Search
 • Follow NativePlanet
Share
ಮುಖಪುಟ » ಸ್ಥಳಗಳು » ಪೊನ್ಮುಡಿ » ಆಕರ್ಷಣೆಗಳು » ಗೋಲ್ಡನ್‌ ವ್ಯಾಲಿ

ಗೋಲ್ಡನ್‌ ವ್ಯಾಲಿ, ಪೊನ್ಮುಡಿ

1

ನದಿ ತೀರದ ಚಿತ್ರ ಹಾಗೂ ಇತರೆ ಆಕರ್ಷಕ ಚಿತ್ರಗಳನ್ನು ತೆಗೆಯಬಯಸುವವರಿಗೆ, ನೋಡುಗರಿಗೆ ಗೋಲ್ಡನ್‌ ವ್ಯಾಲಿ ಒಂದು ಮಾದರಿ ತಾಣ. ನದಿಯ ಅಲೆ, ತೀರ, ಹಿಮಗಟ್ಟಿದಂತ ತಂಪು ನೀರು, ಹಸಿರಾದ ಮರಗಳು ಈ ಭಾಗದಲ್ಲಿ ಗಮನ ಸೆಳೆಯುತ್ತವೆ. ರಜೆಗಾಗಿ ಬಂದವರ ಉತ್ಸಾಹವನ್ನು ಇಮ್ಮಡಿಗೊಳಿಸಿ, ಸಾರ್ಥಕತೆ ಪಡೆಯುತ್ತವೆ. ಪೊನ್ಮುಡಿಗೆ ಬಂದವರ್ಯಾರೂ ಗೋಲ್ಡನ್‌ ವ್ಯಾಲಿಯನ್ನು ಕಾಣದೇ ಹಿಂತಿರುಗುವುದಿಲ್ಲ. ತಪ್ಪದೇ ಭೇಟಿ ನೀಡುತ್ತಾರೆ. ವನ್ಯ ಸಂಪತ್ತು ಹಾಗೂ ಪರಿಸರ, ಕಣ್ಣು ಹಾಯಿಸಿದಷ್ಟಕ್ಕೂ ಗೋಚರಿಸುವ ಹಸಿರು ವಲಯ ಪ್ರತಿಯೊಬ್ಬರನ್ನೂ ಸೆಳೆಯುತ್ತದೆ. ಅಚ್ಚಳಿಯದ ನೆನಪಾಗಿ ಮನಸ್ಸಿನಲ್ಲಿ ಅಚ್ಚೊತ್ತಿ ಬಿಡುತ್ತದೆ.

ಈ ವ್ಯಾಲಿಯ ಮಾರ್ಗವಾಗಿ ಹರಿದು ಹೋಗಿರುವ ನದಿ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ. ಅತ್ಯಂತ ಸುರಕ್ಷಿತವಾದ ಪ್ರದೇಶ ಇದಾಗಿದೆ. ನದಿಯಲ್ಲಿ ಆಟವಾಡಲು ಇದು ಸೂಕ್ತ ಅನುಕೂಲ ಹೊಂದಿದೆ. ಮಕ್ಕಳಿಗೂ ಇಷ್ಟವಾಗಬಲ್ಲ ರಮಣೀಯ ತಾಣವಾಗಿದೆ. ಕೌಟುಂಬಿಕ ಪ್ರವಾಸ, ಹನಿಮೂನ್‌ಗೆ ಗೋಲ್ಡನ್‌ ವ್ಯಾಲಿ ಪ್ರಶಸ್ತ ತಾಣ. ಇದರ ಜತೆ ಟ್ರೆಕ್ಕಿಂಗ್‌ ಪ್ರಿಯರಿಗೆ ಕಣಿವೆ ಇಳಿಯುವ ಹಾಗೂ ಏರುವ ಎರಡೂ ವಿಧದ ಅದ್ಭುತ ಅನುಭವ ನೀಡುತ್ತದೆ.

ಇಲ್ಲಿಗೆ ಸಮೀಪದಲ್ಲಿ ಯಾವುದೇ ಅಂಗಡಿಗಳು ಇಲ್ಲ. ಇದರಿಂದ ಪ್ರವಾಸಿಗರು ಇತ್ತ ಬರುವಾಗ ಅಗತ್ಯ ಆಹಾರ ಹಾಗೂ ನೀರನ್ನು ಜತೆಯಲ್ಲಿ ತರುವುದು ಅನಿವಾರ್ಯ. ಕುಟುಂಬವರ್ಗ ಹಾಗೂ ಜೋಡಿ ಹಕ್ಕಿಗಳಿಗೆ ಇದು ಅತ್ಯಂತ ಸಂತಸದಾಯಕ ಸ್ಥಳ. ಉತ್ತಮ ವಾತಾವರಣ ಗಮನ ಸೆಳೆಯುವ ಜತೆಗೆ ತಂಪಾದ ಗಾಳಿ, ಆಹ್ಲಾದಮಯ ವಾತಾವರಣ ಮಕ್ಕಳಿಂದ, ಮುದುಕರವರೆಗೆ ಎಲ್ಲರನ್ನೂ ಮೆಚ್ಚಿಸುತ್ತದೆ.

One Way
Return
From (Departure City)
To (Destination City)
Depart On
30 Nov,Mon
Return On
01 Dec,Tue
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
30 Nov,Mon
Check Out
01 Dec,Tue
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
30 Nov,Mon
Return On
01 Dec,Tue
 • Today
  Ponmudi
  31 OC
  88 OF
  UV Index: 7
  Haze
 • Tomorrow
  Ponmudi
  27 OC
  81 OF
  UV Index: 6
  Light rain shower
 • Day After
  Ponmudi
  26 OC
  79 OF
  UV Index: 6
  Patchy rain possible