ಬಲಿಘಾಯ್ ಬೀಚ್ ಪುರಿಯಿಂದ ಕೇವಲ 8 ಕಿ.ಮೀ.ದೂರದಲ್ಲಿರುವ ಪುರಿ-ಕೊನಾರ್ಕ್ ಮರಿನ್ ಡ್ರೈವ್ ರಸ್ತೆಯ್ಲಿದೆ. ಹೆಚ್ಚು ಜನಪ್ರಿಯವಲ್ಲದ ಈ ಬೀಚ್ ವೀಕ್ಷಣೀಯ ಯೋಗ್ಯವಾಗಿದೆ. ನದಿಯ ಪ್ರಶಾಂತವಾದ ನೀರು ಭೋರ್ಗರೆಯುವ ಸಮುದ್ರದೊಂದಿಗೆ ಸೇರುವುದನ್ನು ನೋಡಬಹುದು. ಈ ಅದ್ಭುತವನ್ನು ನೋಡಲು ರಾಷ್ಟ್ರದೆಲ್ಲೆಡೆಯಿಂದ ಪ್ರವಾಸಿಗರು ಆಗಮಿಸುತ್ತಾರೆ ಮತ್ತು ವಿದೇಶಿಗರು ಇದನ್ನು ನೋಡಿ ಮಂತ್ರಮುಗ್ಧರಾಗಿದ್ದಾರೆ.
ಇಲ್ಲಿನ ಪ್ರಶಾಂತ ವಾತಾವರಣ ಮತ್ತು ಸಮುದ್ರ ತೀರಕ್ಕೆ ನುಗ್ಗಿ ಬರುವ ಅಲೆಗಳು ಈ ಸ್ಥಳದ ಸೌಂದರ್ಯವನ್ನು ಬಣ್ಣಿಸುತ್ತದೆ. ಸನ್ ಬಾತಿಂಗ್ ಮಾಡಲು ಆಸಕ್ತಿಯಿರುವವರಿಗೆ ಇದು ಅತ್ಯುತ್ತಮ ಸ್ಥಳವಾಗಿದೆ.ಇಲ್ಲಿ ಮೈನವಿರೇಳಿಸುವ ಬೋಟ್ ರೈಡ್ ಕೂಡ ಮಾಡಿಸಲಾಗುತ್ತದೆ. ಇಲ್ಲಿ ಪ್ರವಾಸಿಗರು ನೀರಿನಲ್ಲಿ ಈಜಾಡಿ ತಮ್ಮ ದೇಹ, ಮನಸ್ಸು ಮತ್ತು ಆತ್ಮವನ್ನು ನವಯೌವನಗೊಳಿಸಬಹುದಾಗಿದೆ. ಶುದ್ಧ ನೀರು ಮತ್ತು ಬಂಗಾರದ ಬಣ್ಣದ ಮರಳಿನ ಮೇಲೆ ನಡೆಯುವುದು ಮನಸ್ಸಿಗೆ ಸಂತೋಷವನ್ನು ನೀಡುತ್ತದೆ.


Click it and Unblock the Notifications