ಪೂವಾರ್ ಸಮುದ್ರದಂಡೆ ಪೂರ್ತಿಯಾಗಿ ಪ್ರಶಾಂತವಾಗಿದ್ದು ಸಂಪೂರ್ಣ ಸಮುದ್ರದ ನೀರಿನಿಂದ ಮತ್ತು ಹಚ್ಚ ಹಸಿರಾದ ಪಾಮ್ ಮರಗಳಿಂದ ಆವೃತವಾಗಿದೆ. ಪೂವಾರ್ ಹಳ್ಳಿ ತಿರುವನಂತಪುರಂನಿಂದ ಕೇವಲ 38 ಕಿಲೋಮೀಟರ್ ದೂರದಲ್ಲಿದ್ದು, ಪೂವಾರ್ ನಿಂದ ಕೇವಲ 15 ನಿಮಿಷದ ದೋಣಿ ವಿಹಾರದ ಮೂಲಕ ನೈಸರ್ಗಿಕ ಬಂದರು ವಿಳಿನಂ ತಲುಪಬಹುದು. ಪೂವರ್ ಸಮುದ್ರ ದಂಡೆ ಅಳಿವೆಯಿಂದಾಗಿ ಕೋವಲಂ ಬೀಚಿನಿಂದ ಬೇರ್ಪಟ್ಟಿದೆ. ಈ ಅಳಿವೆ ಪ್ರದೇಶ ಸರೋವರ ಅಥವಾ ನದಿಯ ನೀರು ಸಮುದ್ರದೊಂದಿಗೆ ಕೂಡಿಕೊಳ್ಳುವ ಭೂಭಾಗ. ಅಲೆಗಳ ಉಬ್ಬರವಿಳಿತದೊಂದಿಗೆ ಈ ಭೂಭಾಗ ಸಮುದ್ರದೊಂದಿಗೆ ಸೇರುತ್ತದೆ.
ಇಲ್ಲಿ ಹಲವಾರು ರೆಸಾರ್ಟ್ ಗಳಿದ್ದು ಸಮುದ್ರದಂಡೆಯ ಮೇಲೆ ಸೇವೆಗೆ ಸಿದ್ದವಿರುತ್ತವೆ. ನಗರ ಜೀವನದ ಒತ್ತಡ ಹಾಗೂ ಏಕತಾನತೆಯಿಂದ ದೂರವುಳಿದು ನೀವಿಲ್ಲಿ ನಿಮ್ಮ ಬದುಕಿನ ಮಹತ್ವದ ಕ್ಷಣಗಳನ್ನು ಸಾರ್ಥಕಗೊಳಿಸಿಕೊಳ್ಳಬಹುದು. ಆಯುರ್ವೇದಿಕ್ ಚಿಕಿತ್ಸೆಗಳು, ಶಾಪಿಂಗ್, ಉತ್ತಮವಾದ ಆಹಾರ ಮತ್ತು ಇಲ್ಲಿನ ಪ್ರಾದೇಶಿಕತೆಯಿಂದ ಅತ್ಯುತ್ತಮ ಸತ್ಕಾರ ದೊರೆಯುವುದು ಗ್ಯಾರಂಟಿ. ಅಬ್ಬರದ ಅಲೆಗಳಿಂದಾಗಿ ಇಲ್ಲಿನ ಸಮುದ್ರದಲ್ಲಿ ಈಜುವುದು ಅಪಾಯ.


Click it and Unblock the Notifications