ಸ್ವಲ್ಪ ಹೊತ್ತು ಆರಾಮವಾಗಿ ಕಳೆಯಲೂ ಇದು ಸೂಕ್ತ ಸ್ಥಳವಾಗಿದೆ. ಇದನ್ನು ಬ್ರಿಟೀಷರು 1903 ರಲ್ಲಿ ಅಭಿವೃದ್ಧಿ ಪಡಿಸಿದರು. ಇದು ವರ್ಷಪೂರ್ತಿ ಪ್ರವಾಸಿಗರಿಗೆ ತೆರೆದಿರುತ್ತದೆ.


Click it and Unblock the Notifications