Search
  • Follow NativePlanet
Share
ಮುಖಪುಟ » ಸ್ಥಳಗಳು » ರಾಯಸೇನ್ » ಆಕರ್ಷಣೆಗಳು » ಭೀಮ್‍ಬೆಟ್ಕಾ

ಭೀಮ್‍ಬೆಟ್ಕಾ, ರಾಯಸೇನ್

3

ಮಹಾಭಾರತ ಕಾವ್ಯದ ಪತ್ರವಾದ ಭೀಮನ ಹೆಸರನ್ನು ಹೊಂದಿರುವ ಭೀಮ್‍ಬೆಟ್ಕಾ, ಭಾರತದಲ್ಲಿ ಕಂಡುಬರುವ ಪ್ರಾರಂಭಿಕ ಹಂತದ ಗುಹೆಗಳಲ್ಲಿ ಒಂದಾಗಿದೆ. ಇದು ಯುನೆಸ್ಕೊ(UNESCO) ದಿಂದ ಮಾನ್ಯತೆ ಪಡೆದ ವಿಶ್ವಪಾರಂಪರಿಕ ತಾಣವಾಗಿದೆ. ಮಧ್ಯ ಪ್ರದೇಶದ ರಾಯಸೇನ್ ಜಿಲ್ಲೆಯಲ್ಲಿ ಭೀಮ್‍ಬೆಟ್ಕಾ ಗುಹೆಗಳು ಮತ್ತು ಕಲ್ಲಿನ ರಚನೆಗಳು ಕಂಡುಬರುತ್ತದೆ. ಈ ತಾಣವು ವಿಂಧ್ಯ ಪರ್ವತ ಶ್ರೇಣಿಗಳಿಂದ ಸುತ್ತುವರೆದಿದೆ.

ಇಲ್ಲಿ ಸುಮಾರು 600 ಕ್ಕೂ ಅಧಿಕ ಸಂಖ್ಯೆಯಲ್ಲಿ ಗುಹೆಗಳಿವೆ ಮತ್ತು ಈ ಗುಹೆಗಳಲ್ಲಿ ಅಂದಿನ ಪುರಾತನ ಯುಗದ ಜನರ ಜೀವನ ಶೈಲಿಯನ್ನು ಬಿಂಬಿಸುವ ವರ್ಣಚಿತ್ರಗಳನ್ನು ಕಾಣಬಹುದಾಗಿದೆ. ಕೇವಲ ಮನುಷ್ಯ ಮಾತ್ರವಲ್ಲದೆ ಪ್ರಾಣಿಗಳಾದ ಹುಲಿ, ನಾಯಿ, ಸರಿಸೃಪಗಳು, ಆನೆ ಮತ್ತು ಇತರೆ ಜಾನುವಾರುಗಳ ವರ್ಣಚಿತ್ರಗಳನ್ನು ಕಾಣಬಹುದು. ನೈಸರ್ಗಿಕವಾದ ಬಣ್ಣಗಳಿಂದ ಇವುಗಳನ್ನು ರಚಿಸಲಾಗಿದೆ. ಇವು ಸಸ್ಯಜನ್ಯದ ಬಣ್ಣಗಳಾಗಿದ್ದು ಗುಹೆಯ ಒಳಗೋಡೆಗಳಲ್ಲಿ ಇವುಗಳನ್ನು ರಚಿಸಲಾಗಿದೆ.

ಮೊದಮೊದಲು ಇವುಗಳನ್ನು ಬೌದ್ಧ ಗುಹೆಗಳೆಂದು ಪರಿಗಣಿಸಲಾಗಿತ್ತು. ತದನಂತರ ಭಾರತೀಯ ಪುರಾತತ್ವ ಶಾಸ್ತ್ರಜ್ಞರಾದ ವಿ.ಎಸ್.ವಾಕಂಕರ್ ಅವರು ಸಮೀಕ್ಷೆ ನಡೆಸಿ ಮತ್ತಷ್ಟು ಕಲ್ಲಿನ ರಚನೆಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದರು. ಕೌತುಕದ ವಿಷಯವೆಂದರೆ ಈ ರಚನೆಗಳು ಪೂರ್ವ ಐತಿಹಾಸಿಕ ಯುಗಕ್ಕೆ ಸಂಬಂಧಪಟ್ಟದ್ದಾಗಿವೆ. ವರ್ಣಚಿತ್ರಗಳ ಶೈಲಿಗಳು ಪ್ರಾಚೀನ ಶಿಲಾಯುಗದಿಂದ ಮಧ್ಯ ಯುಗದವರೆಗೂ ಕೊಂಡೊಯ್ಯುತ್ತವೆ.

ಈ ರೀತಿಯಾಗಿ ಭೀಮ್‍ಬೆಟ್ಕಾ ಗುಹೆಗಳು ನಮ್ಮನ್ನು ಕಾಲದ ವಿವಿಧ ಯುಗಗಳಿಗೆ ಕೊಂಡೊಯ್ದು ಮೂಕವಿಸ್ಮಿತರನ್ನಾಗಿ ಮಾಡುವುದರಲ್ಲಿ ಯಾವುದೆ ಸಂಶಯವಿಲ್ಲ. ಆದರಿಂದ ಇದೊಂದು ಸಾಂಸ್ಕೃತಿಕ ಭಾರತದ ರಾಷ್ಟ್ರೀಯ ಸಂಪತ್ತು ಎಂದರೆ ತಪ್ಪಾಗಲಾರದು.

One Way
Return
From (Departure City)
To (Destination City)
Depart On
11 Mar,Wed
Return On
12 Mar,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Mar,Wed
Check Out
12 Mar,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Mar,Wed
Return On
12 Mar,Thu