ಪೊನ್ಮುಡಿಗೆ ಭೇಟಿ ನೀಡುವ ಪ್ರವಾಸಿಗರನ್ನು ಸೆಳೆಯುವ ಇನ್ನೊಂದು ಹೆಚ್ಚುವರಿ ತಾಣ ಮಿನಿ ಜ್ಯೂ. ಪೊನ್ಮುಡಿಗೆ ಅತ್ಯಂತ ಸಮೀಪದಲ್ಲಿಯೇ ಈ ಜ್ಯೂ ಇದೆ. ಪೊನ್ಮುಡಿ ಅರಣ್ಯದ ಪೂರ್ವ ಭಾಗದಲ್ಲಿ ಇದು ನೆಲೆಗೊಂಡಿದೆ. ಇಲ್ಲಿಗೆ ಆರಾಮವಾಗಿ ನಡೆದು ಹೋಗಬಹುದು. ಬಾರಾಸಿಂಗ ಅಥವಾ ಉದ್ದ ಕೋಡಿನ ಜಿಂಕೆ ಈ ಮಿನಿ ಜ್ಯೂನ ಪ್ರಮುಖ ಆಕರ್ಷಣೆ.
ಅರಣ್ಯಕ್ಕೆ ಅತ್ಯಂತ ಸಮೀಪದಲ್ಲಿರುವ ಈ ಜ್ಯೂ ಪ್ರವಾಸಿಗರಿಗೆ ಒಂದು ಮಹೋನ್ನತ ಅನುಭವ ನೀಡುತ್ತದೆ. ಮಕ್ಕಳನ್ನು ಇಷ್ಟಪಡಿಸುವ ತಾಣವಾಗಿರುವ ಈ ಜ್ಯೂ, ನಿಜಕ್ಕೂ ಅವರಿಗೆ ಸ್ವರ್ಗಸದೃಶವಾಗಿ ಕಾಣಿಸುವಲ್ಲಿ ಅನುಮಾನವಿಲ್ಲ. ಮಕ್ಕಳಿಗೆ ತೋರಿಸಬಹುದಾದ ಅತ್ಯುತ್ತಮ ತಾಣ ಎನಿಸಿಕೊಂಡಿದೆ. ವರ್ಷದ ಎಲ್ಲಾ ಕಾಲದಲ್ಲಿಯೂ ಈ ಜ್ಯೂ ತೆರೆದಿರುತ್ತದೆ. ಭಾವಚಿತ್ರ ತೆಗೆಸಿಕೊಳ್ಳುವುದು, ವಿಹರಿಸುವುದು, ಇತ್ಯಾದಿ ಚಟುವಟಿಕೆ ನಡೆಸಲು ಇದು ಉತ್ತಮ ಸ್ಥಳ. ಇಲ್ಲಿ ಜನ ಸದಾ ಆಸಕ್ತಿ ಭರಿತ ಚಟುವಟಿಕೆಯಲ್ಲಿ ತೊಡಗಿಕೊಳ್ಳುವ ಅವಕಾಶ ಹೇರಳವಾಗಿದೆ.
ಈ ಮಿನಿ ಜ್ಯೂಗೆ ಭೇಟಿ ನೀಡುವವರು ಸಾಕಷ್ಟು ಅನುಭವವನ್ನು ಸಂಪಾದಿಸಬಹುದು. ಇಲ್ಲಿ ಸಾಕಷ್ಟು ವನ್ಯಜೀವಿ ಅದ್ಭುತವನ್ನು ಕಾಣಬಹುದು. ಕುಟುಂಬ, ಮಕ್ಕಳು, ಜೋಡಿ, ಯುವಕರು ಹಾಗೂ ವನ್ಯಜೀವಿ ಪ್ರಿಯರಿಗೆ ಇದು ಉತ್ತಮ ತಾಣ.


Click it and Unblock the Notifications